ಜಿಲ್ಲಾಸುದ್ದಿಯಾದಗಿರಿ

17ರ ವಯಸ್ಸಿನಲ್ಲಿ 101 ಕೆ.ಜಿ ಸಂಗ್ರಾಣಿ ಕಲ್ಲು ಎತ್ತಿದ ಬಸಲಿಂಗನ ಅಪರೂಪದ ಸಾಧನೆ

ಹಳ್ಳಿ ಪರಂಪರೆಗೆ ಕೀರ್ತಿ ತಂದ ಬಸಲಿಂಗಗೆ ಗ್ರಾಮಸ್ಥರಿಂದ ಭವ್ಯ ಸನ್ಮಾನ

ಯಾದಗಿರಿ: ತಾಲೂಕಿನ ಕೌಳೂರು ಗ್ರಾಮದ 17 ವರ್ಷದ ಬಸಲಿಂಗ ತನ್ನ ಅದ್ಭುತ ಶಾರೀರಿಕ ಸಾಮರ್ಥ್ಯದಿಂದ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಬರೋಬ್ಬರಿ 101 ಕೆ.ಜಿ ಸಂಗ್ರಾಣಿ ಕಲ್ಲು ಎತ್ತುವ ಮೂಲಕ ಗ್ರಾಮೀಣ ಕಸರತ್ತಿನ ಹಳ್ಳಿಯ ಕಲೆ ಮತ್ತೊಮ್ಮೆ ಗಮನ ಸೆಳೆದಿದೆ.

ಬಸಲಿಂಗನ ಈ ಸಾಧನೆಗೆ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ರೆಡ್ಡಿ ಮಾಲಿಪಾಟೀಲ್ ಕೌಳೂರು ಸೇರಿದಂತೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ಬಸಲಿಂಗನ ತಂದೆ ದೊಡ್ಡ ಭೀಮಪ್ಪ ಕೌಳೂರು (ಗಡೆಸೂಗೂರು) ಅವರು ಹೇಳುವಂತೆ, ಬಾಲ್ಯದಿಂದಲೇ ಕಸರತ್ತು ಮಾಡುತ್ತಿದ್ದ ಬಸಲಿಂಗ, ನೂರಕ್ಕೂ ಹೆಚ್ಚು ಜಾತ್ರೆಗಳಲ್ಲಿ ಪಾಲ್ಗೊಂಡು ಬೆಳ್ಳಿ ಕಡಗಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ. ಪ್ರಸ್ತುತ ಅವರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ.

ಹಿರಿಯರು ಹೇಳುವಂತೆ ಮೊದಲಿನ ಕಾಲದಲ್ಲಿ ಪ್ರತಿ ಜಾತ್ರೆಯಲ್ಲೂ ಸಂಗ್ರಾಣಿ ಕಲ್ಲು, ಉಸುಕಿನ ಚೀಲ, ಕಲ್ಲಿನ ಗುಂಡನ್ನು ಹೆಗಲ ಮೇಲೆ ಎತ್ತುವಂತಹ ಸ್ಪರ್ಧೆಗಳು ಸಾಮಾನ್ಯವಾಗಿದ್ದವು. ಆದರೆ ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾಗಿದ್ದರಿಂದ ಇಂತಹ ಕ್ರೀಡೆಗಳು ಇಳಿಮುಖವಾಗಿವೆ. ಕದ್ದಲೆ, ಕೊಬ್ಬರಿ, ಬೆಲ್ಲ, ಹಾಲು, ಕಾಳು ಪದಾರ್ಥಗಳು ಆಗಿನ ಭಾರ ಎತ್ತುವವರ ಶಕ್ತಿ ಆಹಾರ ವಾಗಿದ್ದವು.

ಆದರೂ ಡಿಜಿಟಲ್ ಯುಗದಲ್ಲಿಯೂ ಕೌಳೂರು ಗ್ರಾಮದಲ್ಲಿ ಈ ಹಳ್ಳಿ ಕಲೆ ಜೀವಂತವಾಗಿದೆ. ಬಸಲಿಂಗನ ಸಾಧನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಟಾಕಿ ಇಡಿಸಿ, ಭವ್ಯ ಮೆರವಣಿಗೆ ನಡೆಸಿ ಯುವಕನಿಗೆ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿಮಾಳಪ್ಪ ಪೂಜಾರಿ ಕಾಡಪ್ಪನೋರು,ಶೇಖಪ್ಪ ಪೂಜಾರಿ,ಮಾದೇವಪ್ಪ ನಾಯ್ಕೋಡಿ,ಸಾಬರೆಡ್ಡಿ ಬಾವುರು,ಅಂಬಣ್ಣ ನಾಯ್ಕೋಡಿ,ನಿಂಗಪ್ಪ ಡೋಂಗೇರ್,ನಾಗಪ್ಪ ತೆಲುಗುರ,ಸಾಬಪ್ಪ ಬಂದಳ್ಳಿ,ನಾಗಪ್ಪ ನಾಲ್ವಡಿಗಿ,ದೇವಪ್ಪ ಮಸ್ಕಿಸಹಿತ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

ಬಸಲಿಂಗನ ಈ ಸಾಧನೆ ಗ್ರಾಮಕ್ಕೆ ಮಾತ್ರವಲ್ಲ, ಜಿಲ್ಲೆಯಿಗೂ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಮಿಂಚಲಿ ಎಂಬುದು ಎಲ್ಲರ ಆಶಯ.

Related Articles

Leave a Reply

Your email address will not be published. Required fields are marked *

Back to top button