ಸೂಕ್ತ ಬಂದೋಬಸ್ತಿನೊಂದಿಗೆ ಜಾತ್ರೆ ನಡೆಸಲಾಗುವುದು : ಲೋಕೇಶಪ್ಪ

ರಥೋತ್ಸವ ಸಂದರ್ಭದಲ್ಲಿ ಹಳೆಯ ಮನೆಗಳ ಮೇಲೆ ಹಾಗೂ ಶೀತಲಗೊಂಡ ಗೋಡೆಗಳ ಮೇಲೆ ಸಾರ್ವಜನಿಕರು ಹತ್ತಬಾರದು. ಪೊಲೀಸ್ ಇಲಾಖೆಯ ನಿರ್ದೇಶನದಂತೆ ಸಾರ್ವಜನಿಕರು ಸಹಕರಿಸಬೇಕು.- ಡಿ ವೈ ಎಸ್ ಪಿ ಲೋಕೇಶಪ್ಪ
ಜೇವರ್ಗಿ : ಸುಕ್ಷೇತ್ರ ಜೇವರ್ಗಿಯ ಕಲ್ಕತ್ತಾ ದೇವಿಯ ಜಾತ್ರೆಯನ್ನು ಭಕ್ತಾದಿಗಳು ಸೇರಿಕೊಂಡು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಜಾತ್ರೆಗೆ ಆಗಮಿಸಿದ ಸರ್ವರಿಗೂ ತೊಂದರೆಯಾಗದಂತೆ ಸೂಕ್ತ ಬಂದೋಬಸ್ತಿನೊಂದಿಗೆ ಜಾತ್ರೆ ನಡೆಸಲಾಗುವುದು ಎಂದು ಡಿ ವೈ ಎಸ್ ಪಿ ಲೋಕೇಶಪ್ಪ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಜಾತ್ರೆಯ ನಿಮಿತ್ತ ಶನಿವಾರ ಸಂಜೆ ಶಾಂತಿ ಸಭೆ ನಡೆಸಲಾಯಿತು.
ಶಾಂತಿ ಸಭೆಯನ್ನುದ್ದೇಶಿಸಿ ಬಿ ವೈ ಎಸ್ ಪಿ ಲೋಕೇಶಪ್ಪ ಮಾತನಾಡಿ ಜೇವರ್ಗಿ ಜನರ ಆರಾಧ್ಯ ದೇವತೆ ಕಲ್ಕತ್ತಾ ದೇವಿಯ ಜಾತ್ರೆಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತಿದ್ದು. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಗುಂಪು ಗಲಾಟೆಗಳು, ಕಳ್ಳತನ, ಅನುಚಿತ ವರ್ತನೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವವರು ಯಾರಾದರೂ ಕಂಡುಬಂದಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ.
ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಸೂಕ್ತ ಬಂದೋಬಸ್ತಿಗಾಗಿ ಹೆಚ್ಚಿನ ಬೇರಿಕೆಗಳನ್ನು ಬಳಸಲಾಗುವುದು, ಸಿ ಸಿ ಕ್ಯಾಮೆರಾ ಹಾಗೂ ಡ್ರೋನ್ ಕ್ಯಾಮೆರಾ ಗಳ ಮುಖಾಂತರ ನಿಗ ವಹಿಸಲಾಗುವುದು. ಸಾರ್ವಜನಿಕರು ತಮ್ಮ ಆಭರಣಗಳ ಮೇಲೆ ಹಾಗೂ ಮಕ್ಕಳ ಮೇಲೆ ನಿಗಾ ವಹಿಸಿ ಜಾಗೃತರಾಗಿರಬೇಕು ಎಂದರು.
ನಂತರ ಸಿಪಿಐ ರಾಜಾಸಾಹೇಬ್ ನದಾಫ್ ಮಾತನಾಡಿ ಜಾತ್ರಾ ಸಂದರ್ಭದಲ್ಲಿ ನಗರಗಳಲ್ಲಿ ಅಥವಾ ಜಾತ್ರೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಲ್ಲಿ 112 ಕರೆ ಮಾಡುವುದರ ಮುಖಾಂತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇದರಿಂದ ಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬಹುದು, ಇದಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ನಿಮ್ಮ ವಸ್ತುಗಳನ್ನು ಜಾಗೃತಕರಾಗಿ ನೋಡಿಕೊಳ್ಳಬೇಕು.
ಈ ಸಂದರ್ಭದಲ್ಲಿ ಸಿ ಪಿ ಐ ರಾಜೇಸಾಹೇಬ್ ನದಾಫ್, ಪಿ ಎಸ್ ಐ ಗಜಾನಂದ ಬಿರದಾರ, ಮುಖ್ಯಧೀಕಾರಿ ಶಂಭುಲಿಂಗ ದೇಸಾಯಿ, ಷಣ್ಮುಖಪ್ಪ ಸಾಹು ಗೋಗಿ, ಮ¯ಶೇಟ್ಟೆಪ್ಪಗೌಡ ಹೀರೆಗೌಡ, ರಮೇಶ ಬಾಬು ವಕೀಲ್, ರಾಜಶೇಖರ ಸೀರಿ, ರವಿ ಕೊಳಕೂರ, ಚಂದ್ರಶೇಖರ ತುಂಬಗಿ, ಮೈನುದ್ದಿನ್ ಇನಾಮದಾರ, ಜಗದೀಶ ಬಡಿಗೇರ, ಸುರೇಶ ಡುಗನಕರ್, ರಾಜು ತಳವಾರ, ದಂಡಪ್ಪಗೌಡ ಪೊಲೀಸ್ ಪಾಟೀಲ್, ಸಂತೋಷಗೌಡ ಮಾಲಿಪಾಟೀಲ್, ಶರಣಗೌಡ ಸರಡಗಿ, ಮಾನಪ್ಪ ಗೋಗಿ, ಮರೆಪ್ಪ ಕೊಬಾಳಕರ್, ಸಿದ್ದಣಗೌಡ ಪಾಟೀಲ್, ಕಲ್ಲಯ್ಯ ಸ್ವಾಮಿ, ಶಿವಶರಣಪ್ಪ ಪಡಶಟ್ಟಿ, ಶೇಕ್ ಸದ್ದಾಮ್, ಸೋಮ್ಮಣ್ಣ ಕಲ್ಲಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.