“ನಾರಾಯಣಪುರದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಟಿಪ್ಪು ಸುಲ್ತಾನ್ ಸಮಿತಿಯ ಆಗ್ರಹ”
ತಪ್ಪಿತಸ್ಥರ ಮೇಲೆ ಸುಮೋಟೊ ಪ್ರಕರಣ ದಾಕಲಿಸಿ : ಮೋಯುನುದ್ದಿನ್ ಇನಾಮದಾರ
ಜೇವರ್ಗಿ : ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ತಾಲೂಕ ಆಡಳಿತ ಹಾಗೂ ಪೊಲೀಸ್ ಅಧೀಕಾರಿಗಳ ಸಮ್ಮುಖದಲ್ಲಿಯೆ ಮುಸ್ಲಿಂ ಕುಟುಂಬದ ಮೇಲೆ ಮಣಿಕಂಠ ರಾಠೋಡ ಹಾಗೂ ಸಹಚರರು ಮಾರಣಾಂತಿಕ ಹಲ್ಲೆಯನ್ನ ನಡೆಸಿರುವುದು ಅತ್ಯಂತ ಖಂಡನಿಯ. ಕೂಡಲೆ ತಪ್ಪಿತಸ್ಥರ ಮೇಲೆ ಸುಮೋಟೊ ಪ್ರಕರಣ ದಾಕಲಿಸಿ ತಾಲೂಕಿನಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಟಿಪ್ಪು ಸುಲ್ತಾನ್ ಸಮಿತಿಯ ತಾಲೂಕ ಅಧ್ಯಕ್ಷ ಮೋಯುನುದ್ದಿನ್ ಇನಾಮದಾರ ವಿನಂತಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕ ದಂಡಾಧೀಕಾರಿ ಮಲ್ಲಣ ಯಲಗೋಡ ರವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಂತರ ಮೋಯುನುದ್ದಿನ್ ಇನಾಮದಾರ ಮಾತನಾಡಿ ಜೇವರ್ಗಿ ಯಾವಗಲೂ ಕೂಡ ಶಾಂತಿ, ಸಹಬಾಳ್ವೆಯನ್ನ ಮತ್ತು ಪರಸ್ಪರ ಗೌರವವನ್ನು ಉಳಿಸಿಕೊಂಡು ಬಂದ ಪ್ರದೇಶವಾಗಿದೆ. ಆದರೆ ಶಾಂತಿಯ ತೋಟದಲ್ಲಿ ಅಶಾಂತಿಯನ್ನ ಬಿತ್ತಲು ಯತ್ನಿಸುವ ಅರಾಜಕ ಅಂಶಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಗ್ರಾಮದಲ್ಲಿ ಗುಂಪು ಕೂಡಿಸಿಕೊಂಡು ಶಾಂತಿ ಭಂಗ ಪಡಿಸುವ ಭಯದ ವಾತಾವರಣ ನಿರ್ಮಿಸಿರುವುದು ಆಡಳಿತದ ವೈಫಲ್ಯವನ್ನು ಸ್ಪಷ್ಟಪಡಿಸುತ್ತದೆ.
ಮೂಢನಂಬಿಕೆ ಕುರಿತು ಕಾನೂನು ರಿತಿಯ ಕ್ರಮ ಅಧಿಕಾರಿಗಳು ಕೈಗೊಳಲ್ಲಿ. ನಾವು ಕೂಡ ಮೂಢನಂಬಿಕೆಯನ್ನ ವಿರೋಧಿಸುತ್ತೆವೆ. ಆದರೆ ಮೂಢನಂಬಿಕೆಯ ನೆಪದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ನಡಿಸಿರುವುದು ಅತ್ಯಂತ ಗಂಭೀರ ಸಾಮಾಜಿಕ ಅನ್ಯಾಯವಾಗಿದೆ. ಹಲ್ಲೆ ಮಾಡಿದ ಎಲ್ಲರ ಮೇಲು ಕ್ರೀಮಿನಲ್ ಪ್ರಕರಣ ದಾಖಲಿಸಿ ತಕ್ಷಣವೆ ಬಂದಿಸಬೇಕು. ಮಣಿಕಂಠ ರಾಠೋಡ ಹಾಗೂ ಸಹಚರರನ್ನು ಕೂಡಲೆ ಬಂದಿಸಬೇಕು ಇಲ್ಲವಾದರೆ ಜೇವರ್ಗಿಯಲ್ಲಿ ದೊಡ್ಡಪ್ರಮಾಣದ ಶಾಂತಿಪೂಣ್ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಮನವಿ ಮುಖಾಂತರ ವಿನಂತಿಸಿದರು.
ಈ ಸಂದರ್ಭದಲ್ಲಿ ಹಬೀಬ್ ಜಮದಾರ್, ಜಾವಿದ್ ಪಟೇಲ್, ನೀಸಾರ್ ಇನಾಮದಾರ, ಅಸ್ಲಾಂ ಜಾಗೀರದಾರ್, ಸಾಜೀದ್ ಗಂವ್ಹಾರ, ಸಮೀರ್, ಸೈಯದ್ ನಸೀರ್ ಸೇರಿದಂತೆ ಅನೇಕರಿದ್ದರು.



