ಕಲಬುರಗಿಜಿಲ್ಲಾಸುದ್ದಿ

ದೇಸಾಯಿ ಕಲ್ಲೂರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ಅಫಜಲಪುರ : ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ (ಮಂಗಳವಾರ) ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಂತೋಷ ತಳವಾರ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ಸಮಾಜದ ಗಣ್ಯರು ಭಾಗವಹಿಸಿ ವಾಲ್ಮೀಕಿ ಮಹರ್ಷಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿದ್ಧಪ್ಪ ನಾಯ್ಕೋಡಿ, ತಿಪ್ಪಣ ಪ್ಯಾಟಿ, ಶಿವಪ್ಪ ಪ್ಯಾಟಿ, ಯಲ್ಲಾಲಿಂಗ್ ಹಾದಿಮನಿ, ಅಮೋಗಿ ವಗಿ೯, ಸಂತೋಷ ನಾಯ್ಕೋಡಿ, ಯಲ್ಲಪ್ಪ ನಾಗಬಾರ್, ಹಳ್ಳೆಪ್ಪ ನಾಯ್ಕೋಡಿ, ಗುರುಪಾದ ತಳವಾರ, ಬಸವರಾಜ ಚವಡಾಪೂರ, ಗಂಗಾಧರ ನಾಗಬರ್, ಪೀರಪ್ಪ ನಾಟಿಕಾರ, ಯಸವಂತ ನಾಯ್ಕೋಡಿ, ಸುನೀಲ ನಾಯ್ಕೋಡಿ, ಶರಣು ಕುಳಕುಮಟಗಿ, ಶ್ರೀಶೈಲ್ ನಾಗಬಾರ್, ಶರಣಪ್ಪ ತಳವಾರ, ಸಂಜುಕುಮಾರ ಬಾಸಗಿ, ಆಕಾಶ ತಳವಾರ, ಹಣಮಂತ ನಾಗಬಾರ್, ಈಶ್ವರ ತಳವಾರ, ಬಾಗೇಶ, ಅಜು೯ನ, ಅವ್ವಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಉಪದೇಶಗಳನ್ನು ನೆನಪಿಸಿಕೊಂಡು, ಅವರ ಜೀವನ ಪಥದಿಂದ ಸಮಾಜ ಸೇವೆ ಮತ್ತು ಮಾನವೀಯತೆಯ ಪಾಠವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button