ಕಲಬುರಗಿಜಿಲ್ಲಾಸುದ್ದಿ

“ರೈತರ ದಾರಿಗೆ ಬೆಳಕು:ಕರ್ನಾಟಕ ರಕ್ಷಣಾ ವೇದಿಕೆ ಮುಳ್ಳಿನ ಕಂಟೆಗಳು ತೆರವು ಮಾಡಿ ನೆರವಾದ ಸಂಘಟನೆ”

ಕಲಬುರಗಿ: ಕಮಲಾನಗರ ಗ್ರಾಮದಲ್ಲಿ ರೈತರು ತಮ್ಮ ಜಮೀನಿಗೆ ಹೋಗುವ ಮಾರ್ಗದಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಳು ಹಾಗೂ ಜಂಗಲ್‌ಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದ ವೇಳೆ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಕಾರ್ಯಕರ್ತರು , ರಸ್ತೆ ಎಲ್ಲಾ ಮುಳ್ಳಿನ ಗಿಡ ಗಂಟಿಗಳನ್ನು ತೆರವುಗೊಳಿಸಿ ರೈತರಿಗೆ ಸುಗಮ ಸಂಚಾರವನ್ನು ಒದಗಿಸಿದರು.

ಈ ಸೇವಾ ಕಾರ್ಯಕ್ಕೆ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ್ ದೊಡ್ಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕಟ್ಟಿಮಣಿ, ಆಳಂದ ತಾಲೂಕು ಅಧ್ಯಕ್ಷ ಸಚಿನ್ ಜಿ ಲೋಕಾಣಿ, ಉಪಾಧ್ಯಕ್ಷ ಜಗನ್ನಾಥ್ ಬಿರಾದರ್, ಕಾರ್ಯದರ್ಶಿಗಳು ಶ್ರೀಶೈಲ್ ಬಿರಾದರ್, ಶಶಿಕಾಂತ್ ಕೆರಳ್ಳಿ ಹಾಗೂ ಅನೇಕ ಕಾರ್ಯಕರ್ತರು ನೇತೃತ್ವ ವಹಿಸಿದ್ದರು.

ಗ್ರಾಮದಲ್ಲಿ ಸುಮಾರು 2 ರಿಂದ 3 ಕಿಲೋಮೀಟರ್ ವರೆಗೆ ಜಂಗಲ್ ಕಟಿಂಗ್ ಮಾಡಿ ದಾರಿಯನ್ನು ತೆರವುಗೊಳಿಸಲಾಯಿತು. “ರೈತರ ಪರವಾಗಿ ಯಾವುದೇ ಸ್ಥಳೀಯ ರಾಜಕಾರಣಿ ಅಥವಾ ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡಿರಲಿಲ್ಲ. ರೈತರು ತೊಂದರೆ ಅನುಭವಿಸದಂತೆ ಮಾಡಲು ನಮ್ಮ ಸಂಘಟನೆ ಸ್ವತಃ ಮುಂದಾಗಿದೆ,” ಎಂದು ಸಂಘಟನೆಯ ಕಾರ್ಯಕರ್ತರು ತಿಳಿಸಿದರು.

ಕನ್ನಡ ಪರ ಹೋರಾಟಗಾರ ಟಿ.ಎ. ನಾರಾಯಣಗೌಡರ ಮಾರ್ಗದರ್ಶನದಲ್ಲಿ ಮತ್ತು ಸಂಘಟನೆಯ ಜಿಲ್ಲಾ–ತಾಲೂಕು ಘಟಕಗಳ ಸಹಕಾರದೊಂದಿಗೆ ಈ ಕಾರ್ಯ ನೆರವೇರಿತು.

ಈ ಸಂದರ್ಭದಲ್ಲಿ ರೈತರಾದ ಬಸವರಾಜ್ ಬಿರಾದರ್, ಗಣಪತಿ ಮಾಲಿ ಪಾಟೀಲ, ಗುರು ಸಾಹು, ಶಿವರಾಜ್ ಬಿರಾದರ್, ಖಾಮಣ್ಣ ಪೂಜಾರಿ, ಗುಂಡಪ್ಪ ಪೂಜಾರಿ, ಶಿವಶರಣಪ್ಪ ಕೆರಳ್ಳಿ, ಹನುಮಂತ ಪೂಜಾರಿ, ಮಹದೇವಪ್ಪ ಬಿರಾದರ್, ಮೇಘರಾಜ್ ಬಿಲಗುಂದಿ, ನಾಗರಾಜ್ ವಾಗ್ದರ್ಗಿ ಸೇರಿದಂತೆ ಅನೇಕರಿದ್ದರು.

“ರೈತರ ಕಷ್ಟವೇ ನಮ್ಮ ಹೋರಾಟದ ಮೂಲ. ಕರ್ನಾಟಕಕ್ಕೆ ಅಥವಾ ರೈತರಿಗೆ ಧಕ್ಕೆ ಬಂದರೆ ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧ,” ಎಂದು ಕಾರ್ಯಕರ್ತರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button