
ಜೇವರ್ಗಿ : ಇತ್ತೀಚಿನ ಭಾರಿ ಮಳೆಯಿಂದಾಗಿ ತೊಂದರೆ ಅನುಭವಿಸಿದ ಕುಟುಂಬಗಳಿಗೆ ಧರ್ಮಸಿಂಗ್ ಫೌಂಡೇಶನ್ ನೆರವಾಗಿದ್ದು, ಸುಮಾರು 150 ದಿನಸಿ ಕಿಟ್ಗಳನ್ನು ತಾಲೂಕ ಆಡಳಿತಕ್ಕೆ ಹಸ್ತಾಂತರಿಸಿತು. ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್ ರವರು ಸ್ವತಃ ಕೆಲವರಿಗೆ ಕಿಟ್ಗಳನ್ನು ವಿತರಿಸಿದರು.
ಮಳೆಯಿಂದಾಗಿ ಪಟ್ಟಣದ ಹಲವಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರ ದಿನನಿತ್ಯದ ಉಪಯೋಗ ಸಾಮಾನುಗಳು ಹಾನಿಗೊಳಗಾಗಿದ್ದವು. ಇದರಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ನೆರವು ನೀಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಅದರಂತೆ ಇಂದು ಫೌಂಡೇಶನ್ ವತಿಯಿಂದ ಕಿಟ್ಗಳ ವಿತರಣಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲಣ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ರುಕುಂ ಪಟೇಲ್ ಇಜೇರಿ, ಪ್ರತಾಪ ಕಟ್ಟಿ, ಮರೆಪ್ಪ ಸರಡಗಿ, ರಫೀಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.