ಎಕರೆಗೆ 25 ಸಾವಿರ ಪರಿಹಾರಕ್ಕೆ ಆಗ್ರಹಿಸುವೆ : ನಿಕಿಲ್ ಕುಮಾರಸ್ವಾಮಿ

ತಾಲೂಕಿನ ಜನರ ಸಮಸ್ಯೆಯನ್ನ ಕೆಳಲು ಶಾಸಕರು, ಸಂಸದರು ಹಾಗೂ ಸಚಿವರು ಬಂದಿಲ್ಲ ಎಂಬುವುದು ಹೆಳುವುದರ ಬದಲು ಅವರನ್ನ ಪ್ರಶ್ನೆ ಮಾಡಬೇಕು ಎಂದು ರೈತರಿಗೆ ತಿಳಿಸಿದರು.
ಜೇವರ್ಗಿ : ಜೇವರ್ಗಿ ತಾಲೂಕಿನಲ್ಲಿ ಮಳೆಯಿಂದ ಬಹಳಷ್ಟು ಹಾನಿಯಾಗಿದೆ ಎಂಬುವುದು ಕಾಣಿಸುತ್ತಿದೆ. ಪ್ರತಿ ಎಕರೆಗೆ 25000 ರೂ ಪರಿಹಾರವನ್ನು ನೀಡುವಂತೆ ರಾಜ್ಯಸರಕಾರಕ್ಕೆ ರೈತರ ಪರವಾಗಿ ಆಗ್ರಹಿಸುವೆ. ತಾಲೂಕಿನಲ್ಲಿ ಆಗಿರುವ ಬೆಳೆ ಹಾನಿಯನ್ನ ವಿಕ್ಷಿಸಲು ಶಾಸಕರು, ಸಂಸದರು ಹಾಗೂ ಸಚಿವರು ಬಂದಿಲ್ಲ ಎಂದು ಹೆಳುವುದರ ಬದಲಿಗೆ ನಿವಿಗಳು ಅವರನ್ನ ಪ್ರಶ್ನಿಸಬೇಕು ಎಂದು ರೈತರಿ ಮನವರಿಕೆ ಮಾಡಿದರು.
ತಾಲೂಕಿನ ಕಟ್ಟಿ ಸಂಗಾವಿ, ಮಾವನೂರ ಕ್ರಾಸ್, ಸೊನ್ನ, ಅವರಾದ ಹಾಗೂ ಗಂವ್ಹಾರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ರೈತರ ಬೆಳೆಗಳನ್ನ ವಿಕ್ಷಣೆ ಮಾಡಿದರು,ಮಳೆಯಿಂದ ರೈತರು ಬೆಳೆದ ಬೆಳೆಗಳು ಹಾನಿಯಾಗಿರುವುದರ ಬಗ್ಗೆ ಕೇಂದ್ರ ಸರಕಾರಕ್ಕೆ ಕುಮಾರ ಸ್ವಾಮಿಯವರು ಗಮನಕ್ಕೆ ತರಲಿದ್ದಾರೆ. ರಾಜ್ಯ ಸರಕಾರ ಈ ಕುರಿತು ಬೇಗನೆ ನಿರ್ಣಯ ಮಾಡುವುದರ ಮುಖಾಂತರ ರಾಝ್ಯದ ರೈತರಿಗೆ ಸರಿಯಾದ ಪರಿಹಾರವನ್ನು ನೀಡಬೇಕು. ಪ್ರತಿ ಎಕರೆಗೆ 25000 ರೂಪಾಯಿಗಳನ್ನ ನೀಡುವುದರ ಮುಖಾಂತರ ಸರಕಾರ ರೈತರಿಗೆ ಧೈರ್ಯ ತುಂಬಬೇಕು. ಕುಡಲೆ ರಾಜ್ಯ ಸರಕಾರಕ್ಕೆ ನಿಮ್ಮೆಲರ ಪರವಾಗಿ ಬೆಳೆ ಪರಿಹಾರವನ್ನು ನೀಡುವಂತೆ ಆಗ್ರಹಿಸುವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೊಳ, ದಂಡಪ್ಪ ಸಾಹೂ ಕುಳಗೇರಿ, ಸಿದ್ದಣ್ಣ ಹೂಗಾರ, ನಾನಾಗೌಡ ಅಲ್ಲಾಪೂರ, ಸಿದ್ದಣ್ಣ ದೇಸಾಯಿ, ಬಸವರಜಾ ಪಾಟೀಲ್ ನರಿಬೊಳ, ನಾಸೀರ ಖಾನ್ ನಾಡಗೌಡ, ಶಿವಾನಂದ ಮಾಕಾ , ಎಸ್ ಎಸ್ ಸಲಗಾರ, ಶಿವನಂದ ದ್ಯಾಮಗೊಂಡ, ಶರಣು ಹೊಸಮನಿ, ಶ್ರೀಶೈಲಗೌಡ ಕರಕಳ್ಳಿ, ರವಿ ಪಡಶೆಟ್ಟಿ, ಮಾಹಂತೇಶ ಪವಾರ, ಪುಂಡಲಿಕ ಗಾಯಕ್ವಾಡ, ಪ್ರಭು ಜಾದವ, ಎನ್ ಎಸ್ ಬಿರದಾರ, ಶರಣು ವಡಗೇರಿ, ದೊಡ್ಡಪ್ಪ ಮಲ್ಲಾ ಕೆ, ರುಕುಂ ಪಟೇಲ್, ವಿಶಾಲ ಸೇರಿದಂತೆ ಅನೇಕರಿದ್ದರು.