ಕಲಬುರಗಿಯಲ್ಲಿಅ.31ರಂದು ನೂತನ ‘ಶ್ರೀ ಆಸ್ಪತ್ರೆ’ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟನೆ
30 ಹಾಸಿಗೆಯ ನವೀನ ಸೌಲಭ್ಯಗಳೊಂದಿಗೆ ‘ಶ್ರೀ ಆಸ್ಪತ್ರೆ’ – ತಾಯಿ ಮತ್ತು ಮಕ್ಕಳ ಆರೈಕೆಗೆ ವಿಶೇಷ ಸೌಲಭ್ಯಗಳು

ಗರ್ಬೀಣಿಯರಿಗೆ ಮತ್ತು ಬಾಣಂತಿಯರಿಗೆ ದಿನದ 24ಗಂಟೆಗಳ ಕಾಲ ಸೇವೆಗೆ ಶ್ರೀ ಆಸ್ಪತ್ರೆಯು ಸಿದ್ದವಾಗಿದ್ದು, ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸಲಾಗುವುದು, ಆಸ್ಪತ್ರೆಯಲ್ಲಿ ಐವರು ತಜ್ಞ ವೈದ್ಯರು ಲಭ್ಯವಿರುತ್ತಾರೆ. ಸ್ತ್ರೀರೋಗಿಗಳಿಗೆ ವೈದ್ಯೋಪಚಾರ ವ್ಯವಸ್ಥೆ ಪ್ರಸವಪೂರ್ವ ಆರೈಕೆ ಮತ್ತು ತಪಾಸಣೆ ಬಂಜೆತನ ಚಿಕಿತ್ಸೆ ಕ್ಯಾನ್ಸರ್ ಸ್ಕ್ರೀನಿಂಗ್, ಲ್ಯಾಪ್ರೋಸ್ಕೋಪಿ ಶಾಸ್ತ್ರ ಚಿಕಿತ್ಸೆ ಸೇರಿದಂತೆ ಸಾಮಾನ್ಯ ಚಿಕಿತ್ಸೆಗಳು ಲಭ್ಯವಿರುತ್ತವೆ.-ಡಾ. ಶ್ವೇತಾನಿದಿ,ಎಂ.ಡಿ. ಮತ್ತು ಶ್ರೀ ಆಸ್ಪತ್ರೆಯ ಸಿಇಓ.
ಕಲಬುರಗಿ: ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ವಾಗಿರುವ 30 ಹಾಸಿಗೆಯುಳ್ಳ ‘ಶ್ರೀ ಆಸ್ಪತ್ರೆ’ಯು ಅ.31ರಂದು ಸಂಜೆ 5-30ಗಂಟೆಗೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಆಸ್ಪತ್ರೆಯ ಚೇರಮನ್ರಾದ ಮಕ್ಕಳ ತಜ್ಞರಾದ ಡಾ. ಸಚೀನ ಎಸ್.ಬಿ ಹಾಗೂ ಸ್ರೀ ರೋಗ ತಜ್ಞರಾದ ಡಾ. ಶ್ವೇತಾನಿದಿ ಅವರು ಜಂಟಿಯಾಗಿ ತಿಳಿಸಿದರು.
ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಈಜಿ ಬೈ ಹತ್ತಿರ ಶ್ರೀ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಾರಂಭದಲ್ಲಿ 10 ಹಾಸಿಗೆ ಉಳ್ಳ ಆಸ್ಪತ್ರೆಯ ಪ್ರಾರಂಬಿಸಿದ ಆಸ್ಪತ್ರೆಯು ಸಾರ್ವಜನಿಕರ ಸಹಕಾದಿಂದ ಮತ್ತು ಉತ್ತಮ ಸೇವೆ ಒದಗಿಸುತ್ತಾ ಬಂದಿದೆ ಎಂದು ತಿಳಿಸಿದರು.
ಅ. 31ರಂದು ಸಂಜೆ 5-30ಗಂಟೆಗೆ ನಡೆಯಲಿರುವ ಶ್ರೀ ಆಸ್ಪತ್ರೆಯನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಮತ್ತು ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಉದ್ಘಾಟನೆ ಮಾಡುವರು.
ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪ ದರ್ಶನಾಪೂರ, ಶಾಸಕರಾದ ಕನೀಜ್ ಫಾತೀಮಾ, ಕೆಕೆಆರ್ಡಿಬಿ ಅಧ್ಯಕ್ಷರಾದ ಡಾ. ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ, ಪಾಟೀಲ್, ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ತಿಪ್ಪಣಪ್ಪ ಕಮಕನೂರ, ಶಶೀಲ ನಮೋಶಿ, ಜಗದೇವ ಗುತ್ತೇದಾರ, ಬಿ.ಜಿ. ಪಾಟೀಲ, ಕುಡಾ ಚೇರ್ಮನ್ ಮಜರ್ ಅಲಮ್ ಖಾನ್, ಜಿಲ್ಲಾದಿಕಾರಿ ಫೌಜಿಯಾ ತರನ್ನುಮ್, ನಗರ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆಂದು ಇದೆ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಅನುರಾಧ ಅವರು ಮಾತನಾಡಿ ಪ್ರಸವ ಸಮಯದಲ್ಲಿ ತಾಯಿ ಮತ್ತು ಮಕ್ಕಳಿಗೆ ಬೇಕಾಗುವ ಎಲ್ಲಾ ಚಿಕಿತ್ಸೆ, ಮತ್ತು ಅವದಿಪೂರ್ವದಲ್ಲಿ ಜನಿಸಿದ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಸಹ ಲಭ್ಯವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಮಧುಶ್ರೀ ದೇಶಪಾಂಡೆ ಗಂಗಾಣಿ, ಡಾ. ಅಕ್ಷತಾ ಭಿಮನ್ ಇದ್ದರು.
ಕಲಬುರಗಿಯಲ್ಲಿ ಕಳೆದ 10ವರ್ಷಗಳಿಂದ ಚಿಕ್ಕದಾದ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಜನರಿಗೆ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿದೆ ಅದೇ ನಿಟ್ಟಿನಲ್ಲಿ ಜನರಿಗೆ ಇನ್ನೂ ಹತ್ತಿರವಾಗಲು ಮತ್ತು ಎಲ್ಲಾ ಸೌಲಭ್ಯಗಳು ಒಂದೆಡೆ ಸಿಗುವಂತೆ ಮಾಡಲು ಡಾ. ಸಚಿನ್ ಎಸ್.ಬಿ. ಅವರು ಶ್ರಮಿಸಿದ್ದಾರೆ, ಹಾಗಾಗಿ ಮಾನವ ದೇಹದ ಮೂಳೆ ಮತ್ತು ಕೀಲುಗಳಿಗೆ ಚಿಕಿತ್ಸೆ ಲಭ್ಯವಿದೆ, ಯಾವುದೇ ಬದಲಿ ಚಿಕಿತ್ಸೆಗಳು ಮತ್ತು ಅಪಘಾತಗಳಿಂದು0ಟಾಗುವ ಶಸ್ತçಚಿಕಿತ್ಸೆಯ ಎಲ್ಲಾ ಸೇವೆಗಳು ಆಸ್ಪತ್ರೆಯಲ್ಲಿ ದೊರೆಯಲಿದೆ.- ಡಾ. ನಿಖಿಲ್ ಗಂಗಾಣಿ.


