ಕಲಬುರಗಿಜಿಲ್ಲಾಸುದ್ದಿ
ಡಿಎಸ್ಎಸ್ ಅಂಬೇಡ್ಕರ್ ಧ್ವನಿ ಕಲಬುರಗಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ನಗರದ ರೈಲು ನಿಲ್ದಾಣದ ಸಮೀಪವಿರುವ ಪ್ರವಾಸ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ – ಅಂಬೇಡ್ಕರ್ ಧ್ವನಿ (ರಿ) (ಚಂದ್ರಕಾಂತ್ ಎಸ್. ಕಾದ್ರೋಳ್ಳಿ ಬಣ) ಸಂಘಟನೆಯ ಸಭೆ ನಡೆಯಿತು. ಸಂಘಟನೆಯ ರಾಜ್ಯಾಧ್ಯಕ್ಷರಾದ ಚಂದ್ರಕಾಂತ್ ಎಸ್. ಕಾದ್ರೋಳ್ಳಿ ಅವರ ಆದೇಶದ ಮೇರೆಗೆ, ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೊಪ್ಪುರ ಅವರ ನೇತೃತ್ವದಲ್ಲಿ ಈ ಸಭೆ ನಡೆಸಲಾಯಿತು.
ಸಭೆಯಲ್ಲಿ ಸಂಘಟನೆಯ ಕಲಬುರಗಿ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅದರಂತೆ:
- ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ಬೆಳಗುಂದಿ
- ಗೌರವಾಧ್ಯಕ್ಷರಾಗಿ ಶ್ರೀಮಂತ ಅಟ್ಟೂರ
- ಪ್ರಧಾನ ಕಾರ್ಯದರ್ಶಿಯಾಗಿ ದೇವೇಂದ್ರ ಅಟ್ಟೂರ
- ಖಜಾಂಚಿಯಾಗಿ ನಾಗೇಂದ್ರಪ್ಪ ಕಟ್ಟಿಮನಿ
- ಕಾರ್ಯದರ್ಶಿಯಾಗಿ ಜಗದೀಶ್ ದೊಡ್ಡಮನಿ
- ಸಂಘಟನಾ ಕಾರ್ಯದರ್ಶಿಯಾಗಿ ಕಾಂತರಾಜ್ ಹೀರೆನೂರ
- ಮಾಧ್ಯಮ ಸಲಹೆಗಾರರಾಗಿ ಧರ್ಮಣಾ ಕಾಂಬಳೆ
- ಸದಸ್ಯರಾಗಿ ಬೆಳೇಪ್ಪಾ ಹುಲಿಮನಿ, ತಿಮ್ಮಣ್ಣ ಅರ್ಜುಣಗಿ, ರಾಜಕುಮಾರ ಚಿಂಚನಸೂರ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ವಿವಿಧ ಹುದ್ದೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಪಡಿಸುವ ಕುರಿತು ಚರ್ಚೆ ನಡೆಸಲಾಯಿತು.



