ಕಲಬುರಗಿಜಿಲ್ಲಾಸುದ್ದಿ

ರಾಜ್ಯ ಸರ್ಕಾರ ಹಾಕಿರುವ ತೆರಿಗೆಯನ್ನು ಸಿದ್ದರಾಮಯ್ಯ  ಇಳಿಸುವರೇ: ಗುತ್ತೇದಾರ

ಜಿಎಸ್ ಟಿ ಕಡಿತ ದಸರಾ ಹಬ್ಬದ ಕೊಡುಗೆ, ಪ್ರಧಾನಿ ಮೋದಿಗೆ ಬಾಲರಾಜ್ ಗುತ್ತೇದಾರ ಅಭಿನಂದನೆ

ಕಲಬುರಗಿ: ಜನ ಸಾಮಾನ್ಯರ ತೆರಿಗೆ ಭಾರವನ್ನು ಅತ್ಯಂತ ಕಡಿಮೆ ಮಾಡಿ ದಸರಾ ಹಬ್ಬದ ಕೊಡುಗೆ ನೀಡಿರುವ ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ  ಕಲಬುರಗಿ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. 

ಅಲ್ಲದೇ ರಾಜ್ಯ ಸರ್ಕಾರ ಜನರ ಮೇಲೆ ಹಾಕಿರುವ ತೆರಿಗೆ ಇಳಿಸುವುದೇ ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, 2017 ರಲ್ಲಿ ಪ್ರಾರಂಭವಾಗಿರುವ ಜಿಎಸ್ ಟಿ ದಿಟ್ಟ ನಿರ್ಧಾರ. ಕೊವಿಡ್ ಸಂದರ್ಭದಲ್ಲಿಯೂ ಯಾವ ರಾಜ್ಯಕ್ಕೂ ತೊಂದರೆ ಆದಗಂತೆ ನೋಡಿಕೊಂಡಿರುವ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಈಗ ಆರ್ಥಿಕ ಸುಭದ್ರತೆಯ ಹಿನ್ನೆಲೆಯಲ್ಲಿ ಬಹಳಷ್ಟು ವಸ್ತುಗಳಿಗೆ ತೆರಿಗೆ ವಿನಾಯತಿ ಮಾಡಿದ್ದಾರೆ. ಶೇ. 90 ರಷ್ಟು ವಸ್ತುಗಳ ಮೇಲಿನ ತೆರಿಗೆಯನ್ನು ಶೇ  ೫% ಕ್ಕೆ ಇಳಿಸಿದ್ದಾರೆ. ಕೆಲವು ವಸ್ತುಗಳಿಗೆ ಶೇ 18%  ರಷ್ಟು  ತೆರಿಗೆ ಮಾಡಿ ಕೇವಲ ಎರಡೇ ಸ್ಲ್ಯಾಬ್ ಮಾಡಿ ತೆರಿಗೆ ಸರಳೀಕರಣ ಮಾಡಿರುವ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ  ಸಲ್ಲುತ್ತದೆ. ಇದರಿಂದ ರೈತರು ಬಳಕೆ ಮಾಡುವ ಟ್ರ್ಯಾಕ್ಟರ್, ಟೈಲರ್ ಮತ್ತು  ಇತರ ಕೃಷಿ ಸಲಕರಣೆಗಳು, ಗೊಬ್ಬರ ಮೇಲಿನ ತೆರಿಗೆ ಕಡಿಮೆಯಾಗಿದೆ ಎಂದು ಗುತ್ತೇದಾರ ತಿಳಿಸಿದ್ದಾರೆ.

ಜನ ಸಾಮಾನ್ಯರು  ಬಳಕೆ ಮಾಡುವ ಮೊಸರು, ಹಾಲು, ತುಪ್ಪ ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ. ಇದು ನಿಜವಾಗಲೂ ಬಡವರ ಪರ ಸರ್ಕಾರ ಎನ್ನುವುದನ್ನು ತೋರಿಸಿದ್ದಾರೆ. ಇದಲ್ಲದೇ ಆರ್ಥಿಕತೆಗೆ ಎಲ್ಲ ರೀತಿಯ ಪ್ರೋತ್ಸಾಹ ಸಿಗುತ್ತದೆ ಎನ್ನುವ ವಿಶ್ವಾಸದೊಂದಿಗೆ. ಭಾರತ ಅತ್ಯಂತ ವೇಗದಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ  ಆಗಲು ಇದು ಬಹಳ ದೊಡ್ಡ ಸಹಾಯ ಆಗಲಿದೆ. ಅಲ್ಲದೇ  2 ಲಕ್ಷ ಕೋಟಿ ರೂ. ಜನರ ಬಳಿ ತೆರಿಗೆ ಹಣ ಉಳಿಯಲಿದೆ. ತೆರಿಗೆ ಸರಳೀಕರಣ ಮಾಡಿ ಇನ್ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್ ತೆಗೆದು ಹಾಕಿದ್ದಾರೆ. ನೇರವಾಗಿ ಎಲ್ಲ ಲಾಭವು ವಿಶೆಷವಾಗಿ ಸಣ್ಣ ಕೈಗಾರಿಕೆಗೆ ಸಿಗಲಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಭಿಮಾನದ ಸ್ವಾವಲಂಬನೆಯ ಭಾರತ ನಿರ್ಮಾಣಕ್ಕೆ ಬಹಳ ದೊಡ್ಡ ಶಕ್ತಿಯಾಗಿದೆ. ಎಲ್ಲರೂ ಕೂಡ ಆ ಕರೆಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಕೋರಿದ್ದಾರೆ.

ಸಿಎಂ ತೆರಿಗೆ ಇಳಿಸುವರೇ?

ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್ ಟಿ ತೆರಿಗೆ ಇಳಿಸಿ ಜನ ಸಾಮಾನ್ಯರಿಗೆ ಬಹಳ ದೊಡ್ಡ ಹಬ್ಬದ ಕೊಡುಗೆ ಕೊಟ್ಟ ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕಳೆದ ಎರಡು ವರ್ಷದಲ್ಲಿ ಒಂದು ಲಕ್ಷ. ಕೋಟಿ ಹೊಸ  ತೆರಿಗೆಯನ್ನು ಜನರ ಮೇಲೆ  ಹಾಕಿರುವ  ಕರ್ನಾಟಕ  ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರದ ಮೇಲಿದೆ. ಇವರು ಬಂದ ತಕ್ಷಣವೇ ಪೆಟ್ರೊಲ್, ಮೊಟರ್ ವೆಹಿಕಲ್ ತೆರಿಗೆ, ಸ್ಟ್ಯಾಂಪ್ ಡ್ಯೂಟಿ, ಅಬಕಾರಿಗೆ ಅತಿ ಹೆಚ್ಚು ತೆರಿಗೆ ಹಾಕಿದ್ದು, ಇದರಿಂದ ಹಾಲು, ನೀರು ಜನಸಾಮಾನ್ಯರು ಬಳಕೆ  ಮಾಡುವ ವಸ್ತುಗಳು ದುಬಾರಿಯಾಗಿವೆ.  ಇದೊಂದು ತೆರಿಗೆ ಭಾರ ಹಾಕಿರುವ  ಜನ ವಿರೋಧಿ ಸರ್ಕಾರ ಎನ್ನುವುದು ಸ್ಪಷ್ಟವಾಗಿದೆ. 

ಈ ಸಂದರ್ಭದಲ್ಲಿ ಸಿಎಂ   ಸಿದ್ದರಾಮಯ್ಯ ಅವರು ತಾವು ಹಾಕಿರುವ ತೆರಿಗೆಗಳನ್ನು ಕಡಿಮೆ ಮಾಡುತ್ತಾರೆಯೇ ಎಂಬ ಪ್ರಶ್ನೆಯನ್ನು ಜನ ಸಾಮಾನ್ಯರು ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button