ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಗೆ ವಿದ್ಯುತ್ ತಂತಿ ತಗುಲಿ ಬೆಂಕಿ: ರೈತನ ಕನಸು ಭಸ್ಮ

ಅಫಜಲಪುರ: ತಾಲೂಕಿನ ಕಲ್ಲೂರ ತಾಂಡಾ ಸಮೀಪದ ಸರ್ವೇ ನಂ. 467ರ ಜಮೀನಿನಲ್ಲಿ ಮಂಗಳವಾರ ಮಧ್ಯಾ ಹ್ನ 1 ಗಂಟೆ ಸುಮಾರಿಗೆ ಸಂಭವಿಸಿದ ಬೆಂಕಿ ಅವ ಘಡ ದಲ್ಲಿ ಮೂರು ಎಕರೆ ಕಬ್ಬಿನ ಬೆಳೆ ಸಂಪೂರ್ಣ ವಾಗಿ ಸುಟ್ಟು ಕರಕಲಾದ ಹೃದಯ ಕಲುಕುವ ಘಟನೆ ನಡೆದಿದೆ.
ಜಮೀನಿನ ಮಾಲೀಕರಾದ ಸಿದ್ದಪ್ಪ ಹಣಮಂತ್ರಾಯ ಶೇರಿಕಾರ ಅವರು ಸಾಲ–ಸೂಲ ಮಾಡಿಕೊಂಡು ಶ್ರಮಪಟ್ಟು ಬೆಳೆದಿದ್ದ ಕಬ್ಬು ಕಟಾವಿಗೆ ಬಂದಿರುವ ಸಂದರ್ಭದಲ್ಲಿ ಮೇಲಿನ ವಿದ್ಯುತ್ ತಂತಿ ಜೋತು ಬಿದ್ದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ನಾಶವಾಗಿದೆ.
ಬೆಂಕಿ ವೇಗವಾಗಿ ಹರಡಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನೆಯ ಕುರಿತು ಸಿದ್ದಪ್ಪರ ಪುತ್ರ ರಾಜಶೇಖರ ಸಿದ್ದಪ್ಪ ಶೇರಿಕಾರ ಮಾತನಾಡಿ,“ಕಷ್ಟು ಪಟ್ಟು ಸಾಲ–ಸೂಲ ಮಾಡಿ ಬೆಳೆದಿದ್ದ ಮೂರು ಎಕರೆ ಕಬ್ಬು ಕ್ಷಣದಲ್ಲಿ ಭಸ್ಮವಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಅಗ್ನಿಶಾಮಕ ಸಿಬ್ಬಂದಿಗಳಿಗೆ ಎಷ್ಟೇ ಬಾರಿ ಕರೆ ಮಾಡಿದರೂ ಸಮಯಕ್ಕೆ ಬಂದಿಲ್ಲ. ಬಂದಿದ್ದರೆ ನಮ್ಮ ಕಬ್ಬು ಉಳಿಯುತ್ತಿತ್ತು,” ಎಂದು ಆಕ್ರಂದಿಸಿದರು.
ಸ್ಥಳೀಯ ಮುಖಂಡ ಗುರುಶಾಂತ ಡಾಂಗೆ ಅವರು,“ಬೆಂಕಿ ತಗುಲುತ್ತಿದ್ದಂತೆಯೇ ಹಲವು ಬಾರಿ ಕರೆ ಮಾಡಿದರೂ ಅಗ್ನಿಶಾಮಕ ಇಲಾಖೆ ಸಮಯಕ್ಕೆ ಬರದ ಕಾರಣ ಕಬ್ಬು ಸಂಪೂರ್ಣ ಸುಟ್ಟು ಹೋಯಿತು. ಹೊಣೆಗಾರ ಸಿಬ್ಬಂದಿ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುಟ್ಟ ಕಬ್ಬಿಗಾಗಿ ಸರ್ಕಾ ರ ತಕ್ಷಣ ಪರಿಹಾರ ನೀಡಬೇಕು. ಜೊತೆಗೆ ಅರೆ–ಬರೆ ಸುಟ್ಟಿದ್ದರೂ ಉಳಿದಿರುವ ಕಬ್ಬನ್ನು ಸಕ್ಕರೆ ಕಾರ್ಖಾನೆ ಯವರು ತಕ್ಷಣ ಸ್ವೀಕರಿಸಬೇಕು,” ಎಂದು ಆಗ್ರಹಿಸಿದರು.
ತಪ್ಪಿದ ಭಾರಿ ಅನಾಹುತಬೆಂಕಿಯ ಜ್ವಾಲೆಗಳು ಧಗಧಗನೆ ಉರಿಯುತ್ತಿದ್ದಾಗ ತಾಂಡಾದ ನಿವಾಸಿಗಳು ಕೈಯಲ್ಲಿ ಬಕೆಟ್, ಕೊಡ, ಹಿಡುಕಿ ನೀರು ತಂದು ಬೆಂಕಿ ಆರಿಸಲು ಹರಸಾಹಸ ಪಟ್ಟರು. ಅವರ ಸಮಯಪ್ರಜ್ಞೆಯಿಂದ ಅಕ್ಕಪಕ್ಕದ ರೈತರ ಕಬ್ಬಿನ ಹೊಲಗಳು ಭಾರಿ ಅನಾಹುತದಿಂದ ತಪ್ಪಿದವು. “ನಾವು ಬಂದಿರಲಿಲ್ಲೊಂದರೆ ಬೆಂಕಿ ಇಡೀ ಕಬ್ಬಿನ ಬೆಳೆ ಸುಡುತ್ತಿತ್ತು,” ಎಂದು ನಿವಾಸಿಗಳು ನೋವಿನಿಂದ ನುಡಿದರು.
ಈ ಸಂದರ್ಭದಲ್ಲಿ ಶಾಂತಾಬಾಯಿ ಸಿದ್ದಪ್ಪ ಶೇರಿಕಾರ, ರತ್ನಾಬಾಯಿ ರಾಜಶೇಖರ ಶೇರಿಕಾರ, ದಿಲೀಪ ಅಂಬೂರೆ, ಸಂತೋಷ ಅಂಬೂರೆ, ಲಕ್ಷ್ಮೀಪುತ್ರ ಹರಳಯ್ಯ, ಜಗದೀಶ ಶೇರಿಕಾರ, ವಿನೋದ ರಾಠೋಡ ಸೇರಿದಂತೆ ಹಲವರು ಇದ್ದರು.ಸ್ಥಳೀಯ ರೈತರು ಸರ್ಕಾರ ನ್ಯಾಯಯುತ ಪರಿಹಾರ ನೀಡಬೇಕು, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಹೊಣೆಗಾರರನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.



