ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯಲ್ಲಿ ಕೋಳಕೂರ ವಸತಿ ಶಾಲೆಯಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ

ಉಪನ್ಯಾಸ ನೀಡಿ ಮಾತನಾಡಿದ ನ್ಯಾಯವಾದಿ ಅಪ್ಪಸಾಬ ಮಡಿವಾಳಕರ ಅವರು ಮಕ್ಕಳ ಹಕ್ಕುಗಳು, ಉಚಿತ ಕಾನೂನು ಸಹಾಯ ಮತ್ತು ನ್ಯಾಯಕ್ಕೆ ಸಮಾನ ಪ್ರವೇಶದ ಮಹತ್ವವನ್ನು ಸರಳವಾಗಿ ವಿವರಿಸಿದರು.
ಜೇವರ್ಗಿ: ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯ ದಲ್ಲಿ “ರಾಷ್ಟ್ರೀಯ ಕಾನೂನು ಸೇವೆಗಳ ದಿನ ಹಾಗೂ ಮಕ್ಕಳ ದಿನಾಚರಣೆ” ಅಂಗವಾಗಿ ಕಾನೂನು ಸಕ್ಷರತಾ ಕಾರ್ಯಕ್ರಮವು ರಂದು ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ, ಕೋಳಕೂರದಲ್ಲಿ ನಡೆಯಿತು.
ಜೇವರ್ಗಿ ಕಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಕಾಶಿನಾಥ್ ಉಪ್ಪಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ಸಿದ್ದಬೀರಪ್ಪ ಹೆಚ್. ಪೂಜಾರಿ ಹಾಗೂ ಮುಖ್ಯ ಅತಿಥಿಗಳಾಗಿ ಸಹಾಯಕ ಸರಕಾರಿ ಅಭಿಯೋಜಕಿ ಶ್ರೀಮತಿ ಬಸಲಿಂಗಮ್ಮ ಸೇರಿದಂತೆ ವಕೀಲರ ಸಂಘದ ಉಪಾಧ್ಯಕ್ಷರಾದ ಭಾಶಾ ಪಟೇಲ್ ಯಾಳವಾರ, ಕಾರ್ಯದರ್ಶಿ ರಾಜಶೇಖರ ಶಿಲ್ಪಿ, ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ್ ಪೂಜಾರಿ ಮತ್ತು ವಕೀಲರಾದ ರಾಜಶೇಖರ್ ಸರ್ಕಾರ್ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿದರು.



