ಕಲಬುರಗಿಜಿಲ್ಲಾಸುದ್ದಿ
ಚಂದ್ರಶೇಖರ ಹಡಪದ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕಲಬುರಗಿ: ಬೆಂಗಳೂರಿನ ಅಕ್ಕ ಮಹಾದೇವಿ ಸಂಭಾಗಣ ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಲಬುರಗಿಯ ಹಡಪದ ಸಮಾಜದ ತಾಲೂಕ ಅಧ್ಯಕ್ಷ ಚಂದ್ರಶೇಖರ ಬಿ. ಹಡಪದ ತೋನಸನಹಳ್ಳಿ (ಟಿ) ಅವರನ್ನು ಅನನ್ಯ ಕನ್ನಡ ಸೇವೆಯನ್ನು ಪರಗಣಿಸಿ 2025 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಬೈರಮಂಗಲ ರಾಮೇಗೌಡರು, ಪಾರ್ವತಿ ಬಿ.ಎ, ಮೈಸೂರು ರಮಾನಂದ, ಶಶಿಧರ್ ಕೋಟೆ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, , ಸುರೇಶ್ ಕೋರಕೊಪ್ಪ, ಧನಲಕ್ಷ್ಮಿ, ವಾ.ಚ ಚನ್ನೇಗೌಡ, ವೈ ಜೆ ಪದ್ಮನಾಗರಾಜ, ಡಾ. ಡಿ ಪೂಜಾರಿ ಹುಂಡೇಕಲ್, ಸಂಗನ ಗೌಡ್ರು, ಜೈ ಕಿರಣ, ಡಾ. ಮಂಜುಳಾ ಪಾವಗಡ, ಡಾ.ಎಂ.ಪಿ ಮಂಜುನಾಥ್, ನಂದಾದೀಪ ಸೇರಿದಂತೆ ಇತರರು ಇದ್ದರು.



