ಕಲಬುರಗಿಜಿಲ್ಲಾಸುದ್ದಿ

ತಾಂಡದಲ್ಲಿ ಅಭಿವೃದ್ಧಿ ಸ್ಪರ್ಶ: ಶಾಸಕ ಎಂ.ವೈ. ಪಾಟೀಲ ಕಾರ್ಯಕ್ಕೆ ಪ್ರೀತಮ್ ಚವ್ಹಾಣ ಮೆಚ್ಚುಗೆ

ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ತಾಂಡವು ಅನೇಕ ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿತ್ತು. ಆದರೆ ಶಾಸಕ ಎಂ.ವೈ. ಪಾಟೀಲ ಅವರು ಅಧಿಕಾರ ಸ್ವೀಕರಿಸಿದ ನಂತರ ತಾಂಡದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಪ್ರೀತಮ್ ಚವ್ಹಾಣ ತಿಳಿಸಿದ್ದಾರೆ.

ತಾಂಡಕ್ಕೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಬೆಳಕು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸ ನಡೆದಿದೆ. ಜೊತೆಗೆ ಸಂತ ಸೇವಾಲಾಲ ಭವನ ನಿರ್ಮಾಣ ಕಾರ್ಯವೂ ಕೈಗೆತ್ತಿಕೊಳ್ಳಲಾಗಿದ್ದು, ಕಟ್ಟಡ ಪೂರ್ಣಗೊಳಸಲಾಗಿದೆ ಇನ್ನೇನು ಉದ್ಘಾಟನೆಗೊಳ್ಳಲಿದೆ. ಇದರಿಂದ ತಾಂಡದ ಜನರಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಸಿಗಲಿದೆ ಎಂದು ಅವರು ಹೇಳಿದರು.

ಶಾಸಕರ ಪುತ್ರ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರಾದ ಶ್ರೀ ಅರುಣಕುಮಾರ ಪಾಟೀಲ ಅವರು ಸಹ ತಂದೆಯವರ ಹಾದಿಯಲ್ಲಿ ನಡೆದುಕೊಂಡು ಕ್ಷೇತ್ರದ ಜನರ ಕಷ್ಟ–ಸುಖಗಳಲ್ಲಿ ಪಾಲ್ಗೊಂಡು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದಾರೆ.

ಜನರೊಂದಿಗೆ ನೇರ ಸಂಪರ್ಕದಲ್ಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತಿರುವ ಅವರು ಕ್ಷೇತ್ರದ ಭವಿಷ್ಯದ ಜನಪ್ರಿಯ ನಾಯಕರಾಗಲಿದ್ದಾರೆ ಎಂದು ಪ್ರೀತಮ್ ಚವ್ಹಾಣ ಬಣ್ಣಿಸಿದರು.

Related Articles

Leave a Reply

Your email address will not be published. Required fields are marked *

Back to top button