ಕರಾಟೆ ಕ್ರೀಡಾಕೂಟದಲ್ಲಿ ಹೆವೇನ್ ಫೈಟರ್ ತಂಡದ ಶಹಾಪುರ ವಿದ್ಯಾರ್ಥಿಗಳ ಮೇಲುಗೈ -15 ಪದಕಗಳ ಗೆಲುವು!
ಮಾಸ್ಟರ್ ಮನೋಹರ ಕುಮಾರ್ ಬೀರನೂರ ನೇತೃತ್ವದ ಭೀಮಶಂಕರ್ ಗೊಗಿ ತಂಡದ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಅದ್ಭುತ ಸಾಧನೆ

ಯಾದಗಿರಿ: ಶಹಾಪುರ ತಾಲೂಕಿನ ಭೀಮಶಂಕರ್ ಗೊಗಿ ಅವರ ಹೆವೇನ್ ಫೈಟರ್ ತಂಡದ ಕರಾಟೆ ಪಟುಗಳು ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಒಟ್ಟು 15 ಪದಕಗಳನ್ನು ಗೆದ್ದು, ಕಲ್ಯಾಣ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಹಾಗೂ ಸಂಸ್ಥೆಯ ನಿರ್ದೇಶಕರಾದ ಮಾಸ್ಟರ್ ಮನೋಹರ ಕುಮಾರ್ ಬೀರನೂರ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆಗೆ ಹಾಜರಾದ ಈ ತಂಡವು ಶ್ರೇಷ್ಠ ಪ್ರದರ್ಶನ ತೋರಿದೆ.
ಪದಕ ವಿವರಗಳು ಈಂತಿವೆ :
🥇 ಮೂರು ಬಂಗಾರದ ಪದಕಗಳು
🥈 ನಾಲ್ಕು ಬೆಳ್ಳಿಯ ಪದಕಗಳು
🥉 ಎಂಟು ಕಂಚಿನ ಪದಕಗಳು
ವೈಯಕ್ತಿಕ ಸಾಧನೆಗಳು:
1️⃣ ಶ್ರೀಶೈಲ್ ಹೂಗಾರ್ – ಬಂಗಾರ, ಬೆಳ್ಳಿ ಪದಕ
2️⃣ ಗೌರಿ ಪಿ.ಕೆ. – ಬಂಗಾರ, ಕಂಚಿನ ಪದಕ
3️⃣ ಬಸವರಾಜ್ – ಬಂಗಾರ, ಕಂಚಿನ ಪದಕ
4️⃣ ಗಗನ್ – ಎರಡು ಬೆಳ್ಳಿಯ ಪದಕ
5️⃣ ಸಾಗರ್ ಹೂಗಾರ್ – ಬೆಳ್ಳಿ, ಕಂಚಿನ ಪದಕ
6️⃣ ಅಜಯ್ ಸಿಂಗ್ ಚೌಹಾಣ್ – ಎರಡು ಕಂಚಿನ ಪದಕ
7️⃣ ಮೌನೇಶ್ ಬಿ – ಕಂಚಿನ ಪದಕ
8️⃣ ಸಂಜಯ್ ಕುಮಾರ್ – ಎರಡು ಕಂಚಿನ ಪದಕ
ಈ ಎಲ್ಲ ಸಾಧನೆಗೆ ವಿದ್ಯಾರ್ಥಿಗಳ ನಿಷ್ಠೆ ಮತ್ತು ಕರಾಟೆ ಕೋಚ್ ಭೀಮಶಂಕರ್ ಗೊಗಿ ಅವರ ಕಠಿಣ ತರಬೇತಿಯನ್ನು ಕಾರಣವೆಂದು ಸಂಘಟಕರು ತಿಳಿಸಿದ್ದಾರೆ.
ಈ ಸಾಧನೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಸ್ಥಳೀಯ ರಾಜಕೀಯ ಮುಖಂಡರು, ಕ್ರೀಡಾಭಿಮಾನಿಗಳು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಹೆವೇನ್ ಫೈಟರ್ ಸಂಘಟನಾ ಕಾರ್ಯದರ್ಶಿ ಸೊಪಣ್ಣ ಮಹಲ್ ರೋಜಾ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.



