ಜಿಲ್ಲಾಸುದ್ದಿ

ನಿರಾಶೀತರಿಗೆ ಸೂಕ್ತ ಪರಿಹಾರ ಒದಗಿಸಿ : ರದ್ದೇವಾಡಗಿ

ಜೇವರ್ಗಿ : ಮಹಾರಾಷ್ಟ್ರದ ಉಜ್ಜನಿ ಹಾಗೂ ಸೀನಾ ಆಣೆಕಟ್ಟುಗಳಿಂದ ಸುಮಾರು 3 ಲಕ್ಷ ಕ್ಯೂಸಿಯಕ್ಸ್ ಕ್ಕಿಂತಲೂ ಅಧಿಕ ನೀರು ಭೀಮಾ ನದಿಗೆ ಬಿಡಲಾಗಿದ್ದು ನದಿ ತೀರದ ಅನೇಕ ಗ್ರಾಮಗಳು ಜಲಾವೃತವಾಗಿವೆ. ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಎಲ್ಲಾ ನಿರಾಶೀತರಿಗೂ ಕೂಡ ಸೂಕ್ತ ಪರಿಹಾರ ಒದಗಿಸಬೇಕೆಂದು ನಿಕಟಪೂರ್ವ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕೊನಹಿಪ್ಪರಗಾ, ಮಂದ್ರವಾಡ, ಕೂಡಿ, ಕೋಬಾಳ, ಮಾಹೂರ್, ಹರವಾಳ್ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಬಿಜೆಪಿಯ ಮುಖಂಡರು ರವಿವಾರ ಭೇಟಿ ನೀಡಿದರು.

ಗ್ರಾಮಗಳನ್ನು ವೀಕ್ಷಣೆ ಮಾಡುತ್ತಾ ಶಿವರಾಜ್ ಪಾಟೀಲ್ ರದ್ದೇವಾಡಿಗೆ ಮಾತನಾಡಿ ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಅಧಿಕ ನೀರು ಹೊರ ಬಿಡುತ್ತಿರುವುದರಿಂದ ಭೀಮಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ನದಿ ದಂಡೆಯ ಗ್ರಾಮಗಳು ಜಲಾವೃತ್ತವಾಗಿವೆ. ಕೆಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಜನರು ತತ್ತರಿಸಿದ್ದಾರೆ.

ಈಗಾಗಲೇ ಪ್ರಾರಂಭವಾಗಿರುವ ಗಂಜಿ ಕೇಂದ್ರಗಳನ್ನು ಹೊರತುಪಡಿಸಿ ಅವಶ್ಯಕತೆ ಇರುವ ಕಡೆ ಇನ್ನೂ ಹೆಚ್ಚಿನ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ. ಜನರ ಸಮಸ್ಸೆಗಳಿಗೆ ಸ್ಪಂದಿಸಿ. ನಿರಾಸಿತರಿಗೆ ಆಶ್ರಯ ನೀಡಿ. ಹಾನಿಗಿಡದ ಪ್ರದೇಶಗಳನ್ನ ಗುರುತಿಸಿ ಸೂಕ್ತ ಪರಿಹಾರವನ್ನು ನೀಡಿ ಎಂದು ಕೂಡಿ ಗ್ರಾಮಕ್ಕೆ ಆಗಮಿಸಿದ ಎ ಸಿ ರವರಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಉಮೇಶ್ ಜಾಧವ್, ಹಿರಿಯರಾದ ಮಲ್ಲಿನಾಥ ಪಾಟೀಲ ಯಲಗೋಡ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಅಶೋಕ್ ಬಗಲಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮತಿ ಶೋಭಾ ಬಾಣಿ, ರೇವಣಸಿದ್ದಪ್ಪ ಸಂಕಾಲಿ, ಮಂಡಲ ಅಧ್ಯಕ್ಷ ದೇವೇಂದ್ರ ಮುತಕೋಡ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಭಾಗೇಶ್ ಹೊತಿನಮಡು, ಮುಖಂಡರಾದ ಗುರುರಾಜ್ ಸೋಲಹಳ್ಳಿ, ಈರಣ್ಣ ಯಾದವ, ಪೀರಣ್ಣ ಗುತ್ತಾ, ಅನಿಲ ದೊಡ್ಡಮನಿ, ಮತ್ತು ಆಯಾ ಗ್ರಾಮಗಳ ಮುಖಂಡರು ಜನರು ಉಪಸ್ಥಿತರಿದ್ದರು..

Related Articles

Leave a Reply

Your email address will not be published. Required fields are marked *

Back to top button