ಕಲಬುರಗಿಜಿಲ್ಲಾಸುದ್ದಿ

ಕೋಲಿ–ಕಬ್ಬಲಿಗ ಗಂಗಾಮತ ಸಮುದಾಯದ 10ನೇ ವರ್ಷದ ರಾಜ್ಯಮಟ್ಟದ ವಧು–ವರರ ಸಮಾವೇಶ

ಕಲಬುರಗಿ: ನಗರದ ಕಸ್ತೂರಿಬಾಯಿ ಪಿ. ಬುಳ್ಳಾ ಸಾಂಸ್ಕೃತಿಕ ಸಭಾಭವನದಲ್ಲಿ ಮಾತಾ ಮಾಣಿಕೇಶ್ವರಿ ವಧು–ವರರ ಮಾಹಿತಿ ಕೇಂದ್ರ, ಕಲಬುರಗಿ ವತಿಯಿಂದ 10ನೇ ವರ್ಷದ ರಾಜ್ಯಮಟ್ಟದ ಕೋಲಿ–ಕಬ್ಬಲಿಗ ಗಂಗಾಮತ ಸಮುದಾಯದ ವಧು–ವರರ ಸಮಾವೇಶವನ್ನು ಭಾನುವಾರ ಆಯೋಜಿಸಲಾಯಿತು.

ಸಮಾವೇಶವನ್ನು ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಗೌರವಾಧ್ಯಕ್ಷರಾದ ಡಾ. ಬಿ.ಪಿ. ಬುಳ್ಳಾ ಅವರು ಉದ್ಘಾಟಿಸಿ ಮಾತನಾಡಿ, ಇಂತಹ ಸಮಾವೇಶಗಳು ಸಮುದಾಯದ ಯುವಕ–ಯುವತಿಯರಿಗೆ ಸೂಕ್ತ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ನೆರವಾಗುವುದರೊಂದಿಗೆ ಸಾಮಾಜಿಕ ಏಕತೆಯನ್ನು ಬಲಪಡಿಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಂತ ಭೀಷ್ಮ ಚೌಡಯ್ಯ ಶ್ರೀಗಳು, ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಬಾಬು ಪಿ. ತಡಕಲ, ಅಶೋಕ ಚಾಂದಕವಠೆ, ಶ್ರೀಮತಿ ವೇದಾ ಚಕ್ರ, ಸೂರ್ಯಕಾಂತ ಗುಡಡಗಿ, ಧರ್ಮರಾಜ ಜವಳಿ, ಶಿವಾಜಿ ತಳವಾರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ವಧು–ವರರ ಪರಿಚಯ, ಮಾಹಿತಿ ವಿನಿಮಯ ಹಾಗೂ ಸಾಮಾಜಿಕ ಸಂವಾದ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button