ಕಲಬುರಗಿಜಿಲ್ಲಾಸುದ್ದಿ

ಪ್ರತಿ ಎಕರೆಗೆ 25000 ಸಾವಿರ ಪರಿಹಾರ ನೀಡಿ : ದೇವೇಂದ್ರ ತಳವಾರ

ಜೇವರ್ಗಿ : ತಾಲೂಕಿನ ರೈತರು ಬೆಳೆದ ಬೆಳೆಗಳು ಮಳೆಯಿಂದ ಸಂಪೂರ್ಣ ಹಾಳಾಗಿವೆ, ಸರಕಾರ ಕೂಡಲೆ ಪ್ರತಿ ಎಕರೆಗೆ 25 ಸಾವಿರ ಪರಿಹಾರವನ್ನು ನೀಡಬೇಕು ಎಂದು ಕಾರ್ಮಿಕ ಹಿತರಕ್ಷಣಾ ಯೂನಿಯನ್ (ರಿ) ರಾಜ್ಯ ಉಪಾಧ್ಯಕ್ಷರಾದ ದೇವೇಂದ್ರ ಈ ತಳವಾರ ಸರಕಾರಕ್ಕೆ ಪತ್ರಿಕಾಪ್ರಕಟಣೆಯಲ್ಲಿ ಆಗ್ರಹಿಸಿದರು.

ಜೇವರ್ಗಿ, ಮತ್ತು ಯಡ್ರಾಮಿ, ಅವಳಿ ತಾಲ್ಲೂಕಿನಲ್ಲಿ ಬಿಟ್ಟುಬಿಡದೆ ಸುಮಾರು 2 ತಿಂಗಳು ದಿನಮಾನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ತಾಲ್ಲೂಕಿನ್ ಎಲ್ಲಾ ಹಳ್ಳಿಗಳಲ್ಲಿ, ಮಳೆಯಿಂದಾಗಿ ಮನೆಗಳು ಕುಸಿದು ಬಿದ್ದಿವೆ. ರಸ್ತೆಗಳು ಕಿತ್ತುಕೊಂಡು ಹೋಗಿವೆ, ಹಳ್ಳಕೊಳ್ಳಗಳು ತುಂಬಿ ಹರಿದು ಜಮೀನುಗಳಿಗೆ ನುಗ್ಗಿ ಹಳ್ಳದಂತಾಗಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿವೆ. ಆದ್ದರಿಂದ ತಾಲ್ಲೂಕಿನ ದಂಡಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸರಕಾರಕ್ಕೆ ಹಾನಿಯ ವರದಿಯನ್ನು ಸಲ್ಲಿಸಿ. ಪರಿಹಾರ ಧನವನ್ನು ಕೊಡಲೇ ವಿತರಿಸಲು ಮುಂದಾಗಬೇಕು. ಅದೇ ರೀತಿಯಾಗಿ ರೈತರು ಬೆಳೆದ ತೊಗರಿ, ಹತ್ತಿ, ಬೆಳೆಗಳು ಶೇಕಡ 90ರಷ್ಟು ಬೆಳೆಗಳಿಗೆ ಹಾನಿಯಾಗಿವೆ ಕೂಡಲೇ ಸರಕಾರ ರೈತರ ನೆರವಿಗೆ ದಾವಿಸಿ ಸಂಕಷ್ಟದಲ್ಲಿರುವ ರೈತರಿಗೆ, ಪರಿಹಾರ ಧನವನ್ನು ವಿತರಿಸಬೇಕು, ಎಕರೆಗೆ 25 ಸಾವಿರದಂತೆ ಪರಿಹಾರ ಧನವನ್ನು ರಾಜ್ಯ ಸರ್ಕಾರ ನೀಡಬೇಕು.

ಸ್ಥಳೀಯ ಶಾಸಕರೂ, ಹಾಗೂ ಕೆ ಕೆ ಆರ್ ಡಿ ಬಿ, ಅಧ್ಯಕ್ಷರಾದ ಡಾ. ಅಜೇಯಸಿಂಗ್ ಅವರು ಮಧ್ಯಸ್ಥಿಕೆಯನ್ನು ವಹಿಸಿ ರಾಜ್ಯ ಸರಕಾರದಿಂದ ಸುಕ್ತವಾದ ಪರಿಹಾರವನ್ನು ಕೊಡಿಸುವ ಪ್ರಯತ್ನ ಮಾಡಬೇಕು. ಒಂದು ವೇಳೆ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೇ ಅಧಿಕಾರಿಗಳಾಗಲಿ, ಸರಕಾರವಾಗಲೀ, ನಿರ್ಲಕ್ಷ ವಹಿಸಿದರೆ ಅತೀ ಶೀಘ್ರದಲ್ಲಿಯೇ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ತಾಲ್ಲೂಕಿನ್ ಎಲ್ಲಾ ರೈತರೊಂದಿಗೆ ಮತ್ತು ರೈತ ಸಂಘಟನೆಗಳ ಬೆಂಬಲದೊಂದಿಗೆ ಮುತ್ತಿಗೆಯನ್ನು ಹಾಕಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

Related Articles

Leave a Reply

Your email address will not be published. Required fields are marked *

Back to top button