ವಕೀಲ ಕಿಶೋರ ರಾಜೇಶಗೆ ಕಠಿಣ ಶಿಕ್ಷೆ ಆಗ್ರಹಿಸಿ ರಿಪಬ್ಲಿಕನ್ ಯೂತ್ ಫೆಡರೇಷನ್ ಪ್ರತಿಭಟನೆ
ವಕೀಲ ಕಿಶೋರ ರಾಜೇಶ ಭಾವಚಿತ್ರ ಸುಟ್ಟು ಹಾಕಿ ಆಕ್ರೋಶ

ಕಲಬುರಗಿ:ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ಕಿಶೋರ ರಾಜೇಶ ಶೂ ಎಸೆಯಲು ಯತ್ನಿಸಿದ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿ, ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ರಿಪಬ್ಲಿಕನ್ ಯೂತ್ ಫೆಡರೇಷನ್ ಪ್ರತಿಭಟನೆ ನಡೆಸಿತು.
ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಕೀಲ ಕಿಶೋರ ರಾಜೇಶ ಅವರ ಭಾವಚಿತ್ರ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಮುಖಂಡರು ಮಾತನಾಡಿ, “ನ್ಯಾಯಾಂಗದ ಗೌರವಕ್ಕೆ ಧಕ್ಕೆಯುಂಟು ಮಾಡುವ ಇಂತಹ ಕೃತ್ಯಗಳು ದೇಶದ್ರೋಹಕ್ಕಿಂತ ಕಡಿಮೆ ಅಲ್ಲ. ಜಾತಿವಾದಿ ಮನೋಭಾವದಿಂದ ನಡೆದಿರುವ ಈ ಘಟನೆಗೆ ಮಾದರಿ ಶಿಕ್ಷೆ ನೀಡಬೇಕು. ಅಷ್ಟೇ ಅಲ್ಲದೆ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಹನುಮಂತ ಇಟಗಿ, ಗೌರವ ಸಂಚಾಲಕ ಸಂತೋಷ ಮೇಲ್ಮನಿ, ವಿನೋದ ಕಾಂಬಳೆ, ಮುತ್ತಣ್ಣ ನಾಡಗೀರಿ, ವಿಜಯಕುಮಾರ ಸಿಂಧೆ, ಬಾಳು ಬಿಕೆ, ಸಿದ್ದು ಬೇಲಸೂರ, ಗೀತಾ ಮುದಗಲ್, ಮಲ್ಲಿಕ ಕಟ್ಟಿಮನಿ, ಅರುಣ ಸಾಗರ, ರಾಣು ಮುದ್ಧನಕರ್, ಮಿಲಿಂದ್ ಸನಗುಂದಿ, ಮಲ್ಲಿಕಾರ್ಜುನ್ ಹೊಸಮನಿ, ಶಿವಕುಮಾರ ಜಾಲವಾದ, ವಿಜಯಕುಮಾರ ಸಿಂಧೆ, ಶಿವಾನಂದ ಬುಕ್ಕನ, ಅಶೋಕ ಶರ್ಮಾ, ನವೀನ್ ಸಾರ್ಮಾಟ್, ಜಗದೀಶ ಅಷ್ಟಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.