ಹಣಮಂತ ನರಿಬೋಳ ಗೆ ರಾಜೋತ್ಸವ ಪ್ರಶಸ್ತಿ ನೀಡಿ
ಜೇವರ್ಗಿಯ ತಬಲಾವಾದಕ ಹಣಮಂತ ನರಿಬೋಳರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಬಸವರಾಜ ಕಟ್ಟಿ ಮನವಿ ಆಗ್ರಹ

ಜೇವರ್ಗಿ: ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಹಿರಿಯ ತಬಲಾವಾದಕ ಹಣಮಂತಪ್ಪ ನರಿಬೋಳ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಗ್ರಹಿಸಿ, ಕರ್ನಾಟಕ ರಾಜ್ಯ ಸಾಕ್ಷರತಾ ಪ್ರೇರಕರ ಮತ್ತು ಸಂಯೋಜಕರ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಕಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬಸವರಾಜ ಕಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ: “ಹಣಮಂತಪ್ಪ ನರಿಬೋಳ ಅವರು ಅಲೇಮಾರಿ ಜನಾಂಗದ ಬಡ ಕುಟುಂಬದಲ್ಲಿ ಜನಿಸಿ ಅನೇಕ ಸಂಕಷ್ಟಗಳ ನಡುವೆ ಕಲೆಗಾಗಿ ಜೀವವನ್ನೇ ಅರ್ಪಿಸಿದ್ದಾರೆ. ತಮ್ಮ ಕೇವಲ 14ನೇ ವಯಸ್ಸಿನಲ್ಲಿ ತಬಲಾ ಕಲೆಯನ್ನು ಕಲಿತು ಕಳೆದ 70 ವರ್ಷಗಳಿಂದ ನಾಟಕ, ಬಯಲಾಟ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಾಕ್ಷರತಾ ಚಳವಳಿಯ ಅಂಗವಾಗಿ ಬೀದಿ ನಾಟಕಗಳ ಮೂಲಕ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಲು ಶ್ರಮಿಸಿದ್ದಾರೆ” ಎಂದು ಹೇಳಿದರು.
ಅವರು ಮುಂದುವರಿಸಿ, “ರಂಗಭೂಮಿ ಕಲಾವಿದರ ಉಳಿವಿಗಾಗಿ ಹಣಮಂತ ನರಿಬೋಳ ಅವರು ನಿರಂತರ ಸೇವೆ ಸಲ್ಲಿಸಿದ್ದಾರೆ. ಇಂತಹ ನಿಸ್ವಾರ್ಥ ರಂಗಕಲಾವಿದರಿಗೆ ಸರ್ಕಾರದಿಂದ ಗೌರವ ಸಿಗುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಹಣಮಂತ ನರಿಬೋಳ ಅವರನ್ನು ಆಯ್ಕೆ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.



