
ಜೇವರ್ಗಿ 14 : ಜೇವರ್ಗಿ ಕ್ಷೇತ್ರದ ಆರಾಧ್ಯ ದೇವತೆ, ಸರ್ವ ಶಕ್ತಿ ಸಂಪನ್ನೆ, ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಅದಿ ದೇವತೆಯಾದ ಮರಗಮ್ಮ (ಕಲ್ಕತ್ತ ) ದೇವಿಯ ಜಾತ್ರ ಮಹೋತ್ಸವದ ನಿಮಿತ್ಯವಾಗಿ ಮಂಗಳವಾರ ರಾತ್ರಿ 10 ಕ್ಕೆ ದೇವಿಯ ಮುರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಯಿತು.
ಪಟ್ಟಣದ ಲಕ್ಷಿö್ಮÃ ಚೌಕ ಬಡಾವಣಯೆ ಬಡಿಗೇರ ಮನೆಯಲ್ಲಿ ಮರಗಮ್ಮ ದೇವಿಯ ಮುರ್ತಿಯನ್ನ ತಯಾರಿಸಿ ಪ್ರತಿಷ್ಠಾಪನೆ ಮಾಡಲಾಯಿತು.
ಪ್ರತಿ ವರ್ಷದಂತೆ ನಾಲ್ಕು ದಿನಗಳ ವರೆಗೆ ಜಾತ್ರೆಯು ನಡೆಯಲಿದ್ದು ಮಂಗಳವಾರ ಬಡಿಗೇರ ಮನೆಯಲ್ಲಿ ಊರಿನ ಎಲ್ಲರ ಸಮ್ಮುಖದಲ್ಲಿ ಭಕ್ತಿ ಭಾವದಿ ದೇವಿಯ ಮುರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಯಿತು. ಬುಧವಾರದಂದು ಬಡಿಗೇರ್ ಮನೆಯಲ್ಲಿ ವಿವಿಧ ಕಲಾ ತಂಡಗಳಿAದ ಭಜನೆ, ಕೀರ್ತನೆ, ಸಂಗೀತ ಕಾರ್ಯಕ್ರಮಗಳು ಸೇರಿದಂತೆ ರಾತ್ರಿಯೀಡಿ ಜಾಗರಣೆ ನಡೆಯಲಿದೆ. ಗುರುವಾರ ರಂದು ಬಡಿಗೇರ್ ನೈವೇಧ್ಯ ಹಾಗೂ ರಾತ್ರಿ 10:00 ಗಂಟೆಯಿAದ 12:00 ಗಂಟೆಯವರೆಗೆ ಚಿಕ್ಕ ಜೇವರ್ಗಿಯಿಂದ ಮಂಟಪ ಬರುವುದು. ನಂತರವಾಗಿ ಬಡಿಗೇರ್ ಮನೆಯಿಂದ ನಡುಗಟ್ಟೆಗೆ ಮರಗಮ್ಮ (ಕಲ್ಕತ್ತ ) ತಾಯಿಯ ಉತ್ಸವ ಮೂರ್ತಿಯು ಸಕಲ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ದೇವಿಯ ಮುರ್ತಿಯನ್ನ ದೇವಸ್ಥಾನ ಪ್ರವೇಶಿಸುವುದು. ಶುಕ್ರವಾರ ರಂದು ಶ್ರೀ ದೇವಿಗೆ ಊರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ನೈವೇದ್ಯದ ಜೊತೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಲಿವೆ.
ಶನಿವಾರ ದಿನಾಂಕ ರಂದು ಬೆಳ್ಳಗ್ಗೆ 10:00 ಗಂಟೆಯಿದ ಸಾಯಂಕಾಲ 5:00 ಗಂಟೆಯವರೆಗೆ ರಥೋತ್ಸವವು ಜರುಗುವುದು. ನಂತರವಾಗಿ ರಾತ್ರಿಯೀಡಿ ಲಾವಣಿ ಪದಗಳು ಬಯಲಾಟಗಳು ನಾಟಕಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರವಿವಾರ ರಂದು ಬೆಳ್ಳಗ್ಗೆ 10-00 ಗಂಟೆಯಿAದ 4-00ಗಂಟೆಯವರೆಗೆ ಪೈಲವಾನರಿಂದ ಜಂಗೀ ಕುಸ್ತಿಗಳು ಜರುಗಲಿದೆ.