ಜಿಲ್ಲಾಸುದ್ದಿ

ವರ್ಲ್ಡ್ ಸೆರೆಬ್ರಲ್ ಪಾಲ್ಸಿ ದಿನ – ವಿಶೇಷ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ

ಕಲಬುರಗಿ: ನಗರದ ರೋಟರಿ ಕ್ಲಬ್ ಶಾಲೆಯಲ್ಲಿ ಬ್ರೈನೆಕ್ಸ್ ಚಿಲ್ಡ್ರನ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ವರ್ಲ್ಡ್ ಸೆರೆಬ್ರಲ್ ಪಾಲ್ಸಿ ದಿನಾಚರಣೆಯ ಅಂಗವಾಗಿ ವಿಶೇಷ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಉದ್ಘಾಟಿಸಿ ಮಾತನಾಡಿ, “ಕಲ್ಯಾಣ ಕರ್ನಾಟಕದಲ್ಲಿ ಈ ರೀತಿಯ ಮಕ್ಕಳಿಗೆ ಸಂಸ್ಥೆ ತೆರೆಯುವುದು ಶ್ಲಾಘನೀಯ. ನಾವು ಸದಾ ಇವರ ಜೊತೆ ಇದ್ದೇವೆ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಹಾಜರಾದ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಮಾಜಿ ಅಧ್ಯಕ್ಷ ಡಾ. ಎಚ್. ವೀರಭದ್ರಪ್ಪ ಮಾತನಾಡಿ, “ದೇಶದಲ್ಲಿ 10% ಮಕ್ಕಳಲ್ಲಿ 1% ಮಕ್ಕಳು ವಿಶೇಷ ಸಾಮರ್ಥ್ಯಗಳನ್ನು ಹೊಂದಿ ಹುಟ್ಟುತ್ತಿದ್ದಾರೆ. ಇಂತಹ ಮಕ್ಕಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಪಕ ಮಾರ್ಗದರ್ಶನ ನೀಡುವಲ್ಲಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ” ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಡಾ. ದೇವಿದಾಸ ಪಾಟೀಲ್, ಡಾ. ಅನ್ವರ್ ಖಾನ್, ಡಾ. ನಮ್ಮರ ಹಯಾತ್, ಡಾ. ಮಲ್ಲೇರಾವ ಮಲ್ಲೆ, ಸಂಸ್ಥೆಯ ಅಧ್ಯಕ್ಷೆ ಡಾ. ರಾಗಿಣಿ ಎಂ, ಡಾ. ರಾಹುಲ್ ಮದಕನಹಳ್ಳಿ, ಶರಣ ರಾಜ್ ಚಪ್ಪರಬಂದಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button