ಕಲ್ಯಾಣ ಕರ್ನಾಟಕ ರೈತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ

ಕಲಬುರಗಿ: ಕಲ್ಯಾಣ ಕರ್ನಾಟಕದ ರೈತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೇಡಂನ ಮುಖ್ಯ ರಸ್ತೆ ಬಂದ ಮಾಡಿ ಪ್ರತಿಭಟನೆ ನಡೆಸಿ ಸಂಭoದ ಪಟ್ಟ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ಮಾತನಾಡಿ ಕಲ್ಯಾಣ ಕರ್ನಾಟಕದ ರೈತರ ಪ್ರಮುಖ ಬೆಳೆಯಾದ ತೊಗರಿ ಬೆಳೆಯು ಈ ವರ್ಷ ಅತಿಯಾದ ಮಳೆಯಿಂದ ಹಾಳಾಗಿದ್ದು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಎದುರಾಗಿದೆ.
ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ತೊಗರಿಗೆ ಬೆಂಬಲ ಬೆಲೆಯನ್ನು 15000 ಮಾಡಬೇಕು, ತೊಗರಿ ಕಟಾವು ಆಗುವುದಕ್ಕಿಂತ ಮುಂಚಿತವಾಗಿ ಸರಕಾರ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು, ಸರಕಾರದಿಂದ ಕೊಡುತ್ತಿರುವ ಬೆಳೆ ಪರಿಹಾರದಲ್ಲಿ ತಾರತಮ್ಯ ಮಾಡುತ್ತಿದ್ದು ಎಲ್ಲಾ ರೈತರಿಗೂ ಸಂಪೂರ್ಣ ಬೆಳೆ ಹಾನಿ ಪರಿಹಾರ ಒದಗಿಸಬೇಕು, ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುವಿಗೂ ಬೆಲೆ ನಿಗದಿ ಇರುವಂತೆ ರೈತರೇ ಬೆಲೆ ನಿಗದಿ ಪಡಿಸುವಂತೆ ಮಾಡಬೇಕು, ದಳ್ಳಾಳಿಗಳ ಮಧ್ಯಸ್ಥಿಕೆ ಇಲ್ಲದೇ ಸರಕಾರವೇ ನೇರವಾಗಿ ತೋಗರಿ ಖರೀದಿ ಮಾಡಬೇಕು.
ಯಾವುದೇ ಮಾನದಂಡಗಳನ್ನು ಅನುಸರಿಸದೇ ತೊಗರಿಯನ್ನು ಖರೀದಿ ಮಾಡಬೇಕು, ರೈತರ ಇನ್ನಿತರ ಬೆಳೆಗಳಾದ ಜೋಳ, ಕಡಲೆ, ಕುಸುಬೆ, ಹೆಸರು, ಉದ್ದಿನ ಬೆಳೆಗಳಿಗೂ ಬೆಂಬಲ ಬೆಲೆ ಹೆಚ್ಚಿಗೆ ಮಾಡಬೇಕು, ರೈತರ ಜಮೀನುಗಳಿಗೆ 24×7 ವಿದ್ಯುತ್ ಪೂರೈಕೆ ಮಾಡಬೇಕು, ರೈತರ ತೋಟದ ಮನೆಗಳಿಗೆ ರಾತ್ರಿ ವೇಳೆಯಲ್ಲಿ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು, ಜಮೆಯಾದ ರೈತರ ಬೆಳೆ ಪರಿಹಾರದ ಹಣವನ್ನು ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕುಗಳು ರೈತರ ಬೆಳೆ ಸಾಲದ ಜೊತೆಗೆ ವಿಲೀನ ಮಾಡಿಕೊಳ್ಳುತ್ತಿದ್ದು ಬ್ಯಾಂಕುಗಳಿಗೆ ಕಟ್ಟುನಿಟ್ಟಾಗಿ ಪರಿಹಾರದ ಹಣ ನೀಡುವಂತೆ ಆದೇಶ ಮಾಡಬೇಕು. ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ, ಶಿವರಾಜ ತೇಲಕೂರ, ಮಲ್ಲಿಕಾರ್ಜುನ ಮೇಕೆನಿಕ್, ರಾಮಚಂದ್ರ ಗುತ್ತೇದಾರ, ಮಹೇಶ ಪೂಜಾರಿ, ಮೈಲಾರಿ ಡಿಬಳ್ಳಿ, ನರಸಿಂಹ ಮದನಾ, ವೀರೆಶ ಹೂಗಾರ ಸೇರಿದಂತೆ ರೈತ ಮುಖಂಡರು ಇದ್ದರು.



