ಶರಣಬಸವೇಶ್ವರ ಸಂಸ್ಥಾನದಲ್ಲಿ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪನವರ ಜನ್ಮದಿನ ಮಹೋತ್ಸವ ಭವ್ಯ ಆಚರಣೆ

ವೀರಶೈವ ಲಿಂಗಾಯತ ನಾವು ಯುವಕರು ಧಾರ್ಮಿಕ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚೇಚ್ಚು ಪಾಲ್ಗೊಂಡು ಧರ್ಮ ಕಾವಲುಗರರಾಗಿ ನಿಲ್ಲಬೇಕಾದ ಅನಿವಾರ್ಯವಾಗಿದೆ- ದಯಾನಂದ ಪಾಟೀಲ, ಅಧಕ್ಷ್ಯರು,ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರ್ಗಿ.
ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ದೊಡ್ಡಪ್ಪ ಅಪ್ಪನವರ ಜನ್ಮದಿನದ ಪ್ರಯುಕ್ತ ಶ್ರೀ ಶರಣಬಸವೇಶ್ವರರ ಕರ್ತೃ ಗದ್ದುಗೆ ಯಲ್ಲಿ ಲಕ್ಷ ಬಿಲ್ವ ಪುಷ್ಪಾರ್ಚನೆ, ಸಾಮೂಹಿಕ ಲಿಂಗಪೂಜೆ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮಗಳನ್ನು ಭವ್ಯವಾಗಿ ಹಾಗೂ ಭಕ್ತಿಪೂರ್ಣವಾಗಿ ನೆರವೇರಿಸಲಾಯಿತು.
ಈ ದಿವ್ಯ ಕಾರ್ಯಕ್ರಮದ ಸಾನಿಧ್ಯವನ್ನು ಪಾಳಾದ ಗುರುಮೂರ್ತಿ ಶಿವಾಚಾರ್ಯರು ವಹಿಸಿಕೊಂಡು ಭಕ್ತರಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಹಾಗೂ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕ್ನೂರ್, ಕಾಂಗ್ರೆಸ್ ಮುಖಂಡ ನೀಲಕಂಠರು ಮೂಲೆಗೆ, ಚಲನಚಿತ್ರ ನಟ ಪ್ರಥಮ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲ್ ಕುಮಾರ್ ಬಿಡುವೆ, ಸಂಘದ ಆಡಳಿತಾಧಿಕಾರಿ ಅಲ್ಲಂಪ್ರಭು ದೇಶಮುಖ ಮಲ್ಲಿನಾಥ್ ನಾಗನಹಳ್ಳಿ, ವಿನೋದ್ ಪಾಟೀಲ್ ಸರಡಗಿ,ಶರಣ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಲಿಂಗಾಯತ ವೇದಿಕೆ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆಯ ಪದಾಧಿಕಾರಿಗಳಾದ ಯುವ ಮುಖಂಡ ಶ್ರೀಧರ್ ಎಂ. ನಾಗನಹಳ್ಳಿ, ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ್, ಉಪಾಧ್ಯಕ್ಷ ಕಲ್ಯಾಣರಾವ್ ಪಾಟೀಲ್ ಕಣ್ಣಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಮಹಾಗವಂಕರ್, ಕಾರ್ಯದರ್ಶಿಗಳು ಮಹೇಶ್ ಚಂದ್ರ ಪಾಟೀಲ್ ಕಣ್ಣಿ, ಗುರುರಾಜ್ ಅಂಬಾಡಿ, ಸಹ ಕಾರ್ಯದರ್ಶಿಗಳು ನಿಖಿಲ್ ಬಿಲಗುಂದಿ, ಪರಮೇಶ್ವರ ಯಳಮೆಲಿ, ಕಿರಣ್ ಕಣ್ಣಿ, ಜಿಲ್ಲಾ ಸಂಚಾಲಕರಾದ ಗುರುರಾಜ್ ಸುಂಟಿನೂರ್, ಪ್ರಜ್ವಲ್ ಕೊರಳ್ಳಿ, ಅಜಯ್ ರೆಡ್ಡಿ, ಅವಿನಾಶ್ ಗೊಬ್ಬುರಕರ್, ಮಲ್ಲು ಕೊಂಡೆದ, ವಿಜಯ ಪುರಾಣಿಕಮಠ, ಅಣ್ಣಾ ರಾಯಹಿರೇಗೌಡ, ನಾಗಯ್ಯಮಾಲಾ ಗತ್ತಿ, ಆಕಾಶ್ ಕುಲಕರ್ಣಿ, ಸಚಿನ್, ಶ್ರೀಕಾಂತ್ ಬಿರಾದಾರ್, ನಾಗೇಶ್ ಹಾವನೂರ, ಅವಿನಾಶ್ ಅರಳಿ, ಮಹೇಶ್ ಬಾಳ್ಳಿ, ಆನಂದ್ ಕೇಶವ್, ಶ್ರೀಶೈಲ್ ಪಾಟೀಲ್, ವಿರೇಶ್ ಭೇರನ ಮತ್ತಿತರರು ಉಪಸ್ಥಿತರಿದ್ದರು.



