ಕಲಬುರಗಿಜಿಲ್ಲಾಸುದ್ದಿ
ಡಾ. ಶರಣಬಸಪ್ಪ ಕ್ಯಾತನಳರಿಗೆ ನೌಕರರ ಸಂಘದಿಂದ ಸನ್ಮಾನ

ಕಲಬುರಗಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್–2 ಗ್ರೂಪ್–ಡಿ ನೌಕರರ ಸಂಘ (ರಿ) ಕಲಬುರಗಿ ಘಟಕದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಳ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಗುತ್ತೆದಾರ, ಪ್ರಧಾನ ಕಾರ್ಯದರ್ಶಿ ಮಹೇಶ ಅಂಬಲಗಿ ಸೇರಿದಂತೆ ಭಗವಂತ ತೆಲಗಬಾಳ, ಕಿರ್ತಿರಾಜ, ಶಶಿಕಲಾ, ರೇಖಾ, ಸೌಮ್ಯ, ಗುರುಸ್ವಾಮಿ, ಅನಿಲ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸುಗಮವಾಗಿ ಜರುಗಿದ್ದು, ನೌಕರರು ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆಡಳಿತದೊಂದಿಗೆ ಸಮನ್ವಯತೆಯಿಂದ ಮುಂದುವರಿಯುವ ಸಂಕಲ್ಪ ವ್ಯಕ್ತಪಡಿಸಿದರು.



