ಕಲಬುರಗಿಜಿಲ್ಲಾಸುದ್ದಿ

ಓದಿನಿಂದಲೆ ಸಾಧನೆ ಸಾಧ್ಯವಾಗುತ್ತದೆ : ಯಶವಂತ ಬಡಿಗೇರ

ಜೇವರ್ಗಿ : ಯುವಕರು ತಮ್ಮ ಉತ್ತಮ ಭವಷ್ಯ ನಿರ್ಮಿಸಿಕೊಳ್ಳಲು, ಹಾಗೂ ಸರಕಾರಿ ಉದ್ಯೋಗ ಸೇರಿದಂತೆ ಇನಿತರ ಉಧ್ಯೋಗಗಳನ್ನ ಪಡೆಯಲು ಜ್ಞಾನ ಬೇಕು. ತಮ್ಮ ಜೀವನದಲ್ಲಿ ಸಾಧನೆ ಮಾಡಲು ಓದಿನಂದಲೆ ಮಾತ್ರ ಸಾಧ್ಯವಾಗುತ್ತದೆ ಎಂದು ಗೃಹರಕ್ಷಕ ದಳದ ಘಟಕಾಧಿಕಾರಿ ಯಶವಂತ ಬಡಿಗೇರ ಹೆಳಿದರು.

ಪಟ್ಟಣದ ಸರಕಾರಿ ಗ್ರಂಥಾಲಯದಲ್ಲಿ ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪ್ರದರ್ಶನ ಹಾಗೂ ನೋದಣಿ ಅಭೀಯಾನ ನಡೆಯಿತು.

ಕಾರ್ಯಕ್ರಮವನ್ನುದ್ದೆಶಿಸಿ ಯಶವಂತ ಬಡಿಗೇರ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಬಡವರು ಉತ್ತಮ ಶೀಕ್ಷಣವನ್ನು ಪಡೆಯುವುದು ಕಷ್ಟವಾಗುತ್ತಿದೆ. ಹೆಚ್ಚಿನ ಹಣ ಸಂದಾಐ ಮಾಡಿ ತರಬೇತಿ ಪಡೆಯುವುದು ಹಾಗೂ ಹೆಚ್ಚಿನ ಹಣ ಸಂದಾಯ ಮಾಡು ಪುಸ್ತಕಗಳನ್ನ ತೆಗೆದುಕೊಳ್ಳಲು ಆಗುತ್ತಿಲ್ಲ. ಅಂತಹ ಬಡ ಮಧ್ಯಮ ವರ್ಗದ ಓದುಗರಿಗೆ ಸರಕಾರಿ ಗ್ರಂಥಾಲಯಗಳು ಹೆಚ್ಚಿನ ಸಹಾಯ ಮಾಡುತ್ತಿವೆ. ಉತ್ತಮ ಪುಸ್ತಕಗಳನ್ನ ಹಾಗೂ ಸ್ಪರ್ಧಾತ್ಮಕ ಪತ್ರಿಕೆ ಮತ್ತು ಪುಸ್ತಗಳನ್ನ ಓದಲು ಸೌಲಭ್ಯ ನೀಡುತ್ತಿವೆ. ಇಂತಹ ಗ್ರಂಥಾಲಯಗಳ ಸದುಪಯೋಗವನ್ನು ಯುವಕರು ಬಳಸಿಕೊಳ್ಳಬೇಕು. ನಿಮ್ಮ ಬದುಕಿನಲ್ಲಿ ಉನ್ನತ ಸಾಧನೆಯನ್ನ ಮಾಡಲು ಓದು ಬಹಳ ಪ್ರಮುಖವಾಘಿದೆ ಎಂದರು.

ಗ್ರ0ಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ದ.ಸಂ.ಸ. ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಸಂಘಟನೆ ಸಂಚಾಲಕ ಶ್ರೀಹರಿ ಕರಕಳ್ಳಿ ಅವರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಲಿತ ಪ್ಯಾಂಥರ್ ಸಂಘಟನೆಯ ಜಿಲ್ಲಾಧ್ಯಕ್ಷ ರವಿ ಕುಳಗೇರಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಂಥಾಲಯ ಸಿಬ್ಬಂದಿ ಗಂಗಾಧರ ವಡಗೇರಿ, ಸಿದ್ದರಾಮ ಕಟ್ಟಿ, ಸಾಯಬಣ್ಣಸರ್, ಬಾಬುರಾಯ ಹಿಪ್ಪರಗಿ, ಶಂಕರ್ ಹರನೂರ, ಸಂಗು ಹರನೂರ, ಶ್ರೀಮಂತ ಕಿಲ್ಲೆದಾರ, ಶರಣಬಸಪ್ಪ ಲಖಣಾಪೂರ, ಗುರುಲಿಂಗಯ್ಯ ಸ್ವಾಮಿ ಯನಗುಂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button