ಕಲಬುರಗಿಜಿಲ್ಲಾಸುದ್ದಿ
ಅಲ್ಲಮಪ್ರಭು ಪಾಟೀಲ 69ನೇ ಜನ್ಮದಿನ ಆಚರಣೆ
ಶ್ರವಣದೋಷ ಮಕ್ಕಳಿಗೆ ಕ್ರೀಡಾ ಸಾಮಗ್ರಿ, ಬ್ಯಾಗ್ ಮತ್ತು ಅನ್ನದಾಸೋಹ

ಕಲಬುರಗಿ: ನಗರದ ಫೋಪೇಸರ್ ಕಾಲೋನಿಯಲ್ಲಿರುವ ಸಿದ್ಧಾರ್ಥ ಶ್ರವಣದೋಷವುಳ್ಳ (ಕಿವುಡ ಮತ್ತು ಮೂಕ) ಬಾಲಕರ–ಬಾಲಕಿಯರ ವಸತಿಯುತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರ 69ನೇ ಜನ್ಮದಿನದ ಅಂಗವಾಗಿ ವಿಶೇಷ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಹುಲ ಅಶೋಕ ಹೋನ್ನಳ್ಳಿ ಅವರ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಕ್ರೀಡಾ ಆಟಿಕೆ ಸಾಮಗ್ರಿಗಳು, ಸ್ಕೂಲ್ ಬ್ಯಾಗ್‌ಗಳು ವಿತರಿಸಲಾಯಿತು. ನಂತರ ಮಕ್ಕಳಿಗೆ ಅನ್ನದಾಸೋಹ ನಡೆಸಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಮಾಜಿ ಮೇಯರ್ ರವಿ ಹೋನ್ನಳ್ಳಿ, ಮುಖಂಡರಾದ ಅಭಿಷೇಕ ಎ. ಪಾಟೀಲ, ಉದಯ ಪಾಟೀಲ, ಡಾ. ಸಿದ್ಧಾರ್ಥ ಕೋರವಾರ, ಸಮಿರ ಭಾಗವಾನ, ಕುಮಾರ ಯಾದವ, ಪ್ರಮೋದಕುಮಾರ, ದೇವೀಂದ್ರ ನಡುವಿನಮನಿ, ಹರಿಶ ಖಾನಾಪೂರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.



