ಜಿಲ್ಲಾಸುದ್ದಿ

ರಾಜ್ಯೋತ್ಸವ ಪ್ರಶಸ್ತಿ ನೀಡಲು ಮನವಿ

ಚಿತ್ತಾಪುರ: ಬಯಲಾಟ, ಹಗಲುವೇಷ ಬಹುಮುಖ ಪ್ರತಿಭೆಯುಳ್ಳ ಕಲಾವಿದರು ಈರಣ್ಣ ರುದ್ರಾಕ್ಷಿ ಅವರ ಸಾಧನೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಬುಡಗ ಜಂಗಮ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಶಿರವಾಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಬಾಳೆಗಡ್ಡೆ ಗ್ರಾಮದ ಈರಣ್ಣ ರುದ್ರಾಕ್ಷಿ ಬಯಲಾಟ, ಹಗಲುವೇಷದಲ್ಲಿ ಆನೇಕ ಬಹುಮುಖ ಪ್ರತಿಭೆಯುಳ್ಳ ಕಲಾವಿದರಾಗಿದ್ದು ಇವರು ಸುಮಾರು 50ಕ್ಕೂ ಅಧಿಕ ವರ್ಷಗಳಿಂದ ಅನೇಕ ಹಳ್ಳಿಗಳಲ್ಲಿ ತಿರುಗಿ ಹಗಲುವೇಷದ ಮೂಲಕ ಸಂಗೊಳ್ಳಿರಾಯಣ್ಣ, ಸಿಂಧೂರ ಲಕ್ಷಣ, ಜಕಾಸುರನವಥೆ ಮುಂತಾದ ಆಟಗಳನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯೋತ್ಸವ, ಹಂಪಿ ಉತ್ಸವ, ಮೈಸೂರು ದಸರಾ ವಿಶ್ವ ಕನ್ನಡ ಸಮ್ಮೇಳನ ಹೀಗೆ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಇವರ ಸೇವೆಯನ್ನು ಗುರುತಿಸಿ 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹೇಳಿದರು.

ಅಲೆಮಾರಿ ಬೇಡ ಜಂಗಮ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ್ ರುದ್ರಾಕ್ಷಿ ಮಾತನಾಡಿ, ಈರಣ್ಣ ರುದ್ರಾಕ್ಷಿ ಅವರು ಸುಮಾರು ರಾಜ್ಯಗಳಲ್ಲಿ ಸುತ್ತಾಡಿ ಕಟ್ಟ ಕಡೆಯ ಬುಡಗ ಜಂಗಮರ ಬಯಲಾಟ, ಹಗಲುವೇಷದ ಮೂಲಕ ಈ ದೇಶದ ಕಲೆ, ಸಂಸ್ಕೃತಿ ಎತ್ತಿ ಹಿಡಿದಿದ್ದರಿಂದ ಈರಣ್ಣ ರುದ್ರಾಕ್ಷಿ ಅವರಿಗೆ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಹೀಗೆ ಸುಮಾರು 40ಕ್ಕೂ ಅಧಿಕ ಪ್ರಶಸ್ತಿಗಳು ಸಂದಿದ್ದರೂ ರಾಜ್ಯೋತ್ಸವ ಪ್ರಶಸ್ತಿ ದೊರೆತಿಲ್ಲ, ಅವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವರು ಅವರ ಸಾಧನೆಯನ್ನು ಗಮನಿಸಿ ಸರ್ಕಾರವೇ 2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಕೋರಿದರು.

ಕಲಾವಿದ ಈರಣ್ಣ ರುದ್ರಾಕ್ಷಿ ಮಾತನಾಡಿ ನಾನು ಮೂಲತಃ ಹಗಲುವೇಷ ಬುಡ್ಗಜಂಗಮ ಸಮುದಾಯಗಳು ಅಲೆಮಾರಿಗಳಾಗಿದ್ದರೂ, ದೇಶದ ಐತಿಹಾಸಿಕ ಹಿನ್ನೆಲೆ ಹಾಗೂ ಪ್ರಾಚೀನ ಕಾಲದಿಂದಲೂ ಜನಮನದಲ್ಲಿ ಸದಾ ಅಚ್ಚು ಉಳಿಯುವಂತಿರುವ ಹಗಲುವೇಷ ಕಲಾ ಪ್ರದರ್ಶನ ಉಳಿಯಬೇಕು ಎಂಬ ಹಿತದೃಷ್ಟಿಯಿಂದ ಭೀಮಾಂಜನೇಯ ಯುದ್ಧ ಮೋಹಿನಿ ಭಸ್ಮಾಸೂರ, ಜಟಾಶೂರ ವಧೆ, ಕಂಸನ ವಧೆ, ಸುಂದ-ಉಪಸುಂದ, ರಾಮಾಯಣ, ಮಹಾಭಾರತ ಪೌರಾಣಿಕ ಪ್ರದರ್ಶನ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯುಳ್ಳ ಸಿಂಧೂರ ಲಕ್ಷ್ಮಣ, ವೀರ ಸಂಗೊಳ್ಳಿ ರಾಯಣ್ಣದಂತಹ ಪ್ರದರ್ಶನಗಳಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವೆ ನನ್ನ ಸಾಧನೆ ಸರ್ಕಾರ ಗುರುತಿಸಲಿ ಎಂದು ಮನವಿ ಮಾಡಿಕೊಂಡರು.

Related Articles

Leave a Reply

Your email address will not be published. Required fields are marked *

Back to top button