ಕಲಬುರಗಿಜಿಲ್ಲಾಸುದ್ದಿ

ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾ ಸಮಾವೇಶ: ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಜಿಲ್ಲೆಯ ಕಟ್ಟಡ ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಸಂಘಟನಾ ಬಲವರ್ಧನೆಗೆ ಒತ್ತು ನೀಡುವ ಉದ್ದೇಶದಿಂದ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಮಟ್ಟದ ಸಮಾವೇಶವನ್ನು ಫೆಬ್ರವರಿ 26, 2026ರಂದು ನಗರದಲ್ಲಿ ಆಯೋಜಿಸಲಾಯಿತು.

ಸಮಾವೇಶದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಮೋಹಮ್ಮದ ಮೋಸಿನ ಪಟೇಲ ಅವರನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಉಪಾಧ್ಯಕ್ಷರಾಗಿ ದತ್ತತ್ರಾಯ ಪೂಜಾರಿ ಹಾಗೂ ಮೈಬೂಬ ಖಾನ್ ಗುತ್ತೇದಾರ, ಜಿಲ್ಲಾ ಕಾರ್ಯದರ್ಶಿಯಾಗಿ ಹೋನ್ನಪ್ಪ ಬಿಕೆ, ಜಂಟಿ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಾಬ ಹಾಗೂ ಖಜಾಂಚಿಯಾಗಿ ಜಯಶ್ರೀ ಕೊಡಕೋಳ ಆಯ್ಕೆಯಾಗಿದ್ದಾರೆ.

ಏಳು ಜನರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.ತಾಲೂಕು ಮಟ್ಟದಲ್ಲಿ ಜೇವರ್ಗಿ ತಾಲೂಕು ಅಧ್ಯಕ್ಷರಾಗಿ ಮಕಬೂಲ ಗುತ್ತೇದಾರ, ಪ್ರಧಾನ ಕಾರ್ಯದರ್ಶಿಯಾಗಿ ಕಾಂತಪ್ಪ ಚನ್ನೂರ, ಕಾರ್ಯದರ್ಶಿಯಾಗಿ ಶಂಶೋದ್ದೀನ್ ಹಿಪ್ಪರಗಿ ಆಯ್ಕೆಯಾದರು. ಸೈಯದಸಾಬ ಕಟ್ಟಿಸಂಗಾವಿ, ಉದಯಕುಮಾರ ಹಾಗೂ ಮಂಜುನಾಥ ಕಟ್ಟಿಸಂಗಾವಿ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.

ಚಿತ್ತಾಪುರ ತಾಲೂಕಿನಿಂದ ಕರಣಕುಮಾರ ಅಲ್ಲೂರ, ಶಹಬಾದ ತಾಲೂಕಿನಿಂದ ದೀಪಣ್ಣ ಕೋಲಿ, ಅಫಜಲಪುರ ತಾಲೂಕಿನಿಂದ ರಾಮು ಗೌಂಡಿ ಆಯ್ಕೆಯಾಗಿದ್ದಾರೆ. ಕಲಬುರಗಿ ಗ್ರಾಮೀಣ ಭಾಗದಿಂದ ಅಬ್ದುಲ್ ಖಾದರ್, ಶಿವಶರಣಪ್ಪ ನಾಗನಹಳ್ಳಿ, ಶಿವಲಿಂಗ ರೆಡ್ಡಿ, ಮಲ್ಲಿಕಾರ್ಜುನ ಕಾರಪೆಂಟರ್, ಚಂದ್ರಕಾಂತ ನಾಗನಹಳ್ಳಿ ಪ್ರತಿನಿಧಿಗಳಾಗಿ ಭಾಗವಹಿಸಿದರು.

ಯಡ್ರಾಮಿ ತಾಲೂಕಿನಿಂದ ಹೊನ್ನಪ್ಪ ಬಿಕೆ, ಭೀಮರಾಯ ಗೌಡ ಕಡಕೋಳ, ಸುಭಾಷ ಗುತ್ತೇದಾರ, ಮಾದೇವಪ್ಪಗೌಡ ಕಡಕೋಳ ಹಾಗೂ ಭೀಮರಾಯ ಸುಬಂಡ ಆಯ್ಕೆಯಾ ದರು.

ಮಹಿಳಾ ಪ್ರತಿನಿಧಿಗಳಾಗಿ ಜಯಶ್ರೀ ಕಡಕೋಳ, ಮಧು ಕಲಬುರಗಿ, ಅನುರಾಧಗೌಡ ಹಾಗೂ ರಿಯಾನ ಬೇಗಂ ಸೇರಿದಂತೆ ಅನೇಕರು ಸಮಾವೇಶದಲ್ಲಿ ಭಾಗವಹಿಸಿದರು.

ಸಭೆಯನ್ನು ಉದ್ದೇಶಿಸಿ ಶಂಕರ್ ಕಟ್ಟಿಸಂಗಾವಿ ಮಾತನಾಡಿ, ಕಟ್ಟಡ ಕಾರ್ಮಿಕರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅವಶ್ಯಕವಾಗಿದ್ದು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಪ್ರತಿಯೊಬ್ಬ ಕಾರ್ಮಿಕನಿಗೂ ತಲುಪಿಸುವ ನಿಟ್ಟಿನಲ್ಲಿ ಸಂಘ ಬದ್ಧತೆಯಿಂದ ಕೆಲಸ ಮಾಡಲಿದೆ ಎಂದು ಹೇಳಿದರು.

ಕಾರ್ಮಿಕರ ಸಾಮಾಜಿಕ ಭದ್ರತೆ, ಆರೋಗ್ಯ ವಿಮೆ ಹಾಗೂ ಮಕ್ಕಳ ಶಿಕ್ಷಣ ಸೌಲಭ್ಯಗಳ ಕುರಿತು ಅವರು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button