ಕಲಬುರಗಿಜಿಲ್ಲಾಸುದ್ದಿ

ಕ್ರೀಡೆಯಿದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ : ಅಶೋಕ ಮೂಲಗೆ

ಕಲಬುರಗಿ: ಗ್ರಾಮೀಣ ಕ್ರೀಡಾ ವಸತಿ ಶಾಲೆ ಶರಣಸಿರಸಗಿ ವತಿಯಿಂದ, ಪೂಜ್ಯ ಶ್ರೀ ಡಾ. ಡಿ ವಿರೇಂದ್ರ ಹೆಗಡೆ ಧರ್ಮಸ್ಥಳ ಅವರ ಜನ್ಮದಿನದ ಅಂಗವಾಗಿ ಕಲಬುರಗಿ ತಾಲೂಕ ಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟ-2025 ಜರುಗಿತು.

ಕ್ರೀಡಾಕೂಟವನ್ನು ಹೈಕೊರ್ಟ ನ್ಯಾಯವಾದಿಗಳಾದ ಅಶೋಕ ಮೂಲಗೆ ಉದ್ಘಾಟಿಸಿ ಮಾನನಾಡಿ ಇಂದಿನ ಕಾಲದಲ್ಲಿ ಮಕ್ಕಳು ಮೊಬೈಲ ಮತ್ತು ಟಿವಿ ನೋಡಿ ದೈಹಿಕ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಅದನ್ನು ಬಿಟ್ಟು ಕ್ರೀಡೆಯತ್ತ ಗಮನ ಹರಿಸಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಗ್ರಾಮೀಣ ಕ್ರೀಡಾ ವಸತಿ ಶಾಲೆಯ ಅಧ್ಯಕ್ಷರಾದ ಸಿ ಎನ್. ಬಾಬಳಗಾಂವರವರು ಮಾತನಾಡಿ ಇಂತಹ ಕ್ರೀಡೆಯನ್ನು ಆಯೋಜಿನೆ ಮಾಡುವುದೇ ಮಕ್ಕಳ ಸಾಮರ್ಥ್ಯ ಹೆಚ್ಚಿಸಲು ಸಾದ್ಯವಾಗುತ್ತದೆ. ಇದು ಸಂತೋಷದ ವಿಷಯ ಎಂದು ಹೇಳಿದರು. ಶಾಲಾ ಸುಧಾರಣ ಸಮೀತಿ ಗೌರವ ಅಧ್ಯಕ್ಷ ವಿಠ್ಠಲ ಬಿರಾದಾರ ಅವರು ಕ್ರೀಡಾಜ್ಯೋತಿ ಸ್ವೀಕರಿಸಿ ಮಕ್ಕಳಿಗೆ ಶುಭಹಾರೈಸಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದಂತ ಧರ್ಮಸ್ಥಳ ಗ್ರಾ. ಅ. ಯೋ ಕಲಬುರಗಿ ನಿರ್ದೇಶಕ ಗಣಪತಿ ಮಾಳಾಜಿ ಇವರು ಮಾತನಾಡುತ್ತಾ ಮಕ್ಕಳು ಮೊದಲು ಸ್ಪರ್ದೆಯಲ್ಲಿ ಭಾಗವಹಿಸಿವುದೆ ಮೊದಲ ಗೆಲವು. ಸೋಲು ಗೆಲುವಿಗಿಂತ ಭಾಗವಹಿಸಿ ಅನುಭವ ಪಡೆಯುವದೇ ದೊಡ್ಡದು ಎಂದು ಹೇಳಿದರು.

ಬಹುಮಾನವನ್ನು ವಿತರಿಸಿಸಂತಹ ಶಿವಾಂದ ಪದ್ಮಾ ಯವರು ಉನ್ನತ ಶಿಕ್ಷಣ ಪಡೆಯಲು ಕ್ರೀಡೆಗಳು ಕ್ರೀಡೆಗಳಂತಹ ಸಹಕಾರಿಯಾಗುತ್ತವೆ ಎಂದು ಹೇಳಿದರು. ಈ ಕ್ರೀಡಾಕೂಟದಲ್ಲಿ ಒಟ್ಟು 13 ಶಾಲೆಯ ಮಕ್ಕಳು ಭಾಗವಹಿಸಿದರು. ಹುಸೇನ ಪಬ್ಲಿಕ ಶಾಲೆಯ ಮಕ್ಕಳು ಅಧಿಕ ಬಹುಮಾನಗಳನ್ನು ಪಡೆದರು.

ಈ ಕ್ರೀಡಾಕೂಟದಲ್ಲಿ ಬಿ.ಎಸ್ ಪಾಟೀಲ, ಎಸ್. ಎಸ್. ಪಾಟೀಲ, ಉಮಾರಾವ ಮಾನಕರ, ಸಿ. ಎ ಪಾಟೀಲ, ಧನರಾಜ ಭಾಸಗಿ ನಾಗಣ ಪಾಟೀಲ ವೇದಿಕೆಯಲ್ಲಿ ಉಪಸ್ತಿತರಿದ್ದರು. ಶಾಲೆಯ ಮುಖ್ಯಗುರುಗಳು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ವೈಷ್ಣವಿ ಶಿಕ್ಷಕಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button