ವಿವಿಧತೆಯಲ್ಲಿ ವೈಶಿಷ್ಟ್ಯತೆಯ ಇನ್ನೊಂದು ರೂಪ ಜೇವರ್ಗಿಯ ಕ.ಸಾ.ಪ: ರಾಜಶೇಖರ ಸೀರಿ
ಕಸಾಪ ನಗರ ಘಟಕ ಪದಾಧಿಕಾರಿಗಳ ಪದಗ್ರಹಣ

ಜೇವರ್ಗಿ: ಪಟ್ಟಣದ ಕನ್ನಡ ಭವನದಲ್ಲಿ ಅಕ್ಟೋಬರ್ 11ರಂದು ಮಧ್ಯಾಹ್ನ 12 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಜೇವರ್ಗಿ ನಗರ ಘಟಕದ ಹೊಸ ಪದಾಧಿಕಾರಿಗಳ ಪದಗ್ರಹಣ ಹಾಗೂ ಕವಿಗೋಷ್ಠಿ ವೈಭವದಿಂದ ನೆರ ವೇರಿತು. ಕಾರ್ಯಕ್ರಮವನ್ನು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯ ದರ್ಶಿ (ಬೆಂಗಳೂರು) ರಾಜಶೇಖರ ಸೀರಿಯವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಅವರು ಮಾತನಾಡಿ —“ನಮ್ಮ ಕನ್ನಡ ಭಾಷೆ ಬಹು ಶ್ರೀಮಂತ ವಾದದ್ದು.
ಜೇವರ್ಗಿಯ ಕ.ಸಾ.ಪ. ಘಟಕವು ವಿವಿಧ ರೀತಿಯ ಸಾಂಸ್ಕೃತಿಕ ಮತ್ತು ಸಾಹಿತ್ಯ ಚಟುವಟಿಕೆಗಳ ಮೂಲಕ ಕನ್ನಡದ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಇಂತಹ ಕಾರ್ಯಗಳಿಂದ ಕನ್ನಡ ಸಂಸ್ಕೃತಿ ಇನ್ನಷ್ಟು ಆಳವಾಗಿ ನಮ್ಮ ಜೇವರ್ಗಿಯಲ್ಲಿ ಬೆಳೆಯುತ್ತಿದೆ,” ಎಂದು ಹೇಳಿದರು.ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಕೆ. ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡದ ನೆಲ, ಜಲ, ಮಣ್ಣು ಹಾಗೂ ಸಂಸ್ಕೃತಿಗಾಗಿ ಶ್ರಮಿಸುತ್ತಿರುವ ಕನ್ನಡಾಭಿಮಾನಿಗಳ ಸೇವೆಯನ್ನು ಪ್ರಶಂಸಿಸಿದರು.
ಜೊತೆಗೆ ನೂತನ ಪದಾಧಿಕಾರಿಗಳ ಆಯ್ಕೆಯ ಮಹತ್ವ ಮತ್ತು ಕನ್ನಡದ ವಿದ್ವಾಂಸರು, ದಾರ್ಶನಿಕರ ತಾತ್ವಿಕ ಚಿಂತನೆಗಳ ಬಗ್ಗೆ ಸವಿವರವಾಗಿ ವಿವರಿಸಿದರು.
ಕಾರ್ಯಕ್ರಮವನ್ನು ಭುವನೇಶ್ವರಿ ದೇವಿ ಪೂಜೆ ಮತ್ತು ಪುಷ್ಪಾರ್ಚನೆ ಮೂಲಕ ಆರಂಭಿಸಿ, ನಾಡಗೀತೆ ಗಾಯನದ ನಂತರ ಅಧಿಕೃತವಾಗಿ ಉದ್ಘಾಟಿಸಲಾಯಿತು.
ಕವಿಗೋಷ್ಠಿಯಲ್ಲಿ ಕವಿಗಳಾದ ಮಹಾಂತೇಶ ಪಾಟೀಲ್ ಯಾತನೂರ, ಎಸ್.ಎಸ್. ಚತುರಚಾರಿ ಮಠ, ಮಹಾಂತೇಶ ಖೈನೂರ, ಈಶ್ವರ ನಾಟಿಕರ್, ಸುಧಾ ಬೆಣ್ಣೂರು, ಶೋಭಾ ಆರ್. ಗಾಣಿಗೇರ್, ಕವಿತಾ ಹಳ್ಳಿ ತಮ್ಮ ಕವನಗಳಿಂದ ಶ್ರೋತೃಗಳನ್ನು ಮನರಂಜಿಸಿದರು.
ಕೋಶಾಧ್ಯಕ್ಷ: ಸುರೇಶ್ ಹಿರೇಮಠ,ಕಾರ್ಯಕ್ರಮದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಕಲ್ಯಾಣ ಕುಮಾರ ಸಂಗಾವಿ ಗಂವಾರ್, ಶ್ರೀಹರಿ ಕರಕಿಹಳ್ಳಿ, ಚಂದ್ರಶೇಖರ ತುಂಬಿಗಿ, ಎಸ್.ಟಿ. ಬಿರಾದಾರ, ಧರ್ಮಣ್ಣ ಕೆ. ಬಡಿಗೇರ್, ಎ.ಸಿ. ಹರಿವಾಳ, ಸಿದ್ದು ಕೆರೂರ್, ಬಸವರಾಜ ಹಡಪಾದ ಹಾಗೂ ಕನ್ನಡ ಪರ ಸಂಘಟನೆಯ ಅಧ್ಯಕ್ಷರು ಶ್ರವಣಕುಮಾರ ಡಿ. ನಾಯಕ್, ಮರೆಪ್ಪ ಬೇಗಾರ್, ಈಶ್ವರ ಹಿಪ್ಪರಗಿ, ಶರಬು ಕಲ್ಯಾಣಿ, ಭೀಮಾಶಂಕರ್ ಇಜೇರಿ, ಪರಮೇಶ ಬಿರಾಳ, ಶಾಂತಯ್ಯ ಹಿರೇಮಠ, ಶರಣು ಯಲಗೋಡ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಹಣಮಂತ್ರಾಯ ರಾಂಪೂರೆ ನಿರೂಪಿಸಿದರು ಹಾಗೂ ಕೊನೆಯಲ್ಲಿ ವಂದನಾ ಸಲ್ಲಿಸಿದರು.