ಕಲಬುರಗಿಜಿಲ್ಲಾಸುದ್ದಿ

ಕಬ್ಬಿನ ಬೆಂಬಲ ಬೆಲೆಯಲ್ಲಿ ಸುಳ್ಳು ಮಾಹಿತಿ: ಭೀಮರಾಯ ಕಲ್ಲೂರು ಅಮಾನತ್ತಿಗೆ ಆಗ್ರಹ

ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ

ಕಲಬುರಗಿ:ಅಫಜಲಪುರದಲ್ಲಿ ಕಬ್ಬಿನ ಬೆಂಬಲ ಬೆಲೆ ಕುರಿತಂತೆ ನಡೆದ ಬಂದ್ ಮತ್ತು ಪ್ರತಿಭಟನೆಯಲ್ಲಿ ಸುಳ್ಳು ಮಾಹಿತಿ ನೀಡಿ ರೈತರು ಹಾಗೂ ಹೋರಾಟಗಾರರನ್ನು ದಿಕ್ಕುತಪ್ಪಿಸಿದ ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಕಲ್ಲೂರು ಅವರನ್ನು ತಕ್ಷಣವೇ ಅಮಾನತ್ತುಗೊಳಿಸಬೇಕು ಎಂದು ಜೆಡಿಎಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ ಬಡದಾಳ ಆಗ್ರಹಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಮನವಿ ಸಲ್ಲಿಸಿದ ಅವರು, ಅಫಜಲಪುರ ಬಂದ್ ಸಂದರ್ಭದಲ್ಲಿ ಸಾವಿರಾರು ಜನರ ನಡುವೆ, ಶಾಸಕರ ಸಮ್ಮುಖದಲ್ಲಿ, ಉಪನಿರ್ದೇಶಕರು “ಕಾರ್ಖಾನೆ ಮಾಲೀಕರೊಂದಿಗೆ ಚರ್ಚೆಯಾಗಿ ಕಬ್ಬಿನ ಬೆಂಬಲ ಬೆಲೆ ₹3165” ಎಂದು ಘೋಷಿಸಿದ್ದರಿಂದ ರೈತರು ಹಾಗೂ ಹೋರಾಟಗಾರರು ಪ್ರತಿಭಟನೆಗಳನ್ನು ಹಿಂಪಡೆದಿದ್ದೇವೆ ಎಂದರು.

ಆದರೆ ನಂತರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕೃತ ಬೆಲೆಯನ್ನು ₹2950 + ₹50 = ₹3000 ಎಂದು ಘೋಷಿಸಿದ್ದು, ಇದರಿಂದ ಅಧಿಕಾರಿಯ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ ಎಂದು ರಾಜಕುಮಾರ ಬಡದಾಳ ಆರೋಪಿಸಿದರು.

“ಸುಳ್ಳು ಮಾಹಿತಿ ನೀಡಿ ರೈತರ ಹೋರಾಟವನ್ನು ನಿಲ್ಲಿಸಲು ಕಾರಣವಾದ ಅಧಿಕಾರಿಯನ್ನು ತಕ್ಷಣ ಅಮಾನತ್ತುಗೊಳಿಸಬೇಕು. ಇಲ್ಲದಿದ್ದರೆ ಉಪನಿರ್ದೇಶಕರು ಘೋಷಿಸಿದಂತೆ ₹3165 ದರವೇ ನಿಗದಿಪಡಿಸಬೇಕು” ಎಂದು ಆಗ್ರಹಿಸಿದರು.

ವಾರದೊಳಗೆ ಬೇಡಿಕೆಗೆ ಸ್ಪಂದಿಸದಿದ್ದರೆ, ಜೆಡಿಎಸ್ ಪಕ್ಷವು ರೈತರ ಜೊತೆಗೆ ಉಗ್ರ ಹೋರಾಟಕ್ಕೆ ಇಳಿಯುವುದಾಗಿ ಬಡದಾಳ ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button