ಸುಗೂರ (ಎನ್) ಗ್ರಾಮದಲ್ಲಿ ಅ.7 ರಂದು ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವ

ಕಲಬುರಗಿ: ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಅಕ್ಟೋಬರ್ 7, ಮಂಗಳವಾರ ಸೀಗೆ ಹುಣ್ಣಿಮೆಯ ಪ್ರಯುಕ್ತ ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವ ಭವ್ಯವಾಗಿ ಜರುಗಲಿದೆ.
ಭೋಜಲಿಂಗೇಶ್ವರ ದೇವಸ್ಥಾನದಲ್ಲಿ ಅಂಭಾ ಭವಾನಿ ದೇವಿಯ ಘಟಸ್ಥಾಪನೆ ಮುಕ್ತಾಯ ಸಮಾರಂಭದ ಅಂಗವಾಗಿ, ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಹಿರಗಪ್ಪ ತಾತ ಅವರ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಪೂಜ್ಯರ ಮನೆಯಿಂದ ಆರಂಭವಾಗಿ ಸುಗೂರ ಎನ್ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಶ್ರೀಮಠಕ್ಕೆ ಸಾಗಲಿದೆ.
ಉತ್ಸವದ ಅಂಗವಾಗಿ ರಾಜಕೀಯ ಮುಖಂಡರು, ಸಂಗೀತಗಾರರು ಹಾಗೂ ವಿವಿಧ ಕಲಾ-ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ. ಡೊಳ್ಳು ಕುಣಿತ, ಡೋಲು-ನಗಾರಿ, ಹಲಗೆ (ತಮಟೆ) ವಾದ್ಯ, ಅಕ್ಕನ ಬಳಗದ ಭಜನೆ-ಕೀರ್ತನೆ ಮೇಳಗಳು ವಿಶೇಷ ಆಕರ್ಷಣೆಯಾಗಿವೆ.
ಸಹಸ್ರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಮಹಾರಾಷ್ಟ್ರ, ಮುಂಬೈ, ಗೋವಾ, ಆಂಧ್ರ, ತೆಲಂಗಾಣ, ಬೆಂಗಳೂರು ಸೇರಿದಂತೆ ಕಲಬುರಗಿ ಜಿಲ್ಲೆಯ ಹಲವು ತಾಲೂಕುಗಳ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸಲಿದ್ದಾರೆ.
ಈ ಕುರಿತು ಗ್ರಾಮಸ್ಥರಾದ ಶರಣಗೌಡ ಪಾಟೀಲ್ (ಬೆನಕನಹಳ್ಳಿ), ಮಹೇಶ ಪಾಟೀಲ್ (ಸುಗೂರ ಎನ್), ಭೀಮರೆಡ್ಡಿಗೌಡ ಪಾಟೀಲ್ (ಕುರಾಳ ಸುಗೂರ ಎನ್), ವಿಶ್ವನಾಥ ರೆಡ್ಡಿ ಪಾಟೀಲ್ (ಸುಗೂರ ಎನ್), ಶರಣಗೌಡ ವಕೀಲ, ಮಹಿಪಾಲರೆಡ್ಡಿ ಗೌಡ (ಕರಣಗಿ), ಸಂಗಾರೆಡ್ಡಿಗೌಡ ಮಾಲಿ ಪಾಟೀಲ್, ಮಹಾದೇವ ರೆಡ್ಡಿ (ತುಮಕೂರು), ಬಸ್ಸುಗೌಡ ಮಾಲಿ ಪಾಟೀಲ್, ಈರಣ್ಣ ಬಲಕಲ್ (ಯಾದಗಿರ), ಎಸ್.ಎಸ್. ಜ್ಯಗೇರಿ (ಯಾದಗಿರ), ಶಂಕರ ಮಾಸ್ತರ (ಯಾದಗಿರ), ಪ್ರಭು ಹೂಗಾರ (ಯಾದಗಿರ), ಸುರೇಶ್ ಕೋಟಿಮನಿ, ಬಸವರಾಜ ಹಡಪದ (ಸುಗೂರ ಎನ್), ರಾಜೇಂದ್ರ ನಾಯ್ಕೊಡಿ (ಸುಗೂರ ಎನ್), ಬಸವರಾಜ ಹವಾಲ್ದಾರ್ (ಯಾದಗಿರ), ನರೇಂದ್ರ ಗುತ್ತಿ (ಯಾದಗಿರ), ಮಲ್ಲಿನಾಥ (ಚಿನ್ನಾಪೋಟೊ ಸ್ಟುಡಿಯೋ), ಸಿದ್ದು ಕುರಾಳ (ಸುಗೂರ ಎನ್), ಸಿದ್ದು ಸಾಹು ಕುಂಬಾರ, ಶಂಕರಪ್ಪ ಬೇನಿಗಿಡ, ಅಯ್ಯಪ್ಪ ಬೇನಿಗಿಡ, ಸಾಬ್ಬಣ್ಣ ಹಂಗನಹಳ್ಳಿ, ಮಲ್ಲಿಕಾರ್ಜುನ ಬಿ. ಹಡಪದ (ಸುಗೂರ ಎನ್) ಮೊದಲಾದ ಭಕ್ತರು ಹಾಗೂ ಊರಿನ ಪ್ರಮುಖರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.