ಕಲಬುರಗಿಜಿಲ್ಲಾಸುದ್ದಿ

“ವಿದ್ಯಾರ್ಥಿ ಜೀವನ ಶ್ರೇಷ್ಠ, ಸಮಯ ವ್ಯರ್ಥ ಮಾಡದೆ ಗುರಿ ಸಾಧಿಸಿ” ಡಾ. ಸುಭಾಷ ಚಂದ್ರ ದೊಡ್ಡಮನಿ

ಕಲಬುರಗಿ: “ವಿದ್ಯಾರ್ಥಿ ಜೀವನವೇ ಶ್ರೇಷ್ಠ. ಸಮಯವನ್ನು ಹಾಳುಮಾಡದೆ ಕೌಶಲ್ಯ ಬೆಳೆಸಿಕೊಂಡು ಜೀವನದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು” ಎಂದು ವೀರಮ್ಮಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸುಭಾಷ ಚಂದ್ರ ದೊಡ್ಡಮನಿ ಹೇಳಿದರು.

ಅವರು ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ “ಕಾಯಕ ರತ್ನ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

“ಬರಿ ಅಂಕಗಳಿಗಾಗಿ ಮಾತ್ರ ಓದದೆ, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಗಮನ ಕೊಡಿ. ಶಿಕ್ಷಣವೋ ಕೆಲಸವೋ ಯಾವುದು ಮಾಡಿದರೂ ಛಲ, ಪರಿಶ್ರಮ ಇದ್ದರೆ ಗುರಿ ಸಾಧಿಸಬಹುದು. ಪಾಲಕರ ದುಡಿಮೆ ವ್ಯರ್ಥವಾಗದಂತೆ ಶ್ರಮಿಸಿ” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.


ಸೋಶಿಯಲ್ ಮೀಡಿಯಾವನ್ನು ಅನಾವಶ್ಯಕವಾಗಿ ಬಳಸದೇ, ಉಪಯುಕ್ತ ವಿಷಯಗಳಿಂದ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಉದ್ಘಾಟಿಸಿದ ಆರಾಧನಾ ಪಿಯು ಕಾಲೇಜಿನ ಪ್ರಾಂಶುಪಾಲ ಚೇತನಕುಮಾರ ಗಾಂಗಜಿ “ಜೀವನದಲ್ಲಿ ಸಾಧನೆಗೆ 3D (Dedication, Discipline, Determination) ಅಗತ್ಯ” ಎಂದು ಸಲಹೆ ನೀಡಿದರು.


ಮುಖ್ಯ ಅತಿಥಿ, ಕಸಾಪ ಉತ್ತರ ವಲಯ ಅಧ್ಯಕ್ಷ ಪ್ರಭುಲಿಂಗ ಮುಲಗೆ “ಸಾಧನೆಯ ಹಾದಿಯಲ್ಲಿ ನಿಂದೆ ಸಹಜ; ಅದನ್ನು ಲೆಕ್ಕಿಸದೆ ಮುಂದಕ್ಕೆ ಸಾಗಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಹಣಮಂತರಾಯ ದಿಂಡೂರೆ, ಉಪನ್ಯಾಸಕ ಕಾಶಿನಾಥ ಪಾಟೀಲ, ಕಾಲೇಜಿನ ಗೌರವಾಧ್ಯಕ್ಷ ಸಾಯಿಕುಮಾರ ಕಲ್ಲೂರ, ಅಧ್ಯಕ್ಷ ಡಾ. ಅಂಬಾರಾಯ ಹಾಗರಗಿ, ಪ್ರಾಂಶುಪಾಲ ನಾಗೇಶ ತಿಮ್ಮಾಜಿ, NSS ಅಧಿಕಾರಿ ರಾಜೇಶ್ವರಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸ್ವಾಗತವನ್ನು ನಾಗೇಶ ತಿಮ್ಮಾಜಿ ಸಲ್ಲಿಸಿದರು. ನವಗೆಣಿ ಹಿರೇಮಠ ಕಾರ್ಯಕ್ರಮವನ್ನು ಸಂಚಾಲಿಸಿದರು. ವಂದನೆಯನ್ನು ಡಾ. ಅಂಬಾರಾಯ ಹಾಗರಗಿ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button