ಕಲಬುರಗಿಜಿಲ್ಲಾಸುದ್ದಿ
ಗ್ರಾಪಂ ಅಧ್ಯಕ್ಷೆಯ ಪತಿ ನೀಲಕಂಠ ಬಿರಾದಾರ ವಿರುದ್ಧ ಗಂಭೀರ ಆರೋಪ – ಕವಲಗಾ ‘ಬಿ’ ಗ್ರಾಮ ಪಂಚಾಯಿತಿ ಸದಸ್ಯರಿಂದ ದೂರು

ಕಲಬುರಗಿ: ತಾಲೂಕಿನ ಕವಲಗಾ ‘ಬಿ’ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆಯ ಪತಿ ನೀಲಕಂಠ ಬಿರಾದಾರ ವಿರುದ್ಧ ಸದಸ್ಯರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಸದಸ್ಯರ ಪ್ರಕಾರ, ನೀಲಕಂಠ ಬಿರಾದಾರ ತಮ್ಮ ಪತ್ನಿಯ ಅಧ್ಯಕ್ಷೆಯ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ಪಂಚಾಯಿತಿ ಕಾರ್ಯಗಳಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸದಸ್ಯರ ಗೌರವಧನದ ಚೆಕ್‌ಗಳನ್ನು ಸಹ ತಮ್ಮ ಬಳಿಯೇ ಇಟ್ಟುಕೊಂಡು, ಪ್ರತಿಯೊಬ್ಬ ಸದಸ್ಯರಿಂದ ರೂ.2,000 ರೂಪಾಯಿ ಬೇಡಿಕೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ, ಗುರುವಾರ ಕೆಲವು ಸದಸ್ಯರು ತಾಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿ ನೀಲಕಂಠ ಬಿರಾದಾರ ಹಾಗೂ ಅವರ ಪತ್ನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಸದಸ್ಯರ ಆರೋಪಗಳ ಹಿನ್ನೆಲೆಯಲ್ಲಿ ಪಂಚಾಯಿತಿ ವಲಯದಲ್ಲಿ ಚರ್ಚೆ ಜೋರಾಗಿದೆ. ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.