ಕಲಬುರಗಿ
ಅಲ್ಲಮಪ್ರಭು ಪಾಟೀಲ ಜನ್ಮದಿನ: ನಿರಾಶ್ರಿತರ ಕೇಂದ್ರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಅನ್ನದಾಸೋಹ

ಕಲಬುರಗಿ: ನಗರದ ಬಿದ್ದಾಪೂರ ಕಾಲನಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ, ಶಾಸಕ ಅಲ್ಲಮಪ್ರಭು ಪಾಟೀಲ ಅವರ ಜನ್ಮದಿನದ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಯಿತು.
ದಕ್ಷಿಣ ವಿಧಾನಸಭಾ ಕ್ಷೇತ್ರ (ಸಿಟಿ) ಯುವ ಕಾಂಗ್ರೆಸ್ ಅಧ್ಯಕ್ಷ ಟೈಗರ್ ವಿಘ್ನೆಶ್ವರ ಮತ್ತು ಎನ್ಎಸ್ಯುಐ ಘಟಕದ ಅಧ್ಯಕ್ಷ ಗೌತಮ ಕರಿಕಲ್ ಅವರ ನೇತೃತ್ವದಲ್ಲಿ ನಿರಾಶ್ರಿತರಿಗೆ ಊಟ ವಿತರಿಸಿ ಮಾನವೀಯ ಸೇವೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಭಿಷೇಕ ಎ. ಪಾಟೀಲ, ಅನೇಕ ಕಾಂಗ್ರೆಸ್ ನಾಯಕರು, ಯುವಕರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.



