ಕಲಬುರಗಿಜಿಲ್ಲಾಸುದ್ದಿ

ಅರ್ಥಪೂರ್ಣವಾದ ರಾಜ್ಯೋತ್ಸವ ಆಚರಿಸೊಣ : ಮಲ್ಲಣ್ಣ ಯಲಗೋಡ

ಜೇವರ್ಗಿ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದುರಿಯಾಗಿ ಕನ್ನಡ ರಾಜ್ಯೋತ್ಸ ತಾಲೂಕಿನಲ್ಲಿ ಆಚರಿಸಲಾಗುವುದು. ಈ ಭಾರಿ ಕನ್ನಡ ಪರ ಸಂಘಟನೆಗಳ ಬೇಡಿಕೆಯಂತೆ ವಿಭಿನವಾಗಿ ಹಾಗೂ ಅರ್ಥಪುರ್ಣವಾಗಿ ರಾಜ್ಯೋತ್ಸವವನ್ನು ಆಚರಿಸೊಣ ಎಂದು ತಾಲೂಕ ದಂಡಾಧೀಕಾರಿ ಮಲ್ಲಣ್ಣ ಯಲಗೋಡ ಹೆಳಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತು ಪೂರ್ವಭಾವಿ ಸಭೆಯನ್ನ ಕರೆಯಲಾಗಿತ್ತು.

ಸಭೆಯನ್ನುದ್ದೆಶಿಸಿ ತಾಲೂಕ ದಂಡಾಧೀಕಾರಿ ಮಲ್ಲಣ್ಣ ಯಲಗೋಡ ಮಾತನಾಡಿ ತಾಲೂಕಿನಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಸಿಲು ಎಲ್ಲಾ ಕನ್ನಡ ಪರ ಸಂಘಟನೆಗಳ ಮುಖಂಡರು ಸಲಹೆಗಳನ್ನ ನೀಡಲಾಗಿದ್ದು ಅದರಂತೆ ಈ ಬಾರಿ ವಿಭಿನ್ನವಾಗಿ ಆಚರಿಸಲು ಪ್ರಯತ್ನಿಸುತ್ತೆವೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಲೂಕಿನ ಎಲ್ಲರೂ ಒಗ್ಗೂಡಿ ಸಂಭ್ರಮ ಸಡಗರದಿಂದ ಆಚರಿಸೊಣ. ಕನ್ನಡದ ಬಗ್ಗೆ ಯುವ ಪಿಳಿಗೆಗೆ ತಿಳಿಸುವುದು ಬಹಳ ಅವಶ್ಯವಾಗಿದೆ ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಒಂದು ಅರ್ಥಪೂರ್ಣವಾಗಿ ಆಚರಿಸೊಣ ಎಂದರು.

ಮುಖ್ಯಧೀಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ ಕನ್ನಡ ಪರ ಹೋರಾಟಗಾರರು ಈ ಕಾರ್ಯಕ್ರಮದ ಕೆಂದ್ರಬಿಂದುಗಳಂತೆ. ಅವರ ಸಹಾಯ ಸಹಕಾರ ಈ ಕಾರ್ಯಕ್ರಮಕ್ಕೆ ಅವಶ್ಯವಿದೆ. ತಾಲೂಕಿನ ಎಲ್ಲರೂ ಕೂಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಧೀಕಾರಿಗಳಾದ ಶಂಭುಲಿಂಗ ದೇಸಾಯಿ, ರವಿಚಂದ್ರ ರೆಡ್ಡಿ, ಸತಿಷ ಸಾಂಗನ್, ಹುಲಿಕಂಠರಾಯ ಸುಂಬುಡ್, ಉಮೇಶ ಶರ್ಮಾ, ಶೋಭಾ ಸಜ್ಜನ, ಶ್ರೀಮತಿ ಬಸಮ್ಮ, ಸಂತೋಷ, ಭಿಮರಾಯ ನಗನೂರ, ಎಸ್ ಕೆ ಬಿರಾದಾರ, ಭಿಮಾಶಮಕರ ಬಿಲ್ಲಾಡ, ಬಸವರಾಜ ಬಾಗೇವಾಡಿ, ಕಾಶಿನಾತ ಮಂದೆವಾಲ, ಶ್ರೀಹರಿ ಕರಕಳ್ಳಿ, ರವಿ ಕೂಳಗೇರಿ, ಸಿದ್ದು ಕೇರೂರ, ಬಂಗಾರಪ್ಪ ಹಳ್ಳಿ, ಸಿದ್ದಣ್ಣಗೌಡ ಮಾವೂನರ, ಮುನೀರ ಪಾಶ್ ಕಳ್ಳಿ, ಮಾಂತೆಶ ಹಾದಿಮನಿ, ಶಿವಲಿಂಗ ಹಳ್ಳಿ, ರಾಜು ಭಂಟನೂರ, ಯಶವಂತ ಬಡಿಗೇರ ಮಂದೆವಾಲ, ಶರಬು ಕಲ್ಯಾಣಿ, ಸಾಯಬಣ್ಣ ಕಲ್ಯಾಣಕರ್, ದಶರತ, ಶ್ರೀಶೈಲ ಪೂಜಾರಿ, ಗುಂಡಪ್ಪ ಜಡಗಿ ಸೇರಿದಂತೆ ಅನೇಕರಿದ್ದರು.

Related Articles

Leave a Reply

Your email address will not be published. Required fields are marked *

Back to top button