ಜಾತಿ ಜನಗಣತಿಯಲ್ಲಿ ಬೌದ್ಧ ಎಂದು ನಮೂದಿಸಲು ಮರಿಯಪ್ಪ ಹಳ್ಳಿ ಕರೆ

ಚಿತ್ತಾಪುರ: ಸೆ.22 ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಸಮೀಕ್ಷೆಗೆ ಮುಂದಾಗಿದ್ದು ಪರಿಶಿಷ್ಟ ಜಾತಿಯ ಸಮುದಾಯದವರು ಕಡ್ಡಾಯವಾಗಿ ಜಾತಿ ನಮೂದಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ಪಟ್ಟಣದ ಬುದ್ಧ ವಿಹಾರದಲ್ಲಿ ಇಚೇಗೆ ದಲಿತ ಸಮುದಾಯದವರ ಜೊತೆ ಸಮಾಲೋಚನೆ ನಡೆಸಿದ ಅವರು ಕರಪತ್ರ ಬಿಡುಗಡೆಗೊಳಿಸಿ ಜಾಗೃತಿ ಮೂಡಿಸಿದರು. ಪರಿಶಿಷ್ಟ ಜಾತಿಯವರು ಕಲಂಗಳಲ್ಲಿ ಕಡ್ಡಾಯವಾಗಿ ಜಾತಿ ನಮೂದಿಸಬೇಕು. ಕಲಂ 8ಧರ್ಮ, ಕಲಂ 09 ಜಾತಿ, ಕಲಂ 10ರಲ್ಲಿ ಉಪಜಾತಿ ಹೊಲೆಯ ಎಂದು ನಮೂದಿಸಬೇಕು. (ಕ್ರ.ಸಂಖ್ಯೆ 6) ಕಲಂ.09. ಪರಿಶಿಷ್ಟ ಜಾತಿ ಹೊಲೆಯ, ಚಲವಾದಿ ಇತ್ಯಾದಿ ಸಮುದಾಯದವರು ಎಂದು ಸಮೀಕ್ಷಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಬರೆಸಬೇಕು ಎಂದು ತಿಳಿಸಿದರು.
ಸೇಡಂ ಉಪ ವಿಭಾಗೀಯ ಸಂಚಾಲಕ ಉದಯಕುಮಾರ ಸಾಗರ್, ದಲಿತ ಸಮುದಾಯದವರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬಾರದು. ಪಾರದರ್ಶಕವಾಗಿ ನಮ್ಮ ಜಾತಿಯನ್ನು ನಮೂದಿಸಿದರೆ ಮುಂದಿನ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ದೃಷ್ಟಿಯಿಂದ ಈ ಸಮೀಕ್ಷೆ ಅನುಕೂಲವಾಗಲಿದೆ. ದಿಟ್ಟ ನಿರ್ಧಾರದ ಮೂಲಕ ಹಿಂದುಳಿದ ವರ್ಗಗಳ ಸಮುದಾಯದ ಪ್ರಗತಿಗೆ ಪೂರಕವಾಗಿರುವ ಈ ಸಮೀಕ್ಷೆಯನ್ನು ನಾವು ಸ್ವಾಗತಿಸುತ್ತೇವೆ. ಅದೇ ನಿಟ್ಟಿನಲ್ಲಿ ಸಮುದಾಯದ ಜನಾಂಗದವರು ಕಡ್ಡಾಯವಾಗಿ ಜಾತಿ ಸಮೀಕ್ಷೆಗೆ ಕೈಜೋಡಿಸಬೇಕೆಂದು ಹೇಳಿದರು.
ತಾಲೂಕ ಸಂಚಾಲಕ ಸುಭಾಷ್ ಕಲ್ಮರಿ, ಜಗನ್ನಾಥ ಮೂಡಬೂಳಕರ, ರವಿ ಹೊಸ್ಸೂರ್, ಭೀಮರಾಯ ಸಾತನೂರ್, ಶಿವು ಹಾರಬೋಳ, ಪೀರಪ್ಪ ಸಾಲಹಳ್ಳಿ, ದೇವಪ್ಪ ಭಾಗೋಡಿ ಸೇರಿದಂತೆ ಇತರರು ಇದ್ದರು.