ಕಲಬುರಗಿಜಿಲ್ಲಾಸುದ್ದಿ

ಡಿ. 1 ರಂದು ಸಂವಿಧಾನ ಸಮಾವೇಶ ಮಾಡಲು ಒಮ್ಮತದ ನಿರ್ಧಾರ: ಮಲ್ಲಪ್ಪ ಹೊಸಮನಿ

ಚಿತ್ತಾಪುರ: ಸಂವಿಧಾನ ಸಂರಕ್ಷಣಾ ಸಮಿತಿ ಚಿತ್ತಾಪುರ ವತಿಯಿಂದ ಎಲ್ಲಾ ಸಮಾಜಗಳು ಒಳಗೊಂಡಂತೆ ಪಟ್ಟಣದಲ್ಲಿ ಡಿಸೆಂಬರ್ 1 ರಂದು ಸಂವಿಧಾನ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದು ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಕುರುಬ ಸಮಾಜದ ಅಧ್ಯಕ್ಷ ಬಸವರಾಜ ಹೊಸಳ್ಳಿ, ಕೋಲಿ ಸಮಾಜದ ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಮಾದಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಬಂಜಾರ ಸಮಾಜದ ಅಧ್ಯಕ್ಷ ಭೀಮಸಿಂಗ್ ಚವ್ಹಾಣ ಅವರು ಜಂಟಿಯಾಗಿ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ನವೆಂಬರ್ 26 ರಂದು ನಡೆಯಬೇಕಿದ್ದ ಸಂವಿಧಾನ ಸಮರ್ಪಣದ ದಿನದ ಅಂಗವಾಗಿ ಸಂವಿಧಾನ ಸಮಾವೇಶ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಡಿಸೆಂಬರ್ 1 ರಂದು ಚಿತ್ತಾಪುರ ಸಂವಿಧಾನ ಸಮಾವೇಶ ಕಾರ್ಯಕ್ರಮವನ್ನು ನಡೆಸಲು ಎಲ್ಲಾ ಸಮಾಜದ ಅಧ್ಯಕ್ಷರುಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು

ಪಟ್ಟಣದಲ್ಲಿ ಡಿಸೆಂಬರ್ 1 ರಂದು ಮಧ್ಯಾಹ್ನ 2 ಗಂಟೆಗೆ ಚಿತ್ತಾವಲಿ ವೃತ್ತದಿಂದ ಭೀಮನಡೆಗೆ ಜಾಥಾ ಕಾರ್ಯಕ್ರಮವನ್ನು ಪ್ರಾರಂಭಿಸಿ ಬುದ್ಧ, ಬಸವ, ಅಂಬೇಡ್ಕರ್ ಅವರ ಭಾವಚಿತ್ರ ಗಳೊಂದಿಗೆ ಸಂವಿಧಾನದ ಪೀಠಿಕೆ, ರಾಷ್ಟ್ರಧ್ವಜ ಹಾಗೂ ಇತರೆ ಸಮಾಜಗಳ ಧ್ವಜಗಳೊಂದಿಗೆ ಪಟ್ಟಣ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಸಾಯಂಕಾಲ 4 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರವರು ವಹಿಸಲಿದ್ದಾರೆ ಮತ್ತು ವಿಶೇಷ ಭಾಷಣಕಾರರಾಗಿ ಉರುಲಿಂಗ ಪೆದ್ದಿ ಮಠದ ಮೈಸೂರು ಜ್ಞಾನಪ್ರಕಾಶ ಸ್ವಾಮೀಜಿ ಆಗಮಿಸಲಿದ್ದಾರೆ. ಇನ್ನೂ ಆನೇಕ ಪ್ರಗತಿಪರ ಹಾಗೂ ಸಂವಿಧಾನ ವಿದ್ವಾಂಸರುಗಳಿಗೆ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಆರ್.ಎಸ್.ಎಸ್.ನವರು ನಕಲಿ ದೇಶಭಕ್ತರಾಗಿದ್ದು, ಅವರು ದೇಶಭಕ್ತಿಯ ಹೆಸರಿನ ಮೇಲೆ ದೇಶದ್ರೋ ಕೆಲಸ ಮಾಡುತ್ತಿದ್ದು, ಇವರು ಅಪ್ಪಟ ದೇಶವಿರೋಧಿಗಳಾಗಿದ್ದಾರೆ. ಇವರು ನಮ್ಮ ದೇಶದ ಸಂವಿಧಾನವನ್ನು ಒಪ್ಪುವುದಿಲ್ಲ. ನಮ್ಮ ರಾಷ್ಟ್ರೀಯ ಧ್ವಜ ಒಪ್ಪುವುದಿಲ್ಲ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ರವರ ಸಿದ್ದಾಂತಗಳು ಒಪ್ಪುವುದಿಲ್ಲ. ಆರ್.ಎಸ್.ಎಸ್.ನವರು ಇಲ್ಲಿಯವರೆಗೆ ತಾವು ಮಾಡಿದ್ದೇ ಸತ್ಯವೆಂದು ತಿಳಿದು. ಯಾವುದೇ ಕಾರ್ಯಕ್ರಮ ನಡೆಸಬೇಕಾದರೆ, ಸರ್ಕಾರದ ಅನುಮತಿ ಪಡೆಯುತ್ತಿರಲಿಲ್ಲ. ಇತ್ತೀಚಿಗೆ ಚಿತ್ತಾಪುರ ಮತಕ್ಷೇತ್ರದ ಜನರು ದೇಶದ ಕಾನೂನನ್ನು ಪಾಲಿಸಲು ತಿಳಿಸಿ ಕೊಟ್ಟಿರುತ್ತಾರೆ. ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಷರತ್ತು ಬದ್ದ ನೀಡಿ, ಸರ್ಕಾರ ಆದೇಶ ನೀಡಿರುತ್ತದೆ.

ನ್ಯಾಯಾಲಯದ ಮೊರೆ ಹೋಗಿ ಕೊನೆಗೂ ಸಂವಿಧಾನದ ಅಡಿಯಲ್ಲಿಯೇ ನ್ಯಾಯ ಪಡೆಯಲು ಅನಿವಾರ್ಯವಾಗಿರುತ್ತದೆ. ಆರ್.ಎಸ್.ಎಸ್.ನವರು ಚಿತ್ತಾಪುರ ಕ್ಷೇತ್ರದ ಶಾಸಕರಿಗೆ ಕೆಟ್ಟ ಹೆಸರು ತರುವ ಅನೇಕ ಪ್ರಯತ್ನ ಮಾಡಿದರೂ. ಅದಕ್ಕೆ ಅವರಿಗೆ ಯಾವುದೇ ಪ್ರತಿಫಲ ಸಿಗಲಿಲ್ಲ. ಪ್ರಿಯಾಂಕ್ ಖರ್ಗೆಯವರು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು. ಬುದ್ಧ, ಬಸವ, ಅಂಬೇಡ್ಕರ್ ರವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವ ಜನಾಂಗದವರಿಗೂ ಸಮಪಾಲು ಕೊಡುವ ಸಚಿವರಾಗಿರುತ್ತಾರೆ. ಸಂವಿಧಾನ ವಿರೋಧಿ ಚಟುವಟಿಕೆ ಹಾಗೂ ಕಾನೂನು ಮೀರಿದವರಿಗೆ ಕಾನೂನಿನ ಅರಿವು ಕೊಟ್ಟಿರುತ್ತಾರೆ ಎಂದು ಹೇಳಿದರು.

ಡಿಸೆಂಬರ್ 1 ರಂದು ನಡೆಯಲಿರುವ ಸಂವಿಧಾನ ಸಮಾವೇಶದಲ್ಲಿ ತಾಲೂಕಿನ ಎಲ್ಲಾ ಸಮಾಜದ ಜನರು ಹಾಗೂ ಪ್ರಗತಿಪರ ವಿಚಾರವಂತರು, ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಡಪದ ಸಮಾಜದ ಅಧ್ಯಕ್ಷ ರಮೇಶ್ ಕೊಲ್ಲೂರು, ಮುಸ್ಲಿಂ ಸಮಾಜದ ಎಂ.ಎ.ರಷೀದ್, ಕಾಶಿ ವಡ್ಡರ ಸಮಾಜದ ವಿಠಲ್ ಕಟ್ಟಿಮನಿ, ವಾಲ್ಮೀಕಿ ಸಮಾಜದ ಸಾಯಬಣ್ಣ ಲಾಡ್ಲಾಪೂರ, ಸುರೇಶ್ ಮೆಂಗನ್, ಮಲ್ಲಿಕಾರ್ಜುನ ಬೆಣ್ಣೂರಕರ್, ಬಸವರಾಜ ಮುಡಬೂಳ, ಸೂರಜ್ ಕಲ್ಲಕ್ ಸೇರಿದಂತೆ ಇತರರು ಇದ್ದರು.

Read more: ಡಿ. 1 ರಂದು ಸಂವಿಧಾನ ಸಮಾವೇಶ ಮಾಡಲು ಒಮ್ಮತದ ನಿರ್ಧಾರ: ಮಲ್ಲಪ್ಪ ಹೊಸಮನಿ

Related Articles

Leave a Reply

Your email address will not be published. Required fields are marked *

Back to top button