ನೆರೆ ಸಂತ್ರಸ್ಥ ಮಂದಾರವಾಡ ಗ್ರಾಮದ ಜನರಿಗೆ ಕಿಟ್ಟುಗಳ ವಿತರಣೆ
ಸೆಂಟ್ ಫ್ರಾನ್ಸೆಸ್ ಕಾಲೇಜು ಕೋರಮಂಗಲ ವತಿಯಿಂದ ಗೃಹಬಳಕೆ ಕಿಟ್ಟುಗಳ ವಿತರಣೆ

ಜೇವರ್ಗಿ: ನೆರೆ ಸಂತ್ರಸ್ತರಿಗೆ ಬೆಂಗಳೂರಿನ ಕೋರಮಂಗ ಲದ ಸೆಂಟ್ ಫ್ರಾನ್ಸಿಸ್ ಕಾಲೇಜು ಕರ್ನಾಟಕ ಬಟಾಲಿ ಯನ್ ಎ ತಂಡ ಬೆಂಗಳೂರು ವತಿಯಿಂದ ಆಯೋಜನೆ ಮಾಡಿ ಆಹಾರ ಸಾಮಗ್ರಿ ದಿನಸಿಕೆಟ್ಟುಗಳನ್ನ ಇಲ್ಲಿನ ಜೇವರಗಿ ತಾಲೂಕಿನ ಮಂದಾರವಾಡ ಗ್ರಾಮದ ಸುಮಾರು 50 ಸಂತ್ರಸ್ತರಿಗೆ ವಿತರಿಸಲಾಯಿತು.
ಅಮರೇಗೌಡ ಕಾಲೇಜು ನಿರ್ವಹಣೆ ಮತ್ತು ಹಿರಿಯ ಕಡೆಟ್ಟುಗಳು ಸೇರಿದಂತೆ ಕಂಪನಿ ಸೀನಿಯರ್ ಅಂಡರ್ ಆಫೀಸರ್ ಡ್ಯಾನಿಯಲ್ ಬಾರ್ನ್ ಬಾಸ್, ಎಸ್ ಕಂಪನಿ ಸಾರಜಂಟ ಮೇಜರ್ ಪುನೀತ್, ಖತರ್,ಮಾಸ್ಟರ್ ಸರ್ಜೆಂಟ್ ವಿಕಾಸ್ ಪಿ ಗೌಡ ಸೇರಿದಂತೆ ಕಾರ್ಪೋರೆಲ್ ಸಂಜೆಯ ಎಸ್ ಕಿಟ್ ವಿತರಣೆ ಮಾಡಿದರು.
ಕಿಟ್ಟು ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕಟ್ಟಿಮನಿ,ಜೇವರ್ಗಿ ಪುರಸಭೆ ಮಾಜಿ ಅಧ್ಯಕ್ಷರಾದ ಜಟ್ಟಪ್ಪ ಮಂದಾರವಾಡ ಸೇರಿದಂತೆ ಗ್ರಾಮದ ಪ್ರಮುಖರಾದ ಶ್ರೀಕಾಂತ್ ಕಟ್ಟಿಮನಿ ಬಸವರಾಜ್ ಮನಿಬಾರ್, ಶಾಂತಾಬಾಯಿ, ಬಾಬು ಮಂದಾರವಾಡ, ಈರಣ್ಣ ನಾಯ್ಕೋಡಿ ಸೇರಿದಂತೆ ಮಂದರವಾಡ ಗ್ರಾಮಸ್ಥರು ಭಾಗವಹಿಸಿದ್ದರು.