ಜೇವರ್ಗಿ ಅಂಬಿಗರ ಚೌಡಯ್ಯ ಸಮುದಾಯ ಭವನ ಕಾಮಗಾರಿಗೆ ತಡೆ ಆರೋಪ
ಕಾಂಗ್ರೆಸ್ ಮುಖಂಡನ ವಿರುದ್ಧ ಆಕ್ರೋಶ: ಶೀಘ್ರ ಅಭಿವೃದ್ಧಿ ಕಾಮಗಾರಿ ಪ್ರರಂಭಕ್ಕೆ ಆಗ್ರಹ

ರಾಜೇಂದ್ರ ರಾಜವಾಳ
ಸ್ಥಳೀಯ ಮುಖಂಡರೋಬ್ಬರಿಂದ ವಿರೋಧ ವ್ಯಕ್ತವಾಗಿರುವುದರಿಂದ ಕಾಮಾಗರಿ ನಡೆಸಿಲ್ಲ. ಸಮುದಾಯದ ಮುಖಂಡರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಶೀಘ್ರ ಕಾಮಗಾರಿ ನಡೆಸಲು ಸೂಚನೆ ನೀಡುತ್ತೇನೆ. – ಶಿವಾನಂದ ಹರವಾಳ್, ಎಇಇ,ಪಿಡ್ಲ್ಯೂಡಿ ಜೇವರ್ಗಿ.
ಕಲಬುರಗಿ: ಜೇವರ್ಗಿ ತಾಲ್ಲೂಕಿನ ನರಿಬೋಳ ರಸ್ತೆಯ ಬಳಿಯ ನೂರಿಂದೇಶ್ವರ ಕಾಲೇಜು ಹಿಂದಿನ ಭಾಗದಲ್ಲಿ ನಿರ್ಮಾಣವಾಗಬೇಕಿರುವ ಅಂಬಿಗರ ಚೌಡಯ್ಯ ಸಮುದಾಯ ಭವನ ಮತ್ತು ಅದರ ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿ ನಡೆಸದಂತೆ ಸ್ಥಳೀಯ ಸಮುದಾಯ ಹಾಗೂ ಕಾಂಗ್ರೆಸ್ ಮುಖಂಡರೊಬ್ಬರು ತಡೆಹಿಡಿದ್ದು ಕೋಲಿ ಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಸಮುದಾಯದ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ, 2024–25ನೇ ಸಾಲಿನ ವಿಶೇಷ ಅನುದಾನದಡಿ ರಾಜ್ಯ ಸರಕಾರ ಕಂಪೌಂಡ್ ವಾಲ್ ಹಾಗೂ ಇತರೆ ಮೂಲಭೂತ ಸೌಕರ್ಯಗಳಿಗಾಗಿ ಸುಮಾರು 45 ಲಕ್ಷ ರೂ. ಮೊತ್ತದ ಟೆಂಡರ್ಗೆ ಆಗಿದೆ. PWD ಇಲಾಖೆಯಿಂದ ಕಾಮಗಾರಿ ಟೆಂಡರ್ ಮಂಜೂರಾಗಿ ಮೂರು ತಿಂಗಳು ಕಳೆದರೂ ಗುತ್ತೇದಾರರು ಕಾಮಗಾರಿ ಇನ್ನೂ ಪ್ರಾರಂಭಿಸಿಲ್ಲ.
ಸಮುದಾಯದ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಈ ಕಾಮಗಾರಿ ಎಸ್ಟಿಮೆಟ್ ಸರಿಯಾಗಿಲ್ಲ ಆಗಿಲ್ಲ, ಮತ್ತೊಮ್ಮೆ ಎಸ್ಟಿಮೆಟ್ ಸಿದ್ಧಪಡಿಸಿ ಕಾಮಗಾರಿಗೆ ಅನುಮೋದನೆಯ ನಂತರ ಕಾಮಗಾರಿ ನಡೆಸಬೇಕೆಂದು ವಿರೋಧ ವ್ಯಕ್ತಪಡಿಸಿರುವುದರಿಂದ ಕಾಮಗಾರಿ ನೆನಗುದಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.
ಸಂಬಂಧಿಸಿದ ಗುತ್ತೇದಾರರು ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನಿರಂತರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ. ಸಾರ್ವಜನಿಕ ಹಣದಿಂದ ನಡೆಯಬೇಕಾದ ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಖಂಡನೀಯ. ಇದರಿಂದ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಕಾಮಗಾರಿ ಆರಂಭಿಸದಿದ್ದರೆ ತಾಲೂಕು ಮಟ್ಟದ ಪ್ರತಿಭಟನೆ, ಕಚೇರಿ ಮುತ್ತಿಗೆ ಸೇರಿದಂತೆ ತೀವ್ರ ಹೋರಾಟ ನಡೆಸಲಾಗುವುದು. ಪಿಡಬ್ಲ್ಯೂಡಿ ಇಲಾಖೆಕೆಯ ಅಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಕಾಮಗಾರಿ ಪ್ರಾರಂಭಿಸಬೇಕು.”- ದೇವೇಂದ್ರ ಕೆ ಚಿಗರಹಳ್ಳಿ, ಕೋಲಿ-ಕಬ್ಬಲಿಗ ಸಮಾಜದ ಮುಖಂಡ.
ಸಾರ್ವಜನಿಕ ಹಣದಿಂದ ನಡೆಯಬೇಕಾದ ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಖಂಡನೀಯ. ಇದರಿಂದ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಕಾಮಗಾರಿ ಆರಂಭಿಸದಿದ್ದರೆ ತಾಲೂಕು ಮಟ್ಟದ ಪ್ರತಿಭಟನೆ, ಕಚೇರಿ ಮುತ್ತಿಗೆ ಸೇರಿದಂತೆ ತೀವ್ರ ಹೋರಾಟ ನಡೆಸಲಾಗುವುದು. ಪಿಡಬ್ಲ್ಯೂಡಿ ಇಲಾಖೆಕೆಯ ಅಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಕಾಮಗಾರಿ ಪ್ರಾರಂಭಿಸಬೇಕು ಎಂದು ಕೋಲಿ, ಕಬ್ಬಲಿಗ ಸಮಾಜದ ಮುಖಂಡ ದೇವೇಂದ್ರ ಕೆ ಚಿಗರಹಳ್ಳಿ ಆಗ್ರಹಿಸಿದ್ದಾರೆ.
ತಕ್ಷಣ ಕಾಮಗಾರಿ ಪ್ರರಂಭಕ್ಕೆ ಆಗ್ರಹ: ಆರ್ಥಿಕ, ಸಮಾಜಿಕವಾಗಿ ಹಿಂದುಳಿದಿರುವ ಅಂಬಿಗರ ಚೌಡಯ್ಯ ಸಮುದಾಯಗಳ ಮದುವೆ, ಸಭೆ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಶಾಶ್ವತ ಸ್ಥಳದ ಕೊರತೆ ಇತ್ತು. ಸಮುದಾಯ ಭವನ ನಿರ್ಮಾಣದ ಬಹುಕಾಲದ ಬೇಡಿಕೆಯಾಗಿತ್ತು.
ಸಮುದಾಯ ಭವನದ ಕಟ್ಟಡ ಮಾತ್ರ ಆಗಿದೆ. ಕಂಪೌಂಡ್ ವಾಲ್, ಆಡುಗೆ ಕೋಣೆ, ಸೇರಿದಂತೆ ಮುಲಭೂತ ಸೌಕರ್ಯಗಳು ಹೊಂದಿರುವ ಸೂಸಜಿತ ಸಮುದಾಯ ಭವನ ನಿರ್ಮಾಣ ಅಗಬೇಕು. ಸದ್ಯ ಸರಕಾರದಿಂದ ಮಂಜುರಾಗಿರುವ ಅನುದಾನವನ್ನು ಬಳಸಿಕೊಂಡು ಕಾಮಗಾರಿ ಪ್ರಾರಂಭಿಸಬೇಕು ಎಂದು ಶ್ರೀಮಂತ ಮೌನೂರ್, ಚಂದ್ರಕಾಂತ ಗಂವ್ಹಾರ್ ಒತ್ತಾಯಿಸಿದ್ದಾರೆ.
“ಮಂಜೂರಾದ ಯೋಜನೆಗಳು ವಿಳಂಬವಾಗದೆ ಕಾಮಗಾರಿ ಬೇಗ ಆರಂಭಿಸಬೇಕು. ನಮ್ಮ ಸಮುದಾಯದ ಅಭಿವೃದ್ಧಿಗೆ ನ್ಯಾಯ ದೊರಕಲಿ ಇಲ್ಲವಾದರೆ ಬೇಗ ಕಾಮಗಾರಿ ಪ್ರಾರಂಭವಾಗುವಂತೆ ಪ್ರತಿಭಟನೆ ಮಾಡಬೇಕಾಗುತ್ತದೆ .”– ಮರಿಯಪ್ಪ ಕೊಳಕುರ್. ಅಧ್ಯಕ್ಷರು ಯುವ ಘಟಕ ಜೇವರ್ಗಿ.



