ಕಲಬುರಗಿಜಿಲ್ಲಾಸುದ್ದಿ
ಜಾತಿ ಜನಗಣತಿ ಕಾಲಂನಲ್ಲಿ ಕುರುಬ ಎಂದು ಬರೆಯಿಸಲು ಮನವಿ

ಚಿತ್ತಾಪುರ:ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆಪ್ಟೆಂಬರ್ 22ರಿಂದ ಪ್ರಾರಂಭವಾದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಜಾತಿ ಜನಗಣತಿ ವೇಳೆ ಕುರುಬ ಸಮಾಜದವರು ತಮ್ಮ ಜಾತಿ “ಕುರುಬ” ಎಂದುಲೇ ದಾಖಲಿಸಬೇಕೆಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ ಮತ್ತು ಯುವ ಘಟಕದ ತಾಲೂಕು ಅಧ್ಯಕ್ಷ ಸುನೀಲ ಎಂ. ಅಮ್ಮಗೋಳ ಮನವಿ ಮಾಡಿದ್ದಾರೆ.
ಅವರ ಪ್ರಕಾರ, 8ನೇ ಕಾಲಂನಲ್ಲಿ ಧರ್ಮ “ಹಿಂದೂ”, 9ನೇ ಕಾಲಂನಲ್ಲಿ “ಕುರುಬ”, 10ನೇ ಉಪಜಾತಿ ಕಾಲಂನಲ್ಲಿ “ಇಲ್ಲ” ಹಾಗೂ 11ನೇ ಕಾಲಂನಲ್ಲಿ ಪರ್ಯಾಯ ಪದ/ಸಮಾನಾರ್ಥಕ ಜಾತಿಯಾಗಿ “ಗೊಂಡ” ಎಂದು ನಮೂದಿಸಬೇಕೆಂದು ಸೂಚಿಸಲಾಗಿದೆ.
ಯಾವುದೇ ಗೊಂದಲ ಅಥವಾ ತೊಂದರೆಯನ್ನು ತಪ್ಪಿಸಲು ಸಮೀಕ್ಷಾಧಿಕಾರಿಗಳು ಮನೆಗೆ ಬಂದಾಗ ಪ್ರತಿಯೊಬ್ಬರೂ ತಮ್ಮ ಜಾತಿಯನ್ನು ಸ್ಪಷ್ಟವಾಗಿ “ಕುರುಬ” ಎಂದು ಬರೆಸಿಕೊಳ್ಳಬೇಕೆಂದು ಅವರು ಸಮಾಜದ ಸದಸ್ಯರಿಗೆ ಮನವಿ ಮಾಡಿದ್ದಾರೆ.