ಕಲಬುರಗಿಜಿಲ್ಲಾಸುದ್ದಿ
ಪಿಎಸ್ಐ ನೇಮಕಾತಿ ಹಗರಣ: ಪ್ರಮುಖ ಆರೋಪಿ ಆರ್.ಡಿ. ಪಾಟೀಲಗೆ ಸುಪ್ರೀಂಕೋರ್ಟ್ ಮೂರು ವಾರಗಳ ಮಧ್ಯಂತರ ಜಾಮೀನು

ಕಲಬುರಗಿ: ಬಹುಚರ್ಚಿತ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲಗೆ ಸುಪ್ರೀಂ ಕೋರ್ಟ್ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬುಧವಾರ (ನ.19) ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ.
ಮಗಳ ಮದುವೆಯ ಧಾರ್ಮಿಕ ವಿಧಿಗಳನ್ನು ನವೆಂಬರ್ 24ರೊಳಗೆ ನೆರವೇರಿಸಬೇಕಿರುವುದರಿಂದ ತಾತ್ಕಾಲಿಕ ಜಾಮೀನು ನೀಡುವಂತೆ ಆರ್.ಡಿ.ಪಾಟೀಲ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ವಿನೋದಚಂದ್ರ ಅವರ ಏಕಸದಸ್ಯ ಪೀಠವು,
“ಪ್ರಕರಣದಲ್ಲಿ ಈಗಾಗಲೇ ದೋಷಾರೋಪಪತ್ರ ಸಲ್ಲಿಕೆಯಾಗಿದೆ, ಸಾಕ್ಷಿದಾರರ ಸಂಖ್ಯೆ ದೊಡ್ಡದಾಗಿದ್ದು, ವಿಚಾರಣೆಗೆ ಇನ್ನಷ್ಟು ಸಮಯ ಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ಅರ್ಜಿದಾರರಿಗೆ ಮೂರು ವಾರಗಳ ಮಧ್ಯಂತರ ಜಾಮೀನು ನೀಡಬಹುದು” ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸಮಯಾವಧಿ ಪೂರ್ಣವಾದ ಬಳಿಕ ಪಾಟೀಲ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.



