ಕಲಬುರಗಿಜಿಲ್ಲಾಸುದ್ದಿ
ರಸ್ತೆ ಅಪಘಾತ ಒರ್ವ ವ್ಯಕ್ತಿ ಸಾವು

ಜೇವರ್ಗಿ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹತ್ತಿರ ಇಂದು ಬೆಳಿಗ್ಗೆ 9 30 ರ ಸುಮಾರಿಗೆ ಟಿ ವಿ ಎಸ್ ಎಕ್ಸಲ್ ದ್ವಿಚಕ್ರ ವಾಹನ ಹಾಗೂ ಅಪರಿಚಿತ ಕ್ರೂಸರ್ ಹಾಗೂ ಸ್ಥಳಿಯ ಶಾಲಾ ವಾಹನದ ನಡುವೆ ಸಂಬವಿಸಿದ ಅಪಘಾತದಲ್ಲಿ ಒರ್ವ ವುಕ್ತಿ ಸ್ಥಳದಲ್ಲಿಯೆ ಸಾವನಪ್ಪಿದ ಘಟನೆ ನಡೆದಿದೆ.
ದವಲಪ್ಪ ಭೀಮಪ್ಪ ಗುತ್ತೆದಾರ ಸಾ. ಚನ್ನೂರ ಅಪಘಾತದಲ್ಲಿ ಸ್ಥಳದಲ್ಲಿಯೆ ಸಾವನಪ್ಪಿದ್ದಾನೆ. ಮೃತ ವ್ಯಕ್ತಿಯು ಪಟ್ಟಣದ ಹೊರವಲಯದ ಡಾ. ಬಿ. ಆರ್ ಅಂಬೇಡ್ಕರ್ ನಗರಕ್ಕೆ ತೆರಳುವಾಗ ಈ ದುರ್ಗಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸ್ ಇಲಾಖೆಯ ಸಿಬ್ಬಂದಗಳು ಆಗಮಿಸಿ ಸ್ಥಳ ಪರಿಶಿಲನೆ ನಡೆಸಿದರು.



