ಪ್ರಾರ್ಥನಾ ಶಾಲೆಯಲ್ಲಿ ಉಚಿತ ತಪಾಸಣೆ ಶಿಬಿರದಲ್ಲಿ 981 ಜನರ ಆರೋಗ್ಯ ತಪಾಸಣೆ
94 ಜನರು ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಸಮಾಜಮುಖಿ ಕಾಯಕ ಸುಲಭವಲ್ಲ.

ಸಮಾಜದಲ್ಲಿನ ಸಮಸ್ಯೆ ಮತ್ತು ಬಡವರ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂಧಿಸುವ ಕೆಲಸ ಮಾಡಬೇಕು. ಆರೋಗ್ಯ ತಪಾಸಣೆ ಶಿಬಿರವು ಸಮಾಜಮುಖಿ ಕೆಲಸಗಳಲ್ಲಿ ಒಂದಾಗಿದೆ. ಅಂತಹ ಕಾರ್ಯ ಪಟ್ಟಣದಲ್ಲಿ ಮಾಡುತ್ತಿರುವುದು ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿ-ಸೋಮಶೇಖರ ಶಿವಾಚಾರ್ಯ,ಕಂಬಳೇಶ್ವರ ಸಂಸ್ಥಾನ ಮಠ.
ಚಿತ್ತಾಪುರ:ಜನರು ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಬಹುದಾಗಿದೆ ಆದರೆ ಸಮಾಜಮುಖಿ ಕಾರ್ಯ ಮಾಡುವುದು ಸುಲಭವಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ ಹೆಳಿದ್ದಾರೆ.
ಪಟ್ಟಣದಲ್ಲಿ ದಿಗ್ಗಾಂವಕರ್ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿರುವ ಪ್ರಾರ್ಥನಾ ಆಂಗ್ಲ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ಬೃಹತ್ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಸಂಸ್ಥೆ ನಡೆಸುವುದೇ ಕಷ್ಟಕರವಾಗಿರುವಾಗ ಸಮಾಜಮುಖಿ ಕಾರ್ಯ ಮಾಡುವುದು ಸರಳವಲ್ಲ. ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಜನೋಪಯೋಗಿ ಕಾರ್ಯದಿಂದ ಸಮಾಜದಲ್ಲಿ ಬಡವರಿಗೆ ಆರ್ಥಿಕ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯಲಾಗದವರಿಗೆ ಆರೋಗ್ಯ ತಪಾಸಣೆ ಶಿಬಿರ ವರದಾನವಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಮಾತನಾಡಿ,ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಡವರು ದೂರದ ನಗರಗಳಲ್ಲಿನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ತುಂಬಾ ಕಷ್ಟವಾಗುತ್ತದೆ.ಹೆಸರಾಂತ ಆಸ್ಪತ್ರೆಗಳ ವೈದ್ಯರನ್ನು ಕರೆಯಿಸಿ ಸಂಪೂರ್ಣ ಉಚಿತವಾಗಿ ತಪಾಸಣೆ ಮತ್ತು ಚಿಕಿತ್ಸೆ ಕೊಡಿಸುವುದು ಸಂಸ್ಥೆಯ ಉತ್ತಮ ಕೆಲಸ ಎಂದು ಅವರು ಶ್ಲಾಘಿಸಿದರು.
ಕುರಾಳ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ಅಜಯ ಕುರಾಳ ಅವರು ಮಾತನಾಡಿ, ಬೆಳಗ್ಗೆ ಶಾಲೆಗೆ ಕಳುಹಿಸುವ ಧಾವಂತದಲ್ಲಿ ಚಿಕ್ಕ ಮಕ್ಕಳಿಗೆ ಚಹಾ, ಬ್ರೆಡ್, ಬೇಕರಿಗಳಲ್ಲಿನ ಜಂಕ್ ಆಹಾರ ಪದಾರ್ಥ ಕೊಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತಿದೆ. ಮನೆಯಲ್ಲಿಯೆ ಸಿದ್ಧಪಡಿಸಿದ ಆಹಾರ ಕೊಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳತ್ತದೆ ಎಂದು ಅವರು ಹೇಳಿದರು.
ಶಿಬಿರದಲ್ಲಿ ಯಾದಗಿರಿಯ ವೇಧ ಕಣ್ಣಿನ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ, ಕುರಾಳ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ, ಯಶೋಧಾ ಮಕ್ಕಳ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಜನರ ಆರೋಗ್ಯ ತಪಾಸಣೆ ಮಾಡಿದರು.ಒಟ್ಟು 981 ಜನರ ಆರೋಗ್ಯ ತಪಾಸಣೆ ಮಾಡಲಾಯಿತು. 94 ಜನರು ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಸ್ತ್ರೀರೋಗ ತಜ್ಞ ವೈದ್ಯ ಡಾ.ಪಾರ್ವತಿ ಕುರಾಳ, ಶಿಬಿರದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಜಗದೇವ ದಿಗ್ಗಾಂವಕರ್ ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯ ಅವರು ಮಾತನಾಡಿದರು.
ಶಾಲೆಯು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿದೆ. ಶಿಕ್ಷಣ ಕೊಡುವುದಷ್ಟೆ ಶಾಲೆಯ ಕೆಲಸವಲ್ಲ ಸಾಮಾಜಿಕ ಕೆಲಸಗಳಿಂದ ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದು ಮುಖ್ಯವಾಗಿದೆ. ಅಂತಹ ಚಟುವಟಿಕೆಗಳ ಪೈಕಿ ಆರೋಗ್ಯ ಶಿಬಿರ ಒಂದಾಗಿದೆ. ಸಂಸ್ಥೆಯಿ0ದ ಭವಿಷ್ಯದಲ್ಲಿ ಇನ್ನೂ ಅನೇಕ ಸಾಮಾಜಮುಖಿ ಕಾರ್ಯ ಮಾಡುವುದ ಯೋಜನೆಯಿದೆ.- ಜಗದೇವ ದಿಗ್ಗಾಂವಕರ್, ಅಧ್ಯಕ್ಷರು,ದಿಗ್ಗಾಂವಕರ್ ಎಜ್ಯಕೇಷನ್ ಮತ್ತು ಚಾರಿಟೃಬಲ್ ಟ್ರಸ್ಟ್
ಶಿಬಿರದಲ್ಲಿ ಸೋಮಶೇಖರ ಪಾಟೀಲ್ ಬೆಳಗುಂಪಾ,ಸೋಮಶೇಖರ ಹಿರೇಮಠ,ವಿಠಲ್ ವಾಲ್ಮೀಕಿ ನಾಯಕ, ಮಲ್ಲಿಕಾರ್ಜುನ ಮೋದಿ,ಸಿದ್ಧಲಿಂಗ ಸಾಹು ನಾಲವಾರ,ಭೀಮಾಶಂಕರ ಮೇಟಿಕರ್, ಮಲ್ಲು ಇಂದೂರು, ನಾಗರಾಜ ರೇಷ್ಮಿ,ವೀರಣ್ಣ ಸುಲ್ತಾನಪುರ, ವಿಶ್ವ ಟೋನಿ,ನೇಹಾಲ್ ಪಾಟೀಲ್ ಬೆಳಗುಂಪಾ, ಪ್ರಸಾದ್ ಅವಂಟಿ,ಬಸವ0ತ ದಿಗ್ಗಾಂವಕರ್,ಮಹೇಶ ಬಾಳಿ,ಮನೋಹರ ಹಡಪದ್ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಸಾವಿರಾರು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಇದ್ದರು.
ವಿದ್ಯಾರ್ಥಿನಿ ಆರ್.ಸುಮನಾ ಸ್ವಾಗತಿಸಿದರು.ವಿದ್ಯಾರ್ಥಿನಿ ಬಾಗ್ಯಲಕ್ಷ್ಮಿ ನಿರೂಪಿಸಿದರು. ವಿದ್ಯಾರ್ಥಿನಿ ಪೌರ್ಣಮಿ ವಂದಿಸಿದರು.
ಶಿಬಿರದಲ್ಲಿ ದಂತ ವೈದ್ಯೆ ಡಾ.ಪೂನಂ ವಾಗ್ಮೋಡೆ, ಡಾ.ಮಿರಾಜ್, ವೇಧ ಆಸ್ಪತ್ರೆಯ ವೈದ್ಯ ಡಾ.ನವನಿತಾ ರೆಡ್ಡಿ, ಡಾ.ವೆಂಕಟೇಶ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಸೇರಿದಂತೆ ಒಟ್ಟು 30 ಜನ ವೈದ್ಯಕೀಯ ತಂಡ ಆರೋಗ್ಯ ತಪಾಸಣೆ ನಡೆಸಿದರು.
ಶಿಬಿರದಲ್ಲಿ ಆಗಮಿಸಿದ್ದ ದೃಷ್ಟಿದೋಷವುಳ್ಳ 218 ಜನರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಯಿತು. ಕಣ್ಣಿನ ಆರೋಗ್ಯ ಸಮಸ್ಯೆಯ 94 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲು ಆಯ್ಕೆ ಮಾಡಲಾಯಿತು.



