ಕಲಬುರಗಿಜಿಲ್ಲಾಸುದ್ದಿ
ಎ.ಪಿ. ಸ್ಟುಡಿಯೋ ವತಿಯಿಂದ ‘ನಯಿ ರಂಗ ನವರಂಗ’ ಗರಭಾ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ನಗರದ ಕೋಟನೂರ ಹತ್ತಿರದ ಸಿದ್ಧಶ್ರೀ ಡೇವನ್ ಪ್ಯಾಲೆಸ್ನಲ್ಲಿ ಎ.ಪಿ. ಸ್ಟುಡಿಯೋ ವತಿಯಿಂದ ‘ನಯಿ ರಂಗ ನವರಂಗ’ ಗರಭಾ (ದಾಂಡಿಯಾ) ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರಕಿತು. ಈ ಕಾರ್ಯಕ್ರಮವನ್ನು ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೋಡ ಉದ್ಘಾಟಿಸಿ ಮಾತನಾಡಿ, ಎ.ಪಿ. ಸ್ಟುಡಿಯೋ ಡೈರೆಕ್ಟರ್ ಹಾಗೂ ಫೌಂಡರ್ ಅನೀಲ ಪವಾರ ಅವರು ಸತತ 13 ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳಿಗೆ ಗರಭಾ ಹಾಗೂ ನೃತ್ಯ ಕಲಿಸುತ್ತಿರುವುದನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಡಾ. ಸುಚಿತ್ರಾ ದುರ್ಗಿ, ಖ್ಯಾತ ನ್ಯಾಯವಾದಿ ಆರತಿ ತಿವಾರಿ, ಸಪ್ನಾ ದೇಶಪಾಂಡೆ, ಡಾ. ಸುವರ್ಣಾ ಮಂಗಲಗಿ, ಸವಿತಾ ಗುತ್ತೇದಾರ, ಶಾಂತಾ ಬಿರಾದಾರ, ಗುಜಾಬಾಯಿ ಪವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಂತರ ನವರಾತ್ರಿ ಉತ್ಸವದ ಅಂಗವಾಗಿ ಆಯೋಜಿಸಿದ ದಾಂಡಿಯಾ ನೃತ್ಯದಲ್ಲಿ ಮಹಿಳೆಯರು ಸಂಭ್ರಮದಿಂದ ಹೆಜ್ಜೆ ಹಾಕಿ ರಂಗು ತುಂಬಿದರು.