ಅಲ್ಲಮಪ್ರಭು ಪಾಟೀಲ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಯಶಸ್ವಿ

ಕಲಬುರಗಿ:ನಗರದ ಎಂಎಸ್‌ಕೆ ಮಿಲ್‌ನಲ್ಲಿರುವ ಶಾ ಜಿಲಾನಿ ಸಭಾಗೃಹದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಜನ್ಮದಿನದ ಪ್ರಯುಕ್ತ, ಅಲ್ಲಮಪ್ರಭು ಪಾಟೀಲ ಅಭಿಮಾನಿ ಮುಸ್ಲಿಂ ಅಲ್ಪಸಂಖ್ಯಾತ ಸಂಘದ ಅಧ್ಯಕ್ಷ ಮೋದಿನ್ ಪಟೇಲ್ ಅಣಬಿ ಅವರ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರವು ಭಾರೀ ಜನಸಂದಣೆ ಕಂಡು ಯಶಸ್ವಿಯಾಗಿ ನೆರವೇರಿತು.
2500 ರೋಗಿಗಳಿಗೆ ಪರೀಕ್ಷೆ – 40 ಕಣ್ಣಿನ ಶಸ್ತ್ರಚಿಕಿತ್ಸೆ ಸಿದ್ಧತೆ
ಈ ಮೆಗಾ ಶಿಬಿರದಲ್ಲಿ ಸುಮಾರು 2500 ಪುರುಷ ಮತ್ತು ಮಹಿಳಾ ರೋಗಿಗಳು ವಿವಿಧ ಕಾಯಿಲೆಗಳಿಗಾಗಿ ಪರೀಕ್ಷಿಸಲ್ಪಟ್ಟರು. ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಣ್ಣಿನ ತಪಾಸಣೆಯಲ್ಲಿ 40 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದ್ದು, ಅವರಲ್ಲಿ 15 ಮಂದಿಯನ್ನು ತಕ್ಷಣದ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗಿದೆ.
“ಹಣ ವ್ಯರ್ಥ ಮಾಡುವ ಗಲಾಟೆ-ಐಶಾರಾಮಿ ಆಚರಣೆಗಿಂತ ಬಡವರಿಗಾಗಿ ಉಚಿತ ಆರೋಗ್ಯ ಶಿಬಿರ ಆಯೋಜಿಸುವುದು ಅತ್ಯಂತ ಮಾನವೀಯ ಕೆಲಸ. ಎಲ್ಲಾ ರಾಜಕಾರಣಿಗಳು ತಮ್ಮ ಹುಟ್ಟುಹಬ್ಬವನ್ನು ಇದೇ ರೀತಿಯಾಗಿ ಬಡವರ ಸೇವೆ ಮೂಲಕ ಅರ್ಥಪೂರ್ಣಗೊಳಿಸಬೇಕು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.-ವಾಹಾಜ್ ಬಾಬಾ, ಕಾಂಗ್ರೆಸ್ ಮುಖಂಡ.
ಶಿಬಿರದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಶ್ರೀ ಗುರುಬಸವ ಮಹಾಸ್ವಾಮಿಗಳು, ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ್, ಇಲಿಯಾಸ್ ಸೇಠ್ ಬನಾಗವಾನ, ವಾಜಿದ್ ಪಟೇಲ್, ಡಾ. ಜಹೀರ್ ಶೇಖ್, ಶರಣ ಅಲ್ಲಮಪ್ರಭು ಪಾಟೀಲ, ರಜಾಕ್ ಚೌದ್ರಿ, ಸಾಜಿದ್ ಕಲ್ಯಾಣಿ, ಖುಸ್ರೋ ಜಾಗೀರದಾರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಯುನೈಟೆಡ್ ಆಸ್ಪತ್ರೆ, ಅಲ್-ಬದರ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಸಿದ್ರಾಮೇಶ್ವರ ಕಣ್ಣಿನ ಆಸ್ಪತ್ರೆ, ಸಹಾರಾ ಇನ್ಸ್ಟಿಟ್ಯೂಟ್ ಮತ್ತು ಎಮ್.ಡಿ. ಸಿನೆ ಡಯಟ್ ನೂಟ್ರಿಕರ್ ಸಂಸ್ಥೆಗಳು ತಮ್ಮ ವೈದ್ಯಕೀಯ ಸಿಬ್ಬಂದಿ ಮೂಲಕ ಸಂಪೂರ್ಣ ಸಹಕಾರ ನೀಡಿದವು.
ಹುಟ್ಟುಹಬ್ಬದ ಸಂದರ್ಭದಲ್ಲಿ ಬೃಹತ್ ಸಾರ್ವಜನಿಕ ಸೇವೆಯನ್ನು ಆಯೋಜಿಸಿದಕ್ಕಾಗಿ, ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮೋದಿನ್ ಪಟೇಲ್ ಅಣಬಿ ಹಾಗೂ ಅವರ ಸಂಪೂರ್ಣ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಬೃಹತ್ ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಲು ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತರು ನಿರ್ವಹಣಾ ಕರ್ತವ್ಯಗಳನ್ನು ನಿರ್ವಹಿಸಿದರು.



