ಚೌಡಯ್ಯ ಮೂರ್ತಿಗೆ ಅಪಮಾನ – ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು: ಮ್ಯಾಕೇರಿ ಆಗ್ರಹ

ಅಫಜಲಪುರ: ಚಿತ್ತಾಪುರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಹಿನ್ನೆಲೆ ಅಫಜಲಪುರ ತಾಲೂಕು ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ವತಿಯಿಂದ ಸೋಮವಾರ ದಂದು ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ತಹಸೀಲ್ದಾರ ಕಚೇರಿ ಯವರಿಗೆ ಕಾಲ್ನಡಿಗೆಯ ಮೂಲಕ ಬೃಹತ್ ಪ್ರತಿಭಟನೆ ನಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ನಿಜ ಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ಯುವ ಮುಖಂಡ ಸೂರ್ಯಕಾಂತ ಶಂಕರ ಮ್ಯಾಕೇರಿ ಮಾತನಾಡಿ, “ನಿಜಶರಣ ಅಂಬಿಗರ ಚೌಡಯ್ಯ ಮಹಾನ್ ಶರಣರು, ಅವರ ಆಚಾರ–ವಿಚಾರಗಳು ಇಂದಿನ ಸಮಾಜಕ್ಕೆ ಮಾದರಿ. ಇಂತಹ ಶರಣರಿಗೆ ಅವಮಾನ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು,” ಅಲ್ಲದೇ ಗಡಿಪಾರು ಮಾಡಬೇಕು.ಮುಂದೆ ಯಾವ ಶರಣರಿಗೂ,ಮಹಾನ ಪುರುಷರಿಗೂ, ಹೋರಾಟಗಾರರಿ ಗೂ ಇಂತಹ ಘಟನೆ ಆಗಬಾರದು ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಈರಣ್ಣ ಪಂಚಾಳ ಮತ್ತು ತಳವಾರ ಸಮಾಜದ ಯುವ ಮುಖಂಡ ಮರೆಪ್ಪ ಜಮಾದಾರ ಮಾತನಾಡಿ,“ಅಂಬಿಗರ ಚೌಡಯ್ಯ 12ನೇ ಶತಮಾನದ ವಚನ ಚಳುವಳಿಯ ಪ್ರಮುಖ ಶರಣ. ಅವರು ಮೂಢನಂಬಿಕೆಗಳ ವಿರುದ್ಧ ಸಮಾಜಕ್ಕೆ ಬೆಳಕು ತಂದುಕೊಟ್ಟವರು. ಅವರ ಮೂರ್ತಿಯನ್ನು ವಿರೂಪಗೊಳಿಸುವುದು ನಮ್ಮ ಪರಂಪರೆಗೆ ಅವಮಾನ,” ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ದೇಶದ್ರೋಹ ಮತ್ತು ಗುಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿದ್ದು ಮ್ಯಾಕೇರಿ, ಅವದೂತ ಬನ್ನಟ್ಟಿ, ದುಂಡು ಜಮಾದಾರ, ರಜನಿಕಾಂತ್ ಶಂಕರ ಮ್ಯಾಕೇರಿ, ಸತೀಶ ಬಮ್ಮನಳ್ಳಿ, ಸಮರ್ಥ ಮ್ಯಾಕೇರಿ, ಚಂದು ಪಾಟೀಲ, ಅಭಿ ತಳವಾರ, ಮಂಜು ನಾಟೀಕಾರ, ಸತೀಶ ತಳವಾರ, ಮಡಿವಾಳ ಜಮಾದಾರ, ಸಚಿನ್ ಮ್ಯಾಕೇರಿ, ಯಲ್ಲಪ್ಪ ತಳವಾರ, ಚೇತನ ಜಕಬಾ, ರಾಜಕುಮಾರ ಜಮಾದಾರ, ರಾಹುತ್ತಪ್ಪ ತಳವಾರ, ರಾಮಣ್ಣ ಜಮಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.ನಂತರ ಪ್ರತಿಭಟನಾಕಾರರು ತಹಸೀಲ್ದಾರ ಸಂಜೀವಕುಮಾರ ದಾಸರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು..