ಕಲಬುರಗಿಜಿಲ್ಲಾಸುದ್ದಿ

ದಿಗ್ಗಾಂವದಲ್ಲಿ ಭೀಮಾ ಕೋರೆಗಾಂವ ವಿಜಯೋತ್ಸವ 

ಭೀಮಾ ಕೋರೆಗಾಂವ್‌ ಯುದ್ಧ ದಮನಿತರ ಪಾಲಿಗೆ ಸ್ಪೂರ್ತಿದಾಯಕ: ಹಳ್ಳಿ

ಚಿತ್ತಾಪುರ: ಭೀಮಾ ಕೋರೆಗಾಂವ್ ಯುದ್ಧ ದಮನಿತರ ಪಾಲಿಗೆ ಸ್ಪೂರ್ತಿದಾಯಕ ಎಂದು ಡಿಎಸ್‌ಎಸ್‌ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಚರಿತ್ರೆಯಲ್ಲಿ ಅಡಗಿದ್ದ ವಿದ್ಯಮಾನವನ್ನು ಅಂಬೇಡ್ಕ‌ರ್ ಸ್ವಾಭಿಮಾನದ ಸಂಕೇತವನ್ನಾಗಿಸಿದರು. ಸಮಾನತೆ, ಸ್ವಾಭಿಮಾನದ ಸಂಕೇತವಾಗಿ ಭೀಮಾ ಕೋರೇಗಾಂವ್‌ ಸಮರ ಇಂದಿಗೂ ಸ್ಮರಣೀಯವಾಗಿ ಉಳಿದಿದೆ ಎಂದು ಹೇಳಿದರು.

28 ಸಾವಿರದಷ್ಟು ಸೈನಿಕರಿದ್ದ ಪೇಳ್ವೆಗಳನ್ನು 534 ಮಹಾರ್ ಸೈನಿಕರು 1818 ರ ಜ.1ರಂದು ಯುದ್ಧ ಮಾಡಿ ಹೋರಾಟ ನಡೆಸಿ ಸೋಲಿಸಿದ ದಿನವೇ ಭೀಮಾ ಕೋರೆಗಾಂವ್ ವಿಜಯೋತ್ಸವ ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯ ಉಪನ್ಯಾಸಕ ಅನೀಲ್ ತೆಂಗಳಿ ಮಾತನಾಡಿ, ಭೀಮಾ ಕೋರೆಗಾಂವ್ ವಿಜಯೋತ್ಸವವು ದಲಿತ ಸಮುದಾಯದ ಶೌರ್ಯ, ಸ್ವಾಭಿಮಾನ ಹಾಗೂ ಸಂವಿಧಾನಾತ್ಮಕ ಹೋರಾಟದ ಜೀವಂತ ಸಂಕೇತವಾಗಿದೆ. ಡಾ. ಬಿ.ಆರ್. ಅಂಬೇಡ್ಕ‌ರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಪಿ.ಎಲ್‌.ಡಿ ಬ್ಯಾಂಕ್‌ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಮಾಜಿ ಸದಸ್ಯರಾದ ಬಸವರಾಜ ಬೆಣ್ಣೂರಕರ್, ಶಿವರುದ್ರಪ್ಪ ಭೀಣಿ, ಪಿಎಸ್‌ಐ ಮಂಜುನಾಥ ರೆಡ್ಡಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಡಿಎಸ್‌ಎಸ್‌ ಜಿಲ್ಲಾ ಮುಖಂಡ ಸುರೇಶ್ ಹಾದಿಮನಿ, ಸಿಆರ್‌ಪಿ ಶಂಕರ ಮಂಗಲಗಿ ಅವರು ಮಾತನಾಡಿದರು.

ಭೀಮಾ ಕೋರೆಗಾಂವ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಡಮನಿ, ಶರಣು ನಾಟೀಕಾರ ವಾಡಿ, ಮಹಾಂತಗೌಡ ದಂಡಗುಂಡ, ನಿಂಗಣ್ಣಗೌಡ ಸಜ್ಜನಶೆಟ್ಟಿ, ಜಗನ್ನಾಥ ಸೀದಾ, ಶ್ರೀಮಂತ ಗುತ್ತೇದಾರ, ಮಲ್ಲಿನಾಥ ಭಾಗೋಡಿ, ದೇವಿಂದ್ರ ಯಾಬಾಳ, ಸಿದ್ದಣ್ಣಗೌಡ ದಳಪತಿ, ಶರಣು ಸಜ್ಜನ್‌, ಡಿಎಸ್‌ಎಸ್‌ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ್, ಉದಯಕುಮಾರ್ ಸಾಗರ, ಸುಭಾಷ್ ಕಲ್ಮರಿ, ಸಂಜಯ್ ಬುಳಕರ್ ಮಲ್ಲಶೆಟ್ಟಿ ಸಂಗಾವಿ, ಗುರುಲಿಂಗಪ್ಪ ಬಂದಳ್ಳಿ, ಭೀಮರಾಯ ದೇವರ್, ಮಹೇಶ್ ದೊಡ್ಡಮನಿ, ಉದಯಕುಮಾರ್ ಯಾದಗಿರಿ, ಭೀಮರಾಯ ದೊಡ್ಡಮನಿ, ಸುಭಾಷ್ ಪವಾರ, ಶಿವಯೋಗಿ ರಾವೂರ, ಲಕ್ಷ್ಮಣ ಕಮರವಾಡಿ, ವಿನ್ನುಕುಮಾರ ಜಡಿ, ಜಗದೀಶ್ ವಾಡಿ, ಅರುಣಕುಮಾರ ಸೇರಿದಂತೆ ಇತರರು ಇದ್ದರು.

ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇ‌ರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ತುಕಾರಾಮ ಭೀಮನಳ್ಳಿಕರ್ ಸ್ವಾಗತಿಸಿದರು, ಜಗನ್ನಾಥ ಕಲಿಕೇರಿ ನಿರೂಪಿಸಿದರು, ಮಹಾಂತೇಶ್ ಚಟ್ನಳ್ಳಿ ವಂದಿಸಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button