ಸಿಎಂ ಸಿದ್ದರಾಮಯ್ಯ ಆಡಳಿತಕ್ಕೆ ನಾಗೇಶ ಡಿ ಮುಚಖೇಡ ಹರ್ಷ

ಕಲಬುರಗಿ : ಡಿ. ದೇವರಾಜ್ ಅರಸು ನಂತರ ಅತ್ಯಂತ ದೀರ್ಘಾವಧಿ ಕಾಲ ಸಿಎಂ ಆದ ಸಿದ್ದರಾಮಯ್ಯ ಐತಿಹಾಸಿಕ ಆಡಳಿತಕ್ಕೆ ಹಿಂದುಳಿದ ವರ್ಗಗಳಿಗೆ ತುಂಬಾ ಸಂತಸ ತಂದಿದೆ ಎಂದು ಪಾಣೆಗಾಂವ ಗ್ರಾಮದ ಖಣದಾಳ ಗ್ರಾಮ ಪಂಚಾಯತ್ ಸದಸ್ಯ ನಾಗೇಶ ಡಿ ಮುಚಖೇಡ ಅವರು ತಿಳಿಸಿದ್ದಾರೆ.
ನಾಡು ಕಂಡ ಅಪರೂಪದ ಜನ ನಾಯಕರಾಗಿದ್ದಾರೆ. 2013ರಲ್ಲಿ ಮೊದಲ ಮುಖ್ಯಮಂತ್ರಿ ಆಗಿ ಮುಖ್ಯಮಂತ್ರಿ ಆಗಿದ ದಿನವೇ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಬಡವರ ಹಸಿವು ನೀಗಿಸುವಂತಹ ಕಾರ್ಯ ಅವರಿಂದಾಗಿದೆ ಭಾಗ್ಯಗಳು ಕೃಷಿಭಾಗ್ಯ ಪಶು ಭಾಗ್ಯ ಕ್ಷೀರ ಭಾಗ್ಯ ಶಾದಿ ಭಾಗ್ಯ ವಿದ್ಯಾಶ್ರೀ ಮನಸ್ವಿನಿ ಹೀಗೆ ಹಲವಾರು ಭಾಗ್ಯಗಳನ್ನು ಜಾರಿಗೆ ತಂದು ಕರ್ನಾಟಕ ಜನತೆಗೆ ಉತ್ತಮವಾದ ಆಡಳಿತದ ಕೊಡುಗೆ ನೀಡಿದ್ದಾರೆ.
2023ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಗಳಾಗಿ 5 ಗ್ಯಾರಂಟಿಗಳು ಸಂಪೂರ್ಣವಾಗಿ ಪ್ರತಿಯೊಂದು ಕುಟುಂಬಕ್ಕೂ ಸರಕಾರದ ಯೋಜನೆ ಸಿಗುವ ಹಾಗೆ ಮಾಡಿದ ಧೀಮಂತ ನಾಯಕ ಅವರು ಬಡವರ ಪರ ರೈತರ ಪರ ಮಹಿಳೆಯರ ಪರ ಯುವಕರ ಪರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಹಲವಾರು, ಯೋಜನೆಗಳನ್ನು ತಂದು ನುಡಿದಂತೆ ನಡೆದ ಜನಪ್ರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಅವರ ನಡೆಗೆ ಯಾರೂ ಸರಿಸಾಟಿ ಇಲ್ಲ. 2028 ರವರಿಗೆ ಮುಖ್ಯಮಂತ್ರಿ ಆಗಿ ಇನ್ನು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರ ಪಾಲಿಗೆ ಬೆಳಕಾಗುತ್ತಾರೆ ಎಂಬ ವಿಶ್ವಾಸ ನಮಗಿದೆ ಹಲವು ಜನಪರ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆಂದು ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



